ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ದಿನೋತ್ಸವ ಕಾರ್ಯಕ್ರಮ ನಡೆಯಿತು.
ಕುವೆಂಪುರವರು ಪ್ರತಿಪಾದಿಸಿದ ‘ವಿಶ್ವಮಾನವ’ ಸಂದೇಶ ಸಮಾಜದಲ್ಲಿ ಜಾತಿ, ಮತ, ಕುಲ ಬೇಧಬಾವ ಹೊರಗಿಟ್ಟು ಎಲ್ಲರೂ ಒಂದೇ ಎಂಬ ಮಾನವೀಯ ಮೌಲ್ಯ ಸಾರಿದರು. ಉದಾತ್ತ ಚಿಂತನೆಗಳು ಸ್ಥಿರಸ್ತಾಯಿಯಾಗಿದ್ದು ಅಸಾಮಾತೆ, ಮೌಢ್ಯದ ವಿರುದ್ಧ ಧನಿ ಎತ್ತಿದವರು. ಇದಷ್ಟೇ ಅಲ್ಲದೇ ಸಮಾಜಿಕವಾಗಿ ‘ವಿಚಾರಕ್ರಾಂತಿಗೆ’ ಆಹ್ವಾನ ನೀಡಿ, ಇಂದಿಗೂ ಪ್ರಸ್ತುತರಾಗಿದ್ದಾರೆ.

ಬರವಣಿಗೆ ಮೂಲಕ ಸಂದೇಶ ಸಾರುವುದಲ್ಲದೆ, ಮಂತ್ರ ಮಾಂಗಲ್ಯ ಮೂಲಕ ಸರಳ ವೈವಾಹಿಕ ಜೀವನಕ್ಕೆ ನಾಂದಿ ಹಾಡುವುದರ ಮೂಲಕ ತಮ್ಮದೇ ಆದ ಸಂದೇಶ ನೀಡಿದ ಕುವೆಂಪು ಅವರ ವಿಚಾರಗಳು ಬಹಳ ಮೌಲ್ಯಯುತವಾದವು. ಇಂತಹ ಕಾರ್ಯಕ್ರಮ ಪ್ರಸಾರಂಗ ವಿಭಾಗದಿಂದ ನಡೆಯಿತು. ಕುಲಪತಿಗಳಾದ ಪ್ರೊ. ಎನ್.ಕೆ. ಲೋಕನಾಥ್ ಉದ್ಘಾಟನೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಮೈಶುಗರ್ ಭ್ರಷ್ಟಾಚಾರ; ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ರೈತ ಸಂಘ
ಕಾರ್ಯಕ್ರಮದಲ್ಲಿ ವಿದ್ವಾಂಸ ಹಾಗೂ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ರಾಮೇಗೌಡ(ರಾಗೌ), ಪ್ರಸಾರಂಗ ನಿರ್ದೇಶಕ ಪ್ರೊ. ನಂಜಯ್ಯ ಹೊಂಗನೂರು, ಜನಪದ ಗಾಯಕ ಡಾ. ಅಮ್ಮ ರಾಮಚಂದ್ರ, ಜನಪದ ಕಲಾವಿದ ಡಾ. ಸುಂದರೇಶ್ ಸೇರಿದಂತೆ ಇನ್ನಿತರರು ಇದ್ದರು.





