ಉಡುಪಿ | ವಾರಸುದಾರರಿಲ್ಲದ ಶವದ ಅಂತ್ಯಸಂಸ್ಕಾರ

Date:

ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ, ಅಪರಿಚಿತ ಶವದ ವಾರಸುದಾರರು ಪತ್ತೆಯಾಗದೆ ಇರುವುದರಿಂದ‌, ಬೀಡಿನಗುಡ್ಡೆಯ ದಫನಭೂಮಿಯಲ್ಲಿ ದಫನ ಕಾರ್ಯವು ಗೌರವಯುತವಾಗಿ ಬುಧವಾರ ನಡೆಸಲಾಯಿತು. ದಫನ ಕಾರ್ಯವು ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ನೇತ್ರತ್ವದಲ್ಲಿ ಪೋಲಿಸರ ಸಮಕ್ಷಮ ನಡೆಯಿತು. ಮಣಿಪಾಲ ಪೋಲಿಸ್ ಠಾಣೆಯ ಎ ಎಸ್ ಐ ರಾಮ ಪ್ರಭು, ವಿದ್ಯಾ ಟಿ, ಕಾನೂನು ಪ್ರಕ್ರಿಯೆ ನಡೆಸಿದರು. ನಾಗರೀಕ ಸಮಿತಿಯ ಕಾರ್ಯಕರ್ತರಾದ ಹರೀಶ್ ಪೂಜಾರಿ, ಸತೀಶ್ ಕುಮಾರ್ ಭಾಗಿಯಾಗಿದ್ದರು. ಪ್ಲವರ್ ವಿಷ್ಣು, ವಿಕಾಸ್ ಶೆಟ್ಟಿ, ನಗರ ಸಭೆ, ಜಿಲ್ಲಾಸ್ಪತ್ರೆ ಸಹಕರಿಸಿತು.

ಗುರುತು ಪತ್ತೆಹಚ್ಚಲಾಗದಷ್ಟು ಕೊಳೆತಿರುವ‌ ಗಂಡಸಿನ ಕಳೇಬರವೊಂದು, ಹೆರ್ಗ ಗ್ರಾಮದ ಸಣ್ಣಕ್ಕಿಬೆಟ್ಟು, ಕಲಾಭೂಮಿ ಕಟ್ಟಡದ ಹಿಂಬಾಗದ ಹಾಡಿಯಲ್ಲಿ ಡಿ.6 ರಂದು ಪತ್ತೆಯಾಗಿತ್ತು. ಮರದ ಕೊಂಬೆಗೆ ನೇಣುಬಿಗಿದು ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿತ್ತು. ವ್ಯಕ್ತಿ ಮೃತಪಟ್ಟು 20 ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿತ್ತು. ಶವವು ಕೊಳೆತಿರುವುದರಿಂದ‌ ನೇಣುಕುಣಿಕೆಯಲ್ಲಿ ಭಾರ‌ ತಡೆಯಲಾಗದೆ, ದೇಹದಿಂದ ರುಂಡವು ಬೆರ್ಪಟ್ಟಿತ್ತು.‌ ಮಣಿಪಾಲ ಪೋಲಿಸರು ಮಹಜರು ಪ್ರಕ್ರಿಯೆ ನಡೆಸಿ, ಸಮಾಜಸೇವಕ ನಿತ್ಯಾನಂದ‌ ಒಳಕಾಡುವರ ನೆರವು ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವ ರಕ್ಷಣಾ ಘಟಕದಲ್ಲಿ ರಕ್ಷಿಸಿ ಇಟ್ಟಿದ್ದರು. ಶವ ಪತ್ತೆಯಾದ 13 ದಿನಗಳ ಬಳಿಕ ಅಂತ್ಯಸಂಸ್ಕಾರ ನಡೆಯಿತು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...