ಮೈಸೂರು | ಕಬಿನಿ ಜಲಾಶಯ ಹಿನ್ನೀರಿನಲ್ಲಿರುವ ಅಕ್ರಮ ರೆಸಾರ್ಟ್ ತೆರವುಗೊಳಿಸುವಂತೆ ಸಂಘಟನೆಗಳ ಒತ್ತಾಯ

Date:

ಮೈಸೂರು ಹೃದಯವಂತ ಕನ್ನಡಿಗರ ಬಳಗ, ರೈತ ಪರ ಸಂಘಟನೆ ಮತ್ತು ಕರ್ನಾಟಕ ಜೈ ಭೀಮ್ ಸೇನೆಯ ವತಿಯಿಂದ, ಕಬಿನಿ ಜಲಾಶಯದ ಹಿನ್ನೀರಿನಲ್ಲಿರುವ ಅಕ್ರಮ ರೆಸಾರ್ಟ್ ಗಳನ್ನು ತೆರವುಗೊಳಿಸುವಂತೆ ಸಂಘಟನೆಗಳ ಮುಖಂಡರು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದ್ದಾರೆ.

ಕನ್ನಡಪರ ಹೋರಾಟಗಾರರಾದ ಡಿಪಿಕೆ ಪರಮೇಶ್ ಮಾತನಾಡಿ, ಕಬಿನಿ ಜಲಾಶಯದ ಎಡ ಬಲ ದಂಡೆಯಲ್ಲಿರುವ ಭೂಮಿಯನ್ನ ಅಕ್ರಮವಾಗಿ ಆಕ್ರಮಿಸಿ, ರೆಸಾರ್ಟ್ ನಿರ್ಮಿಸಿಕೊಂಡು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಇಂತಹದ್ದೆಲ್ಲ ಅಧಿಕಾರಿಗಳ ಗಮನಕ್ಕೆ ಇಲ್ಲವಾ?. ಇಂತವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳದೆ, ರಾಜಕಾರಣಿಗಳ ಗುಲಾಮರಂತೆ ವರ್ತಿಸುವುದು ಎಷ್ಟು ಸರಿ?. ಕಬಿನಿ ಉಳಿಸಿಕೊಳ್ಳಬೇಕಾದ್ದು ಎಲ್ಲರ ಹೊಣೆ, ಅಧಿಕಾರಿಗಳ ಕರ್ತವ್ಯವು ಹೌದು. ಇದನ್ನೆಲ್ಲಾ ಮರೆತಂತೆ ನಡೆಯುವುದು ಸರಿಯಲ್ಲ. ಇದರಿಂದಾಗಿಯೇ, ಮಾನವ-ವನ್ಯಜೀವಿ ಸಂಘರ್ಷ ಏರ್ಪಟ್ಟಿದೆ. ಪ್ರಾಣಿಗಳ ಆವಾಸ ಸ್ಥಳ ಒತ್ತಲಿಸಿದಂತೆ ಅವುಗಳಿಗೆ ಜಾಗ ಇಲ್ಲದಾಗಿ ಗ್ರಾಮಗಳತ್ತ ಮುಖ ಮಾಡಿವೆ. ಇದಕ್ಕೆಲ್ಲ ಕಾರಣ ಯಾರು ದುರಾಸೆಯ ಮನುಷ್ಯ. ಇದನ್ನ ತಡೆಯಬೇಕಾದವರು ಯಾರು? ಅಧಿಕಾರಿಗಳು. ಇದುವರೆಗೆ ಅಂತಹ ದಿಟ್ಟ ಕೆಲಸ ಮಾಡಿಲ್ಲ, ಈಗಲಾದರೂ ಕ್ರಮಕ್ಕೆ ಮುಂದಾಗಿ ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಮಾತನಾಡಿ, ಈ ಸಂಬಂಧ ಎಚ್‍ ಡಿ ಕೋಟೆ ತಾಲ್ಲೂಕಿನ ತಹಸಿಲ್ದಾರ್ ಶ್ರೀನಿವಾಸ್ ರವರಿಗೆ ಮನವಿ ಮಾಡಲಾಗಿದೆ. ಅಲ್ಲದೆ ಕಳೆದ ವಾರದ ಹಿಂದೆ ‘ಕಬಿನಿ ಉಳಿಸಿ, ಅರಣ್ಯ ರಕ್ಷಿಸಿ’ ಅನಿರ್ಧಿಷ್ಟಾವಧಿ ಧರಣಿ ಕುಳಿತಾಗ ಜಿಲ್ಲಾಧಿಕಾರಿಗಳು ಸಮಯ ಕೋರಿದರು, ಅದರಂತೆ, ತಾತ್ಕಾಲಿಕವಾಗಿ ಹೋರಾಟ ವಾಪಸ್ ಪಡೆದಿದ್ದೀವಿ. ಜೊತೆಗೆ ಎಚ್ಚರಿಕೆಯನ್ನು ನೀಡಿದ್ದೇವೆ. ದುರಂತವೇನೆಂದರೆ ನಮ್ಮ ಮನವಿಗಳಿಗೆ ಎಲ್ಲಾ ಇಲಾಖೆಗಳಿಗೂ ಬರೀ ಪತ್ರ ರವಾನೆ ಮೂಲಕ ಸಂತೃಪ್ತಿ ಪಡಿಸುತಿದ್ದಾರೆ ವಿನಃ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಇದೇ ರೀತಿ ತಾತ್ಸಾರ ಮಾಡುತ್ತಾ, ಕಾಲಹರಣ ಮಾಡಿದರೆ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ. ನಾವುಗಳು ಸಹ ಅಧಿಕಾರಿಗಳು ಹೇಳಿದಂತೆಲ್ಲ ಕೇಳಿದ್ದೇವೆ. ಪದೇ ಪದೇ ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ. ರಾಜಕಾರಣಿಗಳ ಮುಲಾಜು ನಮಗಿಲ್ಲ, ಹೋರಾಟಕ್ಕೆ ಇಳಿದರೆ ಮಂಡಿಯೂರಿಸುವುದು ಗೊತ್ತಿದೆ ಎಂದು ಕಿಡಿಕಾರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂತಹ ಮೃದುಧೋರಣೆ ಅನುಸರಿಸುತ್ತಿರುವುದು ನೋಡಿದರೆ, ರಾಜಕಾರಣಿಗಳಿಗೆ ಹೆದರಿ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ. ಹಾಗಾದರೆ, ಜನಸಾಮಾನ್ಯರು ಕಟ್ಟುವ ತೆರಿಗೆ ಪಡೆಯಲು ನಿಮಗೆ ಯೋಗ್ಯತೆ ಇದಿಯಾ?. ನಮ್ಮ ತೆರಿಗೆಯಿಂದ ಸರ್ಕಾರಿ ಅಧಿಕಾರಿಗಳು ಸಂಬಳ ಪಡೆಯುತ್ತಿರುವುದು. ನಮ್ಮ ಕಷ್ಟಕ್ಕೆ, ನಮ್ಮ ನೋವಿಗೆ ಸ್ಪಂದನೆ ಇಲ್ಲ ಎಂದರೆ ಇನ್ನೇನಿಕೆ. ನೊಂದವರಿಗೆ ನ್ಯಾಯ ಕೊಡಿಸುವುದು, ಸರ್ಕಾರಿ ಸಂಪತ್ತು ಸಂರಕ್ಷಣೆ ಮಾಡುವುದು ನಿಮ್ಮ ಆದ್ಯ ಕರ್ತವ್ಯ. ಆದರೇ, ನೀವುಗಳು ಯಾರ ಸೇವೆ ಮಾಡುತ್ತಿದ್ದೀರಿ?. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯ ಏನಾಗಬಹುದು, ಇದರ ಬಗ್ಗೆ ಯಾಕೆ ನಿಮಗೆ ಯೋಚನೆ ಇಲ್ಲ ಎಂದು ಪ್ರಶ್ನಿಸಿದರು.

ವಕೀಲರಾದ ರವಿಕುಮಾರ್ ಮಾತನಾಡಿ, ರಾಜಕೀಯ ಒತ್ತಡಗಳಿಂದ ಜಡ್ಡುಗಟ್ಟಿರುವ ಮೈ ಕೊಡವಿ, ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಉತ್ತಮ ಕೆಲಸ ಮಾಡಲು ಮುಂದಾಗಬೇಕು, ದಾಖಲೆಗಳ ಮೂಲಕ ಮನವಿ ಮಾಡುತ್ತಾ ಇದ್ದೇವೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗೆ ಮುಂದುವರೆದರೆ ಕಬಿನಿ, ಅರಣ್ಯ ಉಳಿಸಲು ಸಾಧ್ಯವೇ?. ರಾಜಕಾರಣಿಗಳ ಕೈಗೊಂಬೆಯಾಗಿ ವರ್ತಿಸುವುದನ್ನು ಮೊದಲು ಬಿಡಿ, ಅಕ್ರಮವಾಗಿ ಕಟ್ಟಿರುವ ರೆಸಾರ್ಟ್ ಗಳ ದಾಖಲೆ ಪರಿಶೀಲನೆ ಮಾಡಿ ತೆರವುಗೊಳಿಸಿ. ಭೂ ಕಬಳಿಕೆ ಮಾಡಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತರು, ಫೆಬ್ರವರಿ. 3ರಂದು ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದ್ದು, ಪರಿಶೀಲನೆ ನಡೆಸಿ, ಯಾವುದೇ ಮುಲಾಜಿಗೆ ಒಳಗಾಗದೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ.

ಈ ಸುದ್ದಿ ಓದಿದ್ದೀರಾ? ಹುಣಸೂರು | ಪರಿಸರ ಉಳಿಸುವ ರೈತರನ್ನು; ಪರಿಸರ ಹಾಳು ಮಾಡುವಂತೆ ಮಾಡಿದ್ದಾರೆ: ಹೊಸೂರು ಕುಮಾರ್

ಮನವಿ ನೀಡುವಾಗ ಕರ್ನಾಟಕ ಭೀಮಸೇನೆಯ ಎಂ. ಮಂಜುನಾಥ, ಮನೋಜ್ ಕುಮಾರ್, ಕಬಿನಿ ಸುರೇಶ್, ಸೋಮೇಶ್, ಶಿವ, ಮಾದೇವಪ್ಪ , ಸೋಮು , ಮಂಜುನಾಥ್, ಕೃಷ್ಣೆಗೌಡ, ಶಿವಸ್ವಾಮಿ, ಜಗದೀಶ್, ಸುಮಂತ್, ಸತೀಶ್ ಸೇರಿದಂತೆ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...