ಮೈಸೂರು | ನೆರೆಹೊರೆಯವರ ಸಂಬಂಧ ಅತ್ಯಂತ ಮಹತ್ವದ್ದು: ಜನಾಬ್ ಅಕ್ಬರ್ ಆಲಿ

Date:

ಮೈಸೂರಿನ ನಜರ್ ಬಾದ್ ನಲ್ಲಿರುವ ಹೋಟೆಲ್ ಪೋರ್ಚ್ಯೂನ್ ಜೆ ಪಿ ಪ್ಯಾಲೇಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ನ ರಾಜ್ಯ ಕಾರ್ಯದರ್ಶಿ ಜನಾಬ್ ಅಕ್ಬರ್ ಆಲಿ, ಸಬಂಧಗಳಲ್ಲಿ ಅತ್ಯಂತ ಮಹತ್ವದ ಸಂಬಂಧ ಎಂದರೆ ಅದುವೇ ನೆರೆಹೊರೆಯವರ ಸಂಬಂಧ ಎಂದು ಬಣ್ಣಿಸಿದರು.

“ಮನುಷ್ಯನು ಒಬ್ಬ ಸಾಮೂಹಿಕ ಜೀವಿಯಾಗಿದ್ದಾನೆ. ಮನುಷ್ಯನನ್ನು ಇತರೆ ಜೀವಿಗಳಿಗಿಂತ ಭಿನ್ನವಾಗಿಸಿರುವುದು ಅವನಲ್ಲಿರುವ ಸಾಮಾಜಿಕ ಪ್ರಜ್ಞೆಯಾಗಿದೆ. ತನ್ನ ಜೊತೆಗಿರುವ ಜನರೊಂದಿಗೆ, ಪರಿಸರದೊಂದಿಗೆ, ಇತರೆ ಸಹ ಜೀವಿಗಳೊಂದಿಗೆ ಅವನಿಗೆ ಹಲವಾರು ಹೊಣೆಗಾರಿಕೆಗಳಿವೆ. ಒಟ್ಟಿನಲ್ಲಿ ಎಲ್ಲಾ ಮಾನವರ ಬದುಕಿನ ಅಡಿಪಾಯ ‘ಸಂಬಂಧ’. ಸಂಬಂಧಗಳಲ್ಲಿ ಅತ್ಯಂತ ಮಹತ್ವದ ಸಂಬಂಧ ನೆರೆಹೊರೆಯವರ ಸಂಬಂಧವಾಗಿದೆ”.

