ಕಾಂಗ್ರೆಸ್ ಸರ್ಕಾರಕ್ಕೆ ಕಪ್ಪು ಚುಕ್ಕೆ ತರಲು ಹೊರಟ ತಹಶಿಲ್ದಾರ್ ಎಸಿ ವಿರುದ್ದ ಕಾನೂನು ಕ್ರಮಕ್ಕಾಗಿ ಧರಣಿ

Date:

ಕೋಲಾರ: ತಹಸೀಲ್ದಾರ್ ನಯನ ಮತ್ತು ಉಪ ವಿಭಾಗಾಧಿಕಾರಿ ಡಾ.ಮೈತ್ರಿ ರವರ ಅಧಿಕಾರಾವಧಿಯಲ್ಲಿನ ಆರ್.ಆರ್.ಟಿ ಮತ್ತು ತಿದ್ದುಪಡಿ ಕೇಸುಗಳನ್ನು ತನಿಖೆಗೆ ಹಾಗೂ ದಲಿತರ ಭೂಮಿಗಳ ವಿಚಾರಗಳಲ್ಲಿ ಆದೇಶಗಳಾಗಿರುವ ಎಲ್ಲಾ ಪ್ರಕರಣಗಳನ್ನು ಬೆಂಗಳೂರಿನ ಪ್ರಾದೇಶಿಕ ಆಯುಕ್ತರು ಪುನರ್ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡು ದಲಿತರಿಗೆ ನ್ಯಾಯ ಒದಗಿಸುವಂತೆ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಬುಧವಾರ ತಹಶಿಲ್ದಾರ್ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡ ಹಾಗೂ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎನ್ ಅಂಬರೀಷ್ ಮಾತನಾಡಿ ತಹಸೀಲ್ದಾರ್ ನಯನ ಮತ್ತು ಎಸಿ ಡಾ. ಮೈತ್ರಿ ಕೋಲಾರಕ್ಕೆ ಬಂದಾಗಿನಿಂದ ಅವರ ಆದೇಶಗಳು ನ್ಯಾಯ ಸಮ್ಮತವಾಗಿಲ್ಲ ಒಂದೊಂದು ಪ್ರಕರಣಕ್ಕೆ ಒಂದೊಂದು ರೀತಿಯ ಕಾನೂನು ನಿಯಮಗಳನ್ನು ಪಾಲಿಸಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ. ಅವರಿಂದಲೇ ಸಾರ್ವಜನಿಕರು ರೈತರು ದಲಿತ ಸಮೂಹದಲ್ಲಿ ತೀವ್ರ ಸ್ವರೂಪದ ನೋವನ್ನು ಅನುಭವಿಸುತ್ತಿದ್ದು ಆವರ ಆಡಳಿತಾವಧಿಯಲ್ಲಿನ ಎಲ್ಲಾ ಆದೇಶಗಳನ್ನು ಪ್ರಾದೇಶಿಕ ಆಯುಕ್ತರು ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ನಯನ ವಿರುದ್ದ 2024 ರ ಸೆಪ್ಟೆಂಬರ್ ನಲ್ಲಿ ವಾಲ್ಮೀಕಿ ಸಮುದಾಯದ ವತಿಯಿಂದ ಹೋರಾಟ ನಡೆಸಿ, ಅವರ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಅಂದು ಎಸಿ ಡಾ.ಮೈತ್ರಿ ರವರಿಗೆ ಮನವಿ ಪತ್ರವನ್ನು ನೀಡಲಾಯಿತು. ಇಲ್ಲಿಯವರೆಗೂ ಆ ಮನವಿ ಪತ್ರವನ್ನು ಪ್ರಾದೇಶಿಕ ಆಯುಕ್ತರಿಗೆ ರವಾನಿಸದೆ, ತಹಶಿಲ್ದಾರ್ ನಯನ ಅವರ ಎಲ್ಲಾ ದಲಿತ ವಿರೋಧಿ ನಿಲುವುಗಳಿಗೆ ಎಸಿ ಮೈತ್ರಿ ರವರು ಕೂಡ ಶಾಮೀಲಾಗಿರುವುದು ಅನುಮಾನಗಳು ಮೂಡುವಂತೆ ಮಾಡಿದ್ದಾರೆ ಮೈತ್ರಿ ವಿರುದ್ದ ಕೂಡ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಕರಡುಗುರ್ಕಿ, ಊರುಗುರ್ಕಿ, ಹುಲಿಗುಟ್ಟೆ, ಓಬಟ್ಟಿ, ಮಾದಾಪುರ ಸೇರಿದಂತೆ ಸುತ್ತಲೂ ಪರಿಶಿಷ್ಟ ಜಾತಿಯ ಜನಾಂಗವು ಹೆಚ್ಚಾಗಿದ್ದು ಅವರನ್ನು ಜೀವಂತ ಸಮಾಧಿ ಮಾಡಲು ಹೊರಟಿರುವ ಜಿಪಂ ಮಾಜಿ ಸದಸ್ಯ ಎಂ.ಎಸ್ ಆನಂದ್ ಅವರ ನೇತೃತ್ವದ ಭೈರವೇಶ್ವರ ಸ್ಟೋನ್‌ ಕ್ರಷರ್ ಮಾಡಲು ಅನುಮತಿ ನೀಡಬಾರದು ಒಂದು ವೇಳೆ ನೀಡದರರೆ ಜ.26 ರಂದು ಗಣರಾಜ್ಯೋತ್ಸವ ದಿನದಿಂದ ಗಾಂಧಿವನದಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಬಾಲಗೋವಿಂದ್ ಮಾತನಾಡಿ ತಾಲೂಕಿನ ಗುಟ್ಟಹಳ್ಳಿ ಗ್ರಾಮದಲ್ಲಿ ಸ.ನಂ.4 ರಲ್ಲಿ 2.23 ಗುಂಟೆ ಜಮೀನು ದಶಕಗಳಿಂದ ಮನೆಗಳನ್ನು ಕಟ್ಟಿಕೊಂಡು ದಲಿತರು ವಾಸ ಮಾಡುತ್ತಿರುತ್ತಾರೆ. ಅದೇ ಗ್ರಾಮದ ಮೇಲ್ವರ್ಗದವರು ದಲಿತರಿಗೆ ತೊಂದರೆ ಕೊಡುವ ಉದ್ದೇಶದಿಂದ ಸ.ನಂ.4 ರಲ್ಲಿ ಶಾಲೆಗೆ ಕ್ರೀಡಾಂಗಣ ಒದಗಿಸುವಂತೆ ದುರುದ್ದೇಶದಿಂದ ಅರ್ಜಿ ಪಡೆದುಕೊಂಡು ವಿನಾಕಾರಣ ತೊಂದರೆ ಕೊಟ್ಟಿದ್ದಾರೆ ಕಲ್ಲಂಡೂರು ಗ್ರಾಮದ ಸ.ನಂ. 87 ರಲ್ಲಿ ಸುಮಾರು ವರ್ಷಗಳ ಹಿಂದೆ ಮಂಜೂರಾಗಿರುವ ಜಮೀನುಗಳಿಗೆ ಹುದ್ದಬಸ್ತು ಮಾಡಿಕೊಡುವಂತೆ ತಾಲ್ಲೂಕು ಕಚೇರಿಗೆ ಹಲವಾರು ಬಾರಿ ತಿರುಗಾಡಿದರೂ, ದಲಿತರಿಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದರು

