ಚಿಕ್ಕಬಳ್ಳಾಪುರ | ಅರ್ಧ ಎಕರೆ ಸೇವಂತಿಗೆ ಕಳೆನಾಶಕ ಸಿಂಪಡಿಸಿದ ದುಷ್ಕರ್ಮಿಗಳು; ರೈತ ಕಂಗಾಲು

Date:

ಸುಮಾರು ಅರ್ಧ ಎಕರೆಯಲ್ಲಿ ಬೆಳೆದಿದ್ದ ಸೇವಂತಿಗೆ ಗಿಡಗಳಿಗೆ ರಾತ್ರೋರಾತ್ರಿ ದುಷ್ಕರ್ಮಿಗಳು ಕಳೆನಾಶಕ ಸಿಂಪಡಿಸಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಘಟನೆ ನಡೆದಿದೆ. ರೈತ ಸತೀಶ್‌ ಬಾಬು ಬಿನ್ ವೆಂಕಟೇಶಪ್ಪ ಎಂಬುವರು ಅರ್ಧ ಎಕರೆಯಲ್ಲಿ ಸುಮಾರು 3 ಸಾವಿರ‌ ಸೇವಂತಿಗೆ ಗಿಡಗಳನ್ನು ಬೆಳೆದಿದ್ದಾರೆ. ಕಳೆದ ಸೋಮವಾರ ಔಷಧಿ ಸಿಂಪಡಣೆ ಮಾಡಿದ್ದರು. ಇದಾದ ಬಳಿಕ, ಎರಡ್ಮೂರು ದಿನಗಳ ಹಿಂದೆ ಯಾರೋ ದುಷ್ಕರ್ಮಿಗಳು ರಾತ್ರೋರಾತ್ರಿ ಹೂವಿನ ಗಿಡಗಳಿಗೆ ಕಳೆನಾಶಕ ಸಿಂಪಡಣೆ ಮಾಡಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತ ಸತೀಶ್‌ ಬಾಬು ಬೆಳೆ ನಾಶದಿಂದ ಕಂಗಾಲಾಗಿದ್ದಾರೆ.

ಸೇವಂತಿಗೆ123

“ಇನ್ನೇನು 15 ದಿನಗಳಲ್ಲಿ ಸ್ಯಾಂಪಲ್‌ ಬರ್ತಿತ್ತು. ಅಷ್ಟರಲ್ಲಿ ಯಾರೋ ದುಷ್ಕರ್ಮಿಗಳು ಬೆಳೆದು ನಿಂತಿದ್ದ ಸೇಂದಿಲ್‌ ಸೇವಂತಿ ಹೂವಿನ ಗಿಡಗಳಿಗೆ ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ಇದರಿಂದ ಸೇವಂತಿಗೆ ಗಿಡಗಳ ಎಲೆಗಳ ಬಣ್ಣ ಬದಲಾಗಿದ್ದು, ಒಣಗುವ ಹಂತಕ್ಕೆ ತಲುಪಿವೆ. ಯಾರೆಂಬುದು ತಿಳಿಯುತ್ತಿಲ್ಲ. ನಮ್ಮಂತ ರೈತರು ಏನು ಮಾಡಬೇಕು?” ಎನ್ನುತ್ತಾರೆ ಜಮೀನಿನ ಮಾಲೀಕ ವೆಂಕಟೇಶಪ್ಪ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಳೆನಾಶಕ ಸಿಂಪಡಣೆಯಿಂದ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದು, ಕೆಲ ಗಿಡಗಳು ಸಂಪೂರ್ಣ ಒಣಗಿ ಹೋಗಿವೆ. ಇನ್ನೇನು 15 ದಿನಗಳಲ್ಲಿ ಹೂವು ಬಿಡಬೇಕಿದ್ದ ಗಿಡಗಳು ಒಣಗುವ ಹಂತಕ್ಕೆ ತಲುಪಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಬೆಳೆ ಬೆಳೆದಿದ್ದ ರೈತ ಸತೀಶ್‌ ಬಾಬು ಕುಟುಂಬ ಆತಂಕದಲ್ಲಿದೆ.

ಸೇವಂತಿಗೆ 11
ಸೇವಂತಿ ಗಿಡದ ಎಲೆಗಳು ಬಾಡಿರುವುದು

ಈ ಕುರಿತು ಈದಿನ ಡಾಟ್‌ ಕಾಮ್‌ ಜತೆ ಮಾತನಾಡಿದ ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು, ʼಹೊಸಹುಡ್ಯದ ಸತೀಶ್‌ ಬಾಬು ಅವರ ಹೊಲದಲ್ಲಿ ಸೇವಂತಿಗೆ ಹೂ ಹಾಕಲಾಗಿದ್ದು, ಕಳೆನಾಶಕ ಸಿಂಪಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆ ಇಂದು ಸ್ಥಳಕ್ಕೆ ಭೇಟಿ ನೀಡಿ ಗಿಡಗಳ ಮಾದರಿಯನ್ನು ಇಲಾಖೆಗೆ ಕಳಿಸಲಾಗಿದೆ. ಈ ಕುರಿತು ವಿಜ್ಞಾನಿಗಳ ವರದಿ ಬರಬೇಕಿದೆ. ಆನಂತರವಷ್ಟೇ ಸೂಕ್ತ ಕಾರಣ ತಿಳಿಯಲಿದೆʼ ಎಂದು ಹೇಳಿದರು.

ಸೇವಂತಿಗೆ1
ಕಳೆನಾಶಕ ಸಿಂಪಡಣೆಯಿಂದ ಒಣಗಿರುವ ಸೇವಂತಿ

ಇದನ್ನೂ ಓದಿ : ಚಿಕ್ಕಬಳ್ಳಾಪುರ | ಭಾರತೀಯ ಮೂಲ ಕಲೆಯ ಪೋಷಣೆ ಶ್ಲಾಘನೀಯ:‌ ಹೈಕೋರ್ಟ್ ವಕೀಲ ಪಾವಗಡ ಶ್ರೀರಾಮ್

ಈ ಕುರಿತು ಈದಿನ ಡಾಟ್‌ ಕಾಮ್‌ ಜತೆಗೆ ಮಾತನಾಡಿದ ರೈತ ಸತೀಶ್‌ ಬಾಬು, ʼಕಳೆದ ಬಾರಿ 1 ಎಕರೆಯಲ್ಲಿ ಇದೇ ಬೆಳೆ ಬೆಳೆದಿದ್ದೆ. ಸುಮಾರು 1 ಲಕ್ಷ ಆದಾಯ ಬಂದಿತ್ತು. ಆದರೆ, ಈ ಬಾರಿ ಯಾರೋ ದುಷ್ಕರ್ಮಿಗಳು ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ಇದರಿಂದ ಬೆಳೆ ಹಾಳಾಗಿದೆ. ಗಿಡಗಳು ಬಾಡುತ್ತಿವೆ. ಕಳೆನಾಶಕ ಸಿಂಪಡಣೆಯಾದರೆ ಗಿಡಗಳು ಹೂ ಬಿಡುವುದಿಲ್ಲ. ಇದರಿಂದ ನಮಗೆ ನಾವು ನಷ್ಟದ ಭೀತಿಯಲ್ಲಿದ್ದೇವೆ. ರೈತರಿಗೆ ರೈತರೇ ವಿರೋಧಿಗಳಾಗುತ್ತಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಇಲಾಖೆ ನಮ್ಮಂತಹ ರೈತರಿಗೆ ಸೂಕ್ತ ಪರಿಹಾರ ಕೊಡಬೇಕುʼ ಎಂದು ಮನವಿ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...