ಮೈಸೂರು | ಬರಹದಲ್ಲಿ ವಾಸ್ತವ ತೆರೆದಿಟ್ಟವರು ಪೂರ್ಣಚಂದ್ರ ತೇಜಸ್ವಿ : ಡಾ. ತ್ರಿವೇಣಿ ಅಭಿಮತ

Date:

ಮೈಸೂರು ನಗರದ ಹೂಟಗಳ್ಳಿ ಎಸ್‌ಆರ್‌ಎಸ್ ಕಾಲೋನಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ‘ ಪ್ರಸ್ತುತ ವಿದ್ಯಮಾನದಲ್ಲಿ ತೇಜಸ್ವಿ ಚಿಂತನೆ ‘ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಡಾ.ತ್ರಿವೇಣಿ ‘ ಬರಹದಲ್ಲಿ ವಾಸ್ತವ ತೆರೆದಿಟ್ಟವರು ಪೂರ್ಣಚಂದ್ರ ತೇಜಸ್ವಿ ‘ ಎಂದು ಅಭಿಮತ ವ್ಯಕ್ತಪಡಿಸಿದರು.

” ನವ್ಯ ಕಾಲದ ಉದಯದಲ್ಲಿ ನಗರದಿಂದ ಹಳ್ಳಿಯ ಕಡೆ ಮುಖ ಮಾಡಿ ಹಳ್ಳಿ ಬದುಕು, ನಾಗರಿಕತೆ ಜನರ ಮೇಲೆ ಉಂಟು ಮಾಡಿದ ಪ್ರಭಾವದ ಕುರಿತು ಸಾಹಿತ್ಯದಲ್ಲಿ ಕಟ್ಟಿಕೊಡುವ ಕೆಲಸವನ್ನು ತೇಜಸ್ವಿ ಮಾಡಿದ್ದಾರೆ. ಅವರ ಒಟ್ಟು ಸಾಹಿತ್ಯ ಹೇಳುವುದು ಸಾಹಿತ್ಯ, ಪರಿಸರ ಮತ್ತು ಮನುಷ್ಯನ ಸಂಘರ್ಷಗಳು, ಆ ಮೂಲಕ ಜಗತ್ತಿನ ಗ್ರಹಿಕೆ ಅದರ ಪರಿಣಾಮಗಳು, ಅದನ್ನು ಎದುರಿಸುವ ಬಗ್ಗೆ ಹಾಗೂ ಅದರ ತಾಕಲಾಟಗಳ ಬಗ್ಗೆ ಬರವಣಿಗೆಯ ಉದ್ದಕ್ಕೂ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ “.

” ಮನುಷ್ಯನನ್ನು ವೈಚಾರಿಕವಾಗಿ ಎಚ್ಚರಿಸುವುದೇ ತೇಜಸ್ವಿಯವರ ಬರಹದ ಮೂಲ ಆಶಯವಾಗಿದೆ. ವಿಶ್ವ ಸಾಹಿತ್ಯದಲ್ಲಿ ಬೇರೆ ಯಾವ ಭಾಷೆಗಳಿಗೂ ದಕ್ಕದ ಸ್ಥಾನಮಾನ ಕನ್ನಡಕ್ಕೆ ದೊರಕಿದೆ. ಈ ನಿಟ್ಟಿನಲ್ಲಿ ಪೂರ್ಣ ಚಂದ್ರ ತೇಜಸ್ವಿ ಅವರ ಕೊಡುಗೆಯೂ ಅಪಾರವಾಗಿದೆ. ತೇಜಸ್ವಿಯವರು ಪರಿಪೂರ್ಣರಾಗಿ, ತೇಜಸ್ಸಿನ ಹಾಗೂ ತನ್ನದೇ ಆದ ವಿಶಿಷ್ಟ ಜೀವನ ಕಟ್ಟಿಕೊಂಡ ಮಹಾನ್ ಚೇತನ. ಇವತ್ತಿನ ಪೀಳಿಗೆಗೆ ಸಾಹಿತ್ಯದ ಆಸಕ್ತಿಯಿದ್ದರೆ, ಅದರ ಒಲವು ಹೆಚ್ಚಿನವರಿಗೆ ತೇಜಸ್ವಿಯವರ ಬರಹದಿಂದ ಮೂಡಿದೆ. ಅದು ಐಟಿ ಕ್ಷೇತ್ರಗಳಲ್ಲಿ ಹೆಚ್ಚಾಗಿ ಪ್ರಭಾವಿಸಿದೆ. ಅವರು ಒಂದು ವಿಸ್ಮಯ ಲೋಕವಿದ್ದಂತೆ, ಓದಿದಷ್ಟು ತೆರೆದುಕೊಳ್ಳುತ್ತಾ ಹೋಗುತ್ತಾರೆ ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

” ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಮಿತಿ ಮೀರಿದೆ. ಭ್ರಷ್ಟಾಚಾರ, ಧರ್ಮ, ಜಾತಿ ತಿಕ್ಕಾಟ, ರಾಜಕೀಯ ಕುತಂತ್ರ ಬುದ್ಧಿ ಇಂತಹ ಅನೇಕ ಸಮಾಜಘಾತುಕ ಸಂಕಟಗಳಿಗೆ ಸಿಲುಕಿರುವ ಜನಸಾಮಾನ್ಯರನ್ನು ತೇಜಸ್ವಿಯವರ ಬರಹ ಹಾಗೂ ಬದುಕು ಎಚ್ಚರಿಸುತ್ತದೆ. ರಾಮಮನೋಹರ ಲೋಹಿಯಾ ಅವರ ತತ್ವಚಿಂತನೆ, ಕುವೆಂಪು ಅವರ ಕಲಾಸೃಷ್ಟಿ ಹಾಗೂ ಶಿವರಾಮ ಕಾರಂತರ ಜೀವನ ದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ ಅವರ ಬದುಕಿನ ಮೇಲೆ ಪ್ರಭಾವ ಬೀರಿ ಅವರನು ವಿಭಿನ್ನವಾಗಿಸಿದವು. ತೇಜಸ್ವಿ ಬದುಕಿನ ಸುತ್ತಲಿನ ನೈಜತೆಯನ್ನೇ ಪಾತ್ರಗಳಾಗಿ ಸೃಷ್ಟಿಸಿ, ಸಾಹಿತ್ಯವನ್ನು ಜೀವನ ಮಟ್ಟಕ್ಕೆ ತಂದು ಅಸಲಿತನವನ್ನು ಸೃಷ್ಟಿಸಿದರು ” ಎಂದರು.

ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ವಾಸ್ಥ್ಯ ಮಾತನಾಡಿ ತೇಜಸ್ವಿಯವರು ಕುವೆಂಪು ಕಂಡ ವಿಶ್ವಮಾನವರಂತವರು. ಬರಹಗಾರರಾಗಿ, ವಿಚಾರವಂತರಾಗಿ, ಸಂಘಟಕರಾಗಿ ಹೊಸ ತಲೆಮಾರಿನ ಅನುಕೂಲಕ್ಕಾಗಿ ವರ್ತಮಾನವನ್ನು, ಜೀವಪರವಾದ ವಾಸ್ತವವನ್ನು ದಾಖಲಿಸಿದ ದೂರದೃಷ್ಟಿಯನ್ನು ತೇಜಸ್ವಿ ಹೊಂದಿದ್ದರು. ಕಾಡಿನ ಪ್ರಶಾಂತತೆ, ಅದರೊಳಗಿನ ಕ್ರೌರ್ಯಗಳನ್ನು ಹೇಳುತ್ತಲೇ, ಮನುಷ್ಯ ಸದಾ ಜೀವಪರವಾದ ಮಿಡಿತವನ್ನು ಹೊಂದಿರುವಂತವರು. ಅವರನ್ನು ಮತ್ತಷ್ಟು ಮೃದುಗೊಳಿಸುವಲ್ಲಿ ಪ್ರಕೃತಿ, ವಿಜ್ಞಾನಗಳೊಟ್ಟಿಗೆ ಮೇಲೈಸುತ್ತಾ ನಿರಂತರವಾದ ಹುಡುಕಾಟವನ್ನು ಸೃಷ್ಟಿಸಬೇಕೆನ್ನುವ ವಿಸ್ಮಯ ಲೋಕದ ವಿಶ್ವಕೋಶದಂತಿದ್ದವರು ” ಎಂದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಹೆಮ್ಮಿಗೆ ಹಾಡಿಗಿಲ್ಲ ‘ ಗೃಹಜ್ಯೋತಿ ‘

ಪುಸ್ತಕ ಪ್ರಕಾಶನ ಮುಖ್ಯಸ್ಥ ಶ್ರೀರಾಮ್, ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ವಾನ್ಲಿ, ಪರಶು ಕಾರ್ಯಕ್ರಮದಲ್ಲಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...