ಅದೇ ರೀತಿ ವಕ್ಕಲೇರಿ ಗ್ರಾಮದ ಸ.ನಂ.339 ರಲ್ಲಿ 2.05 ಎಕರೆ, ಮೇಡಿಹಾಳ ಗ್ರಾಮದ ಸ.ನಂ.82 ರಲ್ಲಿ ಲಘುಮಪ್ಪ ಅವರ 1 ಎಕರೆ, ಕಡಗಟ್ಟೂರು ಗ್ರಾಮದಲ್ಲಿ ವಾಲ್ಮೀಕಿ ಭವನ, ಲಕ್ಷ್ಮೀಪುರ ಮಜರ ಮೈಲಾಂಡಹಳ್ಳಿ ಗ್ರಾಮದ ಸ.ನಂ. 41 ರಲ್ಲಿ 0.20 ಗುಂಟೆ ಕಲ್ಲಂಡೂರು ಗ್ರಾಮದ ಸ.ನಂ.117 ರಲ್ಲಿ ಸರ್ಕಾರಿ ಜಮೀನು ವಕ್ಕಲೇರಿ ಗ್ರಾಮದ ಸ.ನಂ. 174 ರಲ್ಲಿ ಸರ್ಕಾರಿ ಸ್ಮಶಾನ ಸೇರಿದಂತೆ ಅನೇಕ ಕಡೆ ವಾಲ್ಮೀಕಿ ಸಮಾಜದ ಸಮಸ್ಯೆಗಳು ಇದ್ದು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿದರು.

ನಗರದ ವಾಲ್ಮೀಕಿ ವೃತ್ತದಿಂದ ಮೆರವಣಿಗೆ ಮೂಲಕ ತಹಶಿಲ್ದಾರ್ ಕಛೇರಿಗೆ ಆಗಮಿಸಿದ ಪ್ರತಿಭಟನಾಕಾರರು ತಹಶಿಲ್ದಾರ್ ನಯನ ಮತ್ತು ಎಸಿ ಮೈತ್ರಿ ವಿರುದ್ದ ಘೋಷಣೆ ಕೂಗಿ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಮಂಗಳಾ ಅವರಿಗೆ ಸಲ್ಲಿಸಿದರು.

ಇದನ್ನು ಓದಿದ್ದೀರಾ..? ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆ: ದಿನೇಶ್ ಗುಂಡೂರಾವ್.

ಈ ಸಂದರ್ಭದಲ್ಲಿ ಜಾಗೃತಿ ಸಮಿತಿ ಸದಸ್ಯ ಮಾಲೂರು ಎನ್ ವೆಂಕಟರಾಮ್, ಮುಖಂಡರಾದ ಕುಡುವನಹಳ್ಳಿ ಆನಂದ್, ಬೈರಂಡಹಳ್ಳಿ ನಾಗೇಶ್, ಅಡ್ಡಗಲ್ ನರೇಶ್, ನರಸಿಂಹಪ್ಪ, ಗಡ್ಡೂರು ಪ್ರಕಾಶ್, ಬೈರಕೂರು ರಾಮಾಂಜಿ, ಕೆಜಿಎಫ್ ರಮೇಶ್ ನಾಯಕ್, ಮೇಡಹಾಳ ಮುನಿಅಂಜಿ, ಗರುಡನಹಳ್ಳಿ ಪಿಳ್ಳಪ್ಪ, ಸಂಪತ್, ಸಂಗೊಂಡಹಳ್ಳಿ ಪಿಳ್ಳಪ್ಪ, ಬೆಳ್ಳೂರು ತಿರುಮಲೇಶ್, ಈನೆಲ ಜಲ ವೆಂಕಟಾಚಲಪತಿ, ಟಿ.ಕೆ ನಾಗರಾಜ್, ವಾಸು, ಸಿಂಗಹಳ್ಳಿ ಮುರಳಿ ನಾಯಕ್, ತಾಳಕುಂಟೆ ನವೀನ್, ರಾಮಪ