ಬೀದರ್‌ | 57 ವರ್ಷಗಳ ಹಿಂದೆ ಎಮ್ಮೆ ಕದ್ದಿದ್ದ ಆರೋಪಿ ಬಂಧನ

Date:

ಎಮ್ಮೆ ಕಳವು ಮಾಡಿದ ಆರೋಪಿ ಓರ್ವನನನ್ನು ಬರೋಬ್ಬರಿ 57 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. 1965 ನಡೆದ ಎಮ್ಮೆ ಕಳ್ಳತನ ಪ್ರಕರಣದ ಆರೋಪಿ ಗಣಪತಿ ವಿಠಲ ವಾಗ್ಮೋರೆ (77) ಎಂಬುವರನ್ನು ಬೀದರ್‌ ಜಿಲ್ಲೆಯ ಮೇಹಕರ್‌ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ: 1965 ಎಪ್ರಿಲ್‌ 25 ರಂದು ಮೇಹಕರ್‌ ನಲ್ಲಿ 2 ಎಮ್ಮೆ 1 ಕರು ಕಳುವಾದ ಬಗ್ಗೆ ಮುರಳೀಧರ ಕುಲಕರ್ಣಿ ಎಂಬುವರು ಮೇಹಕರ್‌ ಪೊಲೀಸ್‌ ಠಾಣೆಯಲ್ಲಿ 1965ರಲ್ಲಿ ಪ್ರಕರಣ ದಾಖಸಿದ್ದರು. ನಂತರ ಪೊಲೀಸರು ಗಣಪತಿ ವಿಠಲ ವಾಗ್ಮೋರೆ ಹಾಗೂ ಮಹಾರಾಷ್ಟ್ರ ಮೂಲದ ಕಿಶನ್‌ ಚಂದರ್‌ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಜಾಮೀನು ಪಡೆದ ಬಳಿಕ ಇಬ್ಬರು ಆರೋಪಿಗಳು ಕೋರ್ಟ್‌ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದರು.

ಇಬ್ಬರಲ್ಲಿ ಒಬ್ಬ ಆರೋಪಿ ಕಿಶನ್ ಚಂದರ್‌ ಮೃತಪಟ್ಟ ಹಿನ್ನಲೆಯಲ್ಲಿ ಆತನ ವಿರುದ್ಧದ ಪ್ರಕರಣ ರದ್ದಾಗಿತ್ತು. ಆದರೆ, ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಇನ್ನೊಬ್ಬ ಆರೋಪಿ ಗಣಪತಿ ವಿಠಲ ವಾಗ್ಮೋರೆಯನ್ನು ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಟಾಕಳಗಾಂವ್ ಗ್ರಾಮದಲ್ಲಿ 2023ರ ಸೆ.11 ರಂದು ಮೇಹಕರ ಠಾಣೆ ಪಿಎಸ್‌ಐ ಶಿವಕುಮಾರ ಮತ್ತು ಚಂದ್ರಶೇಖರ ಬಂಧಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...