ಉಡುಪಿ | ಮರಳಿ ಮನೆ ಸೇರಿದ 101 ವರ್ಷದ ಅಜ್ಜಿ, ನಿತ್ಯಾನಂದ ಒಳಕಾಡುರವರ ಮಾನವೀಯ ಸೇವೆಗೊಂದು ಸಲಾಂ

Date:

ಪ್ರವಾಸಿ ಸ್ಥಳವಾದ ಉಡುಪಿ ನಗರಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ಉಡುಪಿಯ ಕೃಷ್ಣ ಮಠಕ್ಕೆ ಬರುವ ಭಕ್ತಾದಿಗಳು ಒಂದು‌ ಕಡೆಯಾದರೆ ಮಲ್ಪೆ ಕಡಲು ತೀರ ವೀಕ್ಷಿಸಲು ಪ್ರವಾಸಿಗರು ಸಹ ತುಸು ಹೆಚ್ಚೆ, ಕಳೆದ ಎರಡು ತಿಂಗಳ‌ ಹಿಂದೆ ಇಬ್ಬರು ಅಪ್ರಾಪ್ತ ವಯಸ್ಸಿನ ಮರಿಮಕ್ಕಳ ಜೊತೆ ನೂರು ವರ್ಷ ಪ್ರಾಯದ ಇಳಿ ವಯಸ್ಸಿನ ಅಜ್ಜಿ ತನ್ನ ಮೊಮ್ಮಗನನ್ನು ಹುಡುಕಿಕೊಂಡು ದೂರದ ಬಾಗಲಕೋಟೆಯಿಂದ ಉಡುಪಿಗೆ ಬಂದು ಅಸಾಹಿಕ ಸ್ಥಿತಿಯಲ್ಲಿ‌ ಇದ್ದದ್ದನು ಕಂಡು ಉಡುಪಿಯ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡುರವರು ಅವರಿಗೆ ಆಸರೆಯನ್ನು ನೀಡಿದ್ದ ಸುದ್ದಿ ಉಡುಪಿಯಾದ್ಯಂತ ಮನೆ ಮಾತಾಗಿತ್ತು ಇದೀಗ ಆ 101 ವರ್ಷದ ಅಜ್ಜಿ ಮನೆ ಮಂದಿಯನ್ನು ಸೇರಿದ್ದಾರೆ ಇದಕ್ಕೆ ಶ್ರಮಿಸಿದರ ಸಮಾಜ ಸೇವಕ ನಿತ್ಯಾನಂದ ಒಳಕಾಡುರವರ ಮಾನವೀಯ ಸೇವೆಗೆ ಸಲಾಂ ಹೇಳಲೇ ಬೇಕು.

ಕಳೆದ ವರ್ಷದ ನವಂಬರ್ 17 ರಂದು ಶ್ರೀ ಕೃಷ್ಣ ಮಠದ‌ ರಥಬೀದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದಿದ್ದ ಅಪರಿಚಿತ ವೃದ್ಧೆ ಮತ್ತು ಇರ್ವರು ಅಪ್ರಾಪ್ತ ಮಕ್ಕಳನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ರಕ್ಷಿಸಿದ್ದಲ್ಲದೆ, ವೃದ್ಧೆಗೆ ನಗರದ ಕೋರ್ಟ್ ರಸ್ತೆಯಲ್ಲಿರುವ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದರು. ಹಾಗೆಯೇ ಮಕ್ಕಳನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದ್ದರು. ರಕ್ಷಿಸಲ್ಪಟ್ಟವರು ಅಜ್ಜಿ ಮರಿಮೊಮ್ಮಕ್ಕಳಾಗಿದ್ದರು. ಬಾಗಲಕೋಟೆ ಮೂಲದ ಪಕೀರವ್ವ (101), ಹನುಮಂತ (10 ) ಪ್ರೇಮ (16 ) ಎಂದು ತಿಳಿದುಬಂದಿತ್ತು.‌ ಆ ಸಮಯದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಅನುಸಾರ, ಬಾಲಕಿಗೆ ನಿಟ್ಟೂರು ಬಾಲಕೀಯರ ಬಾಲ ಭವನದಲ್ಲಿ ಹಾಗೂ ಬಾಲಕನನ್ನು ದೊಡ್ಡಣಗುಡ್ಡೆಯ ಬಾಲಕರ ಬಾಲ ಭವನದಲ್ಲಿ ತಾತ್ಕಲಿಕ ಪುರ್ನವಸತಿ ಕಲ್ಪಿಸಲಾಗಿತ್ತು. ಇದಾದ ಬಳಿಕ ಬಾಗಲಕೋಟೆ ಶಾಲೆಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾರ್ಗದರ್ಶನದಂತೆ ದಾಖಲುಪಡಿಸಲಾಗಿತ್ತು.

ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಕಳೆದ ನವೆಂಬರ್ ನಲ್ಲಿ ರಥಬೀದಿ ರಾಘವೇಂದ್ರ ಮಠದ ಬಳಿ, ಅಜ್ಜಿ ಇಬ್ಬರು ಮೊಮ್ಮಕ್ಕಳೊಂದಿಗೆ ಅಳುತ್ತಿದ್ದಿರುವುದನ್ನು ಗಮನಿಸಿದೆ ವಿಚಾರಿಸಿದಾಗ, ಮರಿಮೊಮ್ಮಕ್ಕಳ ತಂದೆಯು ಕಳೆದೊಂದು ವರ್ಷದಿಂದ ಮನೆಗೆ ಬಾರದೆ ಕಾಣೆಯಾಗಿದ್ದು, ಮೊಮ್ಮಗನಿಗೆ ಹಡುಕಾಟ ನಡೆಸಲು ಉಡುಪಿಗೆ ಬಂದಿರುವುದಾಗಿ ವೃದ್ಧೆ ಹೇಳಿಕೊಂಡಿದ್ದರು. ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ಅಜ್ಜಿಯ ಮೊಮ್ಮಕ್ಕಳನ್ನು ಬಾಗಲಕೋಟೆಯಿಂದ ಉಡುಪಿಗೆ ಕರೆಸಿಕೊಂಡು, ಪಕೀರವ್ವ ಅವರನ್ನು ಊರಿಗೆ ಕಳುಹಿಸಲಾಗಿದೆ. ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಆಪ್ತ ಸಮಾಲೋಚಕರಾದ ರೋಶನ್ ಕೆ ಅಮೀನ್ ಮತ್ತು ಪೂರ್ಣಿಮಾ ಅವರ ವಿಶೇಷ ಕಾಳಜಿಯಿಂದ 101 ವರ್ಷದ ಫಕಿರವ್ವ ಮನೆ‌ ಸೇರುವಂತಾಯಿತು. ಹೊಸಬದುಕು ಆಶ್ರಮದ ಸಂಚಾಲಕಿ ರಾಜಶ್ರೀ ವೃದ್ಧೆಯ ಆರೈಕೆ ಎರಡು ತಿಂಗಳ ಸನಿಹ ಮಾಡಿದ್ದರು ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಉಡುಪಿಯಲ್ಲಿ ನೂರಾರು ಮಂದಿ ಹೀಗೆ ನಿರ್ಗತಿಗರಾಗಿ ಪ್ರತಿನಿತ್ಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಂತೆ ಮಾರುಕಟ್ಟೆ ಇಂತಹ ಹಲವು ಕಡೆಗಳಲ್ಲಿ ಅಸಹಾಯಕರಾಗಿ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ ಅಂತವರಿಗೆ ನಿತ್ಯಾನಂದ ಒಳಗಾಡಿನಂತವರು ಮಾನವೀಯ ಸೇವೆಗಳನ್ನು ನಿರಂತರ ಒದಗಿಸುತ್ತಿರುತ್ತಾರೆ ಇಂತಹ ಸೇವೆಗಳು ಇನ್ನಷ್ಟು ಹೆಚ್ಚಾಗಲಿ ಎಂದು ಹಾರೈಸೋಣ..

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...