ಇದೊಂದು ಅಪೂರ್ವ ಮತ್ತು ಪ್ರಬಲವಾದ ಸಂಬಂಧವಾಗಿದೆ. ಮಾನವನು ಒಂಟಿ ಮನೆಯಲ್ಲಿ ಇರುವುದರ ಬದಲು ಮಾನವರು ನೆಲೆಸಿರುವ ಗ್ರಾಮ ಅಥವಾ ಪಟ್ಟಣಗಳಲ್ಲಿ ನೆಲೆಸುವುದನ್ನು ಇಷ್ಟಪಡುತ್ತಾನೆ. ನೆರೆಹೊರೆಯವರ ಕುಟುಂಬ ಬೇರೆಯಾಗಿರಬಹುದು, ಅವರ ಭಾಷೆ, ಕುಲ, ಗೋತ್ರ ಮತ್ತು ಧರ್ಮ ಎಲ್ಲವೂ ಪರಸ್ಪರ ಭಿನ್ನವಾಗಿರಬಹುದು, ಆದಾಗಿಯೂ ಕೇವಲ ನೆರೆಹೊರೆಯ ಸಂಬಂಧವೆನ್ನುವುದು ಬಹಳ ನಿಕಟ ಸಂಬಂಧವಾಗಿ ಬಿಡುತ್ತದೆ. ಈ ಸಂಬಂಧದಲ್ಲಿ ಬಹಳ ಅನೋನ್ಯತೆ ಮತ್ತು ಪರಸ್ಪರ ವಿಶ್ವಾಸ ಕಂಡು ಬರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನೆರೆಹೊರೆಯ ಸಂಬಂಧ ಆರೋಗ್ಯಕರವಾಗಿದ್ದರೆ, ಆ ಸಮಾಜವು ಆರೋಗ್ಯಕರವಾಗಿರುವುದು. ನೆರೆಹೊರೆಯವರು ಪ್ರೀತಿ-ವಿಶ್ವಾಸ, ಸಹಕಾರ, ಸೌಹಾರ್ಧ ಮನೋಭಾವದಿಂದ ವರ್ತಿಸಿದರೆ ಸಮಾಜದಲ್ಲಿ ಸೌಹಾರ್ದ, ಸಹಕಾರಗಳು ನೆಲೆಗೊಳ್ಳುತ್ತವೆ. ನೆರೆಹೊರೆಯವರೊಂದಿಗೆ ಕೋಪ, ದ್ವೇಷದಿಂದ ಇರುವುದೆಂದರೆ ಆ ಸಮಾಜದಲ್ಲಿ ಎಂದೂ ಶಾಂತಿ, ಸೌಹಾರ್ದವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಅಭಿವೃದ್ಧಿಯೂ ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ದೊಡ್ಡ ನಗರಗಳಲ್ಲಿ ಖಾಸಗೀತನಕ್ಕೆ ಸಿಕ್ಕಿರುವ ಅತಿಯಾದ ಮಹತ್ವದ ಕಾರಣದಿಂದಾಗಿ ನೆರೆಹೊರೆಯವರು ಮತ್ತು ಅವರ ಹಕ್ಕುಗಳ ಬಗ್ಗೆ ತೀವ್ರ ನಿರ್ಲಕ್ಷವನ್ನು ತೋರಲಾಗುತ್ತಿದೆ. ಇದರಿಂದ, ಈ ವಿಷಯದಲ್ಲಿ ಜನರ ಮಧ್ಯೆ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ”.

ಸಂಬಂಧ ಬಲಿಷ್ಠವಾಗಬೇಕಾದರೆ ನಮ್ಮ ಮಧ್ಯೆ ಇರುವ ಅಡ್ಡಗೋಡೆಗಳನ್ನು ಒಡೆದರೆ ಮಾತ್ರ ಸಾಧ್ಯವಾಗುತ್ತದೆ. ಆದರೆ, ಇಂದು ಈ ಮಾನವೀಯ ಸಂಬಂಧಗಳು ನಿಧಾನವಾಗಿ ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಮನುಷ್ಯ ತಾನು, ತನ್ನದು ಎಂಬ ಸಂಕುಚಿತಭಾವ ಬೆಳಸಿಕೊಂಡು, ತನ್ನಲ್ಲೇ ಕೇಂದ್ರೀಕೃತನಾಗುತ್ತಿದ್ದಾನೆ. ಇಸ್ಲಾಮಿನಲ್ಲಿ ನೆರೆಹೊರೆಯವರ ಹಕ್ಕುಗಳಿಗೆ ಬಹಳ ಪ್ರಾಧಾನ್ಯತೆ ಇದೆ. ಪವಿತ್ರ ಕುರ್‌ಆನಿನಲ್ಲಿ ಸ್ಪಷ್ಟವಾಗಿ ಹೀಗೆ ಆದೇಶಿಸಲಾಗಿದೆ, ‘ಆಪ್ತರಾದ ನೆರೆಹೊರೆಯವರೊಂದಿಗೂ ಅಪರಿಚಿತ ನೆರೆಹೊರೆಯವರೊಂದಿಗೂ ಉತ್ತಮ ರೀತಿಯಿಂದ ವರ್ತಿಸಿರಿ’ (ಅನ್ನಿಸಾ:36) ಪ್ರವಾದಿ ವಚನಗಳಲ್ಲಿ ನೆರೆಹೊರೆಯವರೊಂದಿಗೆ ಅತ್ಯುತ್ತಮ ರೀತಿಯಲ್ಲಿ ವ್ಯವಹರಿಸುವುದು, ವಿಶ್ವಾಸದ ಕಡ್ಡಾಯ ಭಾಗವಾಗಿದೆ ಎನ್ನಲಾಗಿದೆ.

ಯಾರು ಸತ್ಯವಿಶ್ವಾಸಿಯಲ್ಲ ಎಂಬ ಪ್ರಶ್ನೆಗೆ ಪ್ರವಾದಿ(ಸ)ಯವರು ಹೇಳಿದ ಮಾತು ‘ಯಾರ ಕಾರಣದಿಂದಾಗಿ ನೆರೆಹೊರೆಯ ವ್ಯಕ್ತಿಯು ಸುರಕ್ಷಿತನಲ್ಲವೋ ಅಂತಹ ವ್ಯಕ್ತಿ ಸತ್ಯವಿಶ್ವಾಸಿಯಲ್ಲ’ ಎಂದು ಉತ್ತರಿಸಿದ್ದಾರೆ. ಸಮಾಜದ ಮುಂದೆ ನೆರೆಹೊರೆಯವರ ಹಕ್ಕುಗಳ ಅತ್ಯುತ್ತಮ ಮಾದರಿಯನ್ನು ಪ್ರಸ್ತುತಪಡಿಸುವುದು, ಪರಸ್ಪರರ ಬಗ್ಗೆ ಕಾಳಜಿ, ಸಹಕಾರ, ಶಿಸ್ತು, ಶುಚಿತ್ವ ಮತ್ತಿತರ ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸಲು ಪ್ರೇರೇಪಿಸುವುದು, ನೆರೆಹೊರೆಯವರ ಮಧ್ಯೆ ಇರುವ ಅಂತರವನ್ನು ನೀಗಿಸಿ ಅವರ ಮಧ್ಯೆ ಸೌಹಾರ್ದ ಸಂಬಂಧ ಬೆಳೆಯುವಂತೆ ಮಾಡುವುದು ಬಹುಮುಖ್ಯ ಕರ್ತವ್ಯ.

ದಾರಿಹೋಕರು, ಸಹೋದ್ಯೋಗಿಗಳು, ಪ್ರಯಾಣಿಕರು, ರಸ್ತೆಯ ನಿಯಮಗಳು, ವಾಹನ ಸಂಚಾರದ ನಿಯಮಗಳ ಬಗ್ಗೆ ಕಾಳಜಿ ಉಳ್ಳವರಾಗಿ ಮಾಡುವುದು ಮುಂತಾದ ಮಹೋನ್ನತ ಉದ್ದೇಶಗಳನ್ನು ಮುಂದಿಟ್ಟು ಜಮಾಅತೆ ಇಸ್ಲಾಮೀ ಹಿಂದ್ ‘ಮಾದರಿ ನೆರೆಹೊರೆ, ಮಾದರಿ ಸಮಾಜ’ ಎಂಬ ಶೀರ್ಷಿಕೆ ಅಡಿಯಲ್ಲಿ ನೆರೆಹೊರೆಯವರ ಹಕ್ಕುಗಳ ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ಈ ತಿಂಗಳು ನವೆಂಬರ್ 21, 2025 ರಿಂದ 30ರ ವರೆಗೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಅಭಿಯಾನದ ಪ್ರಯುಕ್ತ ಪ್ರವಚನ, ಮೊಹಲ್ಲಾ ಸಭೆಗಳು, ಕರಪತ್ರ ವಿತರಣೆ, ಕೌಟುಂಬಿಕ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮ, ಟ್ರಾಫಿಕ್ ನಿಯಮಗಳ ಜಾಗೃತಿ ಸಮಾವೇಶ ಹಾಗೂ ವಿದ್ಯಾರ್ಥಿ ಯುವಕರ ರ್ಯಾಲಿ ಮುಂತಾದ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಎಂದು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಜಿಲ್ಲೆಯಾದ್ಯಂತ ಭತ್ತ, ರಾಗಿ, ಜೋಳ ಖರೀದಿ ಕೇಂದ್ರ ತೆರೆಯುವಂತೆ ರೈತ ಸಂಘದ ಒತ್ತಾಯ

ಪತ್ರಿಕಾಗೋಷ್ಠಿಯಲ್ಲಿ ವಲಯ ಸಂಚಾಲಕ ಜನಾಬ್ ಅಬ್ದುಸ್ಸಲ್ಲಾಮ್ ಯು, ಅಬ್ದುಲ್ ಖಾದಿರ್, ಮೊಹಮ್ಮದ್ ಅಸ್ಲಮ್, ವಸಿಮ್ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...