ಉಡುಪಿ | 15 ವರ್ಷದ ಬಳಿಕ ಮನೆ ಸೇರಿದ ಬೆಳಗಾವಿಯ ವೃದ್ದ

Date:

ರಕ್ಷಿಸಲ್ಪಟ್ಟು ಪುರ್ನವಸತಿ ಪಡೆದಿದ್ದ, ವೃದ್ಧರ ಮನೆ‌ಮಂದಿಯನ್ನು ಪತ್ತೆಗೊಳಿಸಿ, ಹಸ್ತಾಂತರಿಸುವಲ್ಲಿ ಉಡುಪಿಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ಯಶಸ್ವಿಯಾಗಿದೆ. ಕಾರ್ಯಚರಣೆಯಲ್ಲಿ ಆಪ್ತ ಸಮಾಲೋಚಕರಾದ ರೋಶನ್ ಕೆ ಅಮೀನ್, ಪೂರ್ಣಿಮಾ ಭಾಗಿಯಾಗಿದ್ದರು. ವೃದ್ಧರು ಕಳೆದ 15 ವರ್ಷಗಳಿಂದ ಮನೆಯಿಂದ ಹೊರಗುಳಿದಿದ್ದರು. ವೃದ್ಧರ ಹೆಸರು ಮಾದೇಶ‌ ಶಿಂಧೆ, ಬೆಳಗಾವಿಯವರಾಗಿದ್ದರು.

ಬದುಕಿನಲ್ಲಿ ಎದುರಾದ ಅಸಹಾಯಕ ಪರಿಸ್ಥಿತಿಯನ್ನು ಎದುರಿಸಲಾಗದೆ, ಶ್ರೀಕೃಷ್ಣ ಮಠದ‌ ಪರಿಸರದಲ್ಲಿ ಭಿಕ್ಷಾಟನೆಯಿಂದ ಜೀವನ ಸಾಗಿಸುತ್ತಿದ್ದ ಅಪರಿಚಿತ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿದ್ದರು. ಬಳಿಕ‌ವೃದ್ಧರನ್ನು ಕೊರ್ಟ್ ರಸ್ತೆಯಲ್ಲಿರುವ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದರು. ವೃದ್ಧರು ಕಳೆದ ನಾಲ್ಕು ತಿಂಗಳುಗಳಿಂದ ಹೊಸಬದುಕು ಆಶ್ರಮದ ಸಂಚಾಲಕರಾದ ವಿನಯಚಂದ್ರ, ರಾಜಶ್ರೀಯವರ ಶೂಶ್ರೂಸೆ, ಪೋಷಣೆಯಲ್ಲಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...