ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್ಐಒ) ಪಾಣೆಮಂಗಳೂರು ಘಟಕದ ವತಿಯಿಂದ ದೇವಸ್ಯ ಪಡೂರಿನ ಸರ್ಕಾರಿ ಶಾಲೆಯ ಗ್ರಂಥಾಲಯಕ್ಕೆ ಕಪಾಟನ್ನು ಕೊಡುಗೆಯಾಗಿ ನೀಡಲಾಗಿದೆ.
ಕಳೆದ 43 ವರ್ಷಗಳಿಂದ ಶಿಕ್ಷಣ ಕ್ಷೇತ್ರದ ಉತ್ತೇಜನಕ್ಕಾಗಿ ಹೋರಾಟ ಮತ್ತು ಅಭಿಯಾನಗಳ ಮೂಲಕ ಸತತವಾಗಿ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಬೆಳೆಸುವುದು ಎಸ್ಐಒ ನ ಮುಖ್ಯ ಉದ್ದೇಶವಾಗಿದೆ.
ಈ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತಿ ಲೀಲಾ ಪಾಯಸ್ ಅವರ ಕೋರಿಕೆಯಂತೆ ಕಪಾಟು ನೀಡಲಾಗಿದೆ. ಈ ಸಂದರ್ಭದಲ್ಲಿ ಎಸ್ಐಒ ಸದಸ್ಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಇದನ್ನು ಓದಿ: ಮಂಗಳೂರು | ಬಂಟ್ವಾಳ-ಮೂಡುಬಿದ್ರೆ ಮಾರ್ಗಕ್ಕೆ ಬಸ್ ಸೌಲಭ್ಯ ಕಲ್ಪಿಸಲು NSUI ಮನವಿ
ಕಾರ್ಯಕ್ರಮದ ಅಂತ್ಯದಲ್ಲಿ ʼಈ ಕಾರ್ಯವು ಸತ್ಕರ್ಮವಾಗಿ ಪರಿಗಣಿಸಲ್ಪಟ್ಟು, ದಾನಿಗಳಿಗೆ ದೇವರ ಅನುಗ್ರಹ ದೊರಕಲಿʼ ಎಂದು ಪ್ರಾರ್ಥಿಸಲಾಯಿತು.





