ಚಿಂತಾಮಣಿ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿನಿ 5 ತಿಂಗಳ ಗರ್ಭಿಣಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ 2-3 ತಿಂಗಳಿನಿಂದ ವಿದ್ಯಾರ್ಥಿನಿಯ ದೇಹದಲ್ಲಾದ ಬದಲಾವಣೆ ಗಮನಿಸಿ ಹಾಸ್ಟೆಲ್‌ನ ಮೇಲ್ವಿಚಾರಕರು ಪೋಷಕರನ್ನು ಕರೆಸಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಬೆಳಕಿಗೆ ಬಂದಿದೆ.
ಇದನ್ನು ಓದಿದ್ದೀರಾ..? ನಗರಸಭೆ ಅಧಿಕಾರಿಗಳು ಸಿಬ್ಬಂದಿ ವಿರುದ್ಧ ಶಾಸಕ ಕೊತ್ತೂರು ಮಂಜುನಾಥ್ ಸಿಡಿಮಿಡಿ
ಈ ಕುರಿತು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದರ ಬೆನ್ನೆಲೆ ಪ್ರಾಂಶುಪಾಲರು ನಾಗರತ್ನಮ್ಮ ಡಿ.ವಿ.ಪ್ರಭಾರ ನಿಲಯಪಾಲಕರು(ಮೂಲತಃ ದೈಹಿಕ ಶಿಕ್ಷಣ ಶಿಕ್ಷಕರು)ಸವಿತ ಕುಮಾರಿ ಬಿ.ಎಸ್.ಇವರನ್ನು ಕರ್ತವ್ಯದಿಂದ ಅಮಾನತ್ತು ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾದ ಕಾಂತರಾಜು ಪಿಎಸ್ ರವರು ಆದೇಶ ಹೊರಡಿಸಿದ್ದಾರೆ.





