ಉಡುಪಿ | ಪರಿಸರ ಹದಗೆಡುತ್ತಿದೆ, ಉಡುಪಿಯಲ್ಲಿ ಮಾಸ್ಕ್ ಅನಿವಾರ್ಯ : ಪ್ರೇಮಾನಂದ ಕಲ್ಮಾಡಿ ಎಚ್ಚರಿಕೆ

Date:

ಸುಂದರ ಕರಾವಳಿಯ ಉಡುಪಿ ಜಿಲ್ಲೆಯ ವಾಯು ಗುಣಮಟ್ಟ ದಿನೇದಿನೇ ಹದಗೆಡುತ್ತಿದ್ದು, ವಾಯುಮಾಲಿನ್ಯ ಸೂಚ್ಯಂಕ (AQI) 80 ಕ್ಕೂ ಹೆಚ್ಚು ಮಟ್ಟ ತಲುಪಿರುವ ಈ ಸಂದರ್ಭದಲ್ಲಿ, ದಿನನಿತ್ಯದ ಬದುಕಿನಲ್ಲಿ ಮಾಸ್ಕ್ ಧರಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ ಎಚ್ಚರಿಸಿದ್ದಾರೆ.

ತದಸ್

ಉಡುಪಿಯ ಮಣಿಪಾಲ್‌ ಇನ್‌ ನಲ್ಲಿ “ಪರಿಸರ ಉಳಿಸಿ, ಉಡುಪಿ ಬೆಳೆಸಿ” ಎಂಬ ವಿಷಯದಡಿ ನಡೆದ ದುಂಡು ಮೇಜಿನ ಚರ್ಚೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ವಾಯು ಮಾಲಿನ್ಯ ಏರಿಕೆ, ನೀರಿನ ಮಟ್ಟ ಕುಸಿತ, ತ್ಯಾಜ್ಯ ವಿಲೇವಾರಿಯ ಸಮಸ್ಯೆ ಮತ್ತು ಮೀನುಗಾರಿಕೆಯಲ್ಲಿ ಇಳಿಮುಖವಾದ ಉತ್ಪಾದನೆ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು.

ನಿಯಂತ್ರಣವಿಲ್ಲದ ರೆಸಾರ್ಟ್‌ಗಳ ವಿಸ್ತರಣೆ ಪರಿಸರ ವ್ಯವಸ್ಥೆಗೆ ದೊಡ್ಡ ಹಾನಿ ಮಾಡುತ್ತಿದೆ. CRZ–3 ನಿಂದ CRZ–2 ಗೆ ಮಾನದಂಡ ಬದಲಾವಣೆಯು ಸಮುದ್ರ ಪರಿಸರಕ್ಕೆ ಒಳಿತಲ್ಲ. ಹಲವೆಡೆ ಬಾವಿಗಳ ತಾಜಾ ನೀರು ಉಪ್ಪು ನೀರಿನ ನುಗ್ಗುವಿಕೆಯಿಂದ ಹಾಳಾಗುವ ಅಪಾಯ ಎದುರಾಗಿದೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೊಡಚಾದ್ರಿ ಕೇಬಲ್ ಕಾರ್‌ ಮೊದಲಾದ ಪರಿಸರಕ್ಕೆ ಹೊಂದಿಕೊಳ್ಳದ ಯೋಜನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಪಂಚಾಯಿತಿ ಮಟ್ಟದಿಂದ ನಗರಸಭೆ ಮಟ್ಟದವರೆಗೆ ಪ್ರಾಯೋಗಿಕ ಸಸ್ಥಿರ ಉಡುಪಿ ಕಾರ್ಯಪಥ ರೂಪಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.

ರದ್ತರಸದ

ಅಭಿಯಾನದ ಸಂಯೋಜಕ ನಿಹಾಲ್ ಕಿದಿಯೂರು ರವೀಂದ್ರನಾಥ ಟಗೋರ್‌ ರವರ ಕವನವನ್ನು ಉಲ್ಲೇಖಿಸಿ, ನಾವು ಮಾಡಬೇಕಾದ ಜವಾಬ್ದಾರಿಯನ್ನು ಸಮಾಜದ ಮೇಲಕ್ಕೆ ಹರಿಸಿ ಬಿಡಲಾಗುತ್ತಿರುವ ಪ್ರವೃತ್ತಿಯೇ ಈ ಸಂಕಷ್ಟಕ್ಕೆ ಕಾರಣವೆಂದು ಅವರು ಎಚ್ಚರಿಸಿದ್ದರು. ಸಮಾಜವೇ ತನ್ನ ಕಲ್ಯಾಣಕ್ಕೆ ಜವಾಬ್ದಾರಿಯಾಗಬೇಕಾದ ಸಂದರ್ಭದಲ್ಲಿ, ಜನರು ತಮ್ಮ ಹೊಣೆಗಾರಿಕೆಯನ್ನು ಸಮಾಜದ ಮೇಲೆ ತಳ್ಳುತ್ತಿರುವುದನ್ನು ಟಾಗೋರ್‌ ಟೀಕಿಸಿದ್ದರು. ಈ ಮನೋಭಾವವನ್ನು ಪುನರ್‌ಸ್ಮರಿಸಿಕೊಂಡು, ಪರಿಸರದ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರದ್ದೇ ಆಗಿದ್ದು, ನಮ್ಮ ನೆರೆಹೊರೆಯೇ ಪರಿಸರ ಸಮಸ್ಯೆಗಳ ವಿರುದ್ದ ಜಾಗೃತಿಯಿಂದ ಹೋರಾಡುವ ಮನೋಭಾವ ಹೊಂದಿರಬೇಕು ಎಂದು ಹೇಳಿದರು.

ಪ್ರೊ. ಅಬ್ದುಲ್ ಅಝೀಝ್ ಅವರು ಸಭೆಯಲ್ಲಿ “ಸಸ್ಥಿರ ಉಡುಪಿ”ಗಾಗಿ ತಯಾರಿಸಿದ ರಸ್ತೆನಕ್ಷೆ ಮತ್ತು ಕಾರ್ಯಪಥವನ್ನು ಪರಿಚಯಿಸಿ, ಈ ಚರ್ಚೆಯನ್ನು ಮುಂದುವರಿಸಿ ಪೂರ್ಣ ಪ್ರಮಾಣದ ಪರಿಸರ ಚಳವಳಿಯನ್ನಾಗಿ ರೂಪಿಸುವುದಾಗಿ ತಿಳಿಸಿದರು.

WhatsApp Image 2025 11 25 at 10.06.21 PM

ಉಡುಪಿಯಲ್ಲಿ ಪರಿಸರ ಸಂರಕ್ಷಣೆಗಾಗಿ ಸೇವೆ ಸಲ್ಲಿಸಿದ ಸಮಾಜಸೇವಕ ನಿತ್ಯಾನಂದ ಓಳಕಾಡು, ಸಂತೋಷ ಕೆಮ್ಮಣ್ಣು, ನಮನ ಶ್ರೀ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ರಾಷ್ಟ್ರ ಮಟ್ಟದ ‘ಆದರ್ಶ ನೆರೆಹೊರೆಯ’ ಅಭಿಯಾನದ ಅಂಗವಾಗಿ ನಡೆಸಿದ ಈ ಚರ್ಚೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ವಿಚಾರ ವಿನಿಮಯ ನಡೆಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...