ಆನ್‌ಲೈನ್ ಬೆಟ್ಟಿಂಗ್ ಮೂಲಕ ಲಕ್ಷಾಂತರ ರೂ. ವಂಚನೆ ನಡೆಸಿದ ಆರೋಪದಡಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಸಿರಿಯಾರ ನಿವಾಸಿ ಪ್ರದೀಪ್ ಹಾಗೂ ಅವನ ತಂಡ “ಪಾರ್ಕರ್” ಅಪ್ಲಿಕೇಶನ್ ಮೂಲಕ ಲಾಭದ ಆಮಿಷವೊಡ್ಡಿ ಪಿರ್ಯಾದುದಾರರಿಂದ ಸುಮಾರು 25 ಲಕ್ಷ ರೂ. ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು, ಬೆಟ್ಟಿಂಗ್‌ನಲ್ಲಿ ಗೆದ್ದ 15 ಲಕ್ಷ ರೂ. ಹಣವನ್ನು ವಾಪಸ್ಸು ನೀಡದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2026 ಅಡಿಯಲ್ಲಿ BNS, ಐಟಿ ಕಾಯ್ದೆ ಹಾಗೂ ಕೆಪಿ ಕಾಯ್ದೆಯ ವಿವಿಧ ಕಲಂಗಳಂತೆ ಪ್ರಕರಣ ದಾಖಲಾಗಿದ್ದು, ರೂಪೇಶ್, ಮನೋಜ್, ಸೃಜನ್ ಶೆಟ್ಟಿ, ರಾಘವೇಂದ್ರ ಮತ್ತು ಕುಶಲ ಅವರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತನಿಖೆ ಮುಂದುವರಿದಿದೆ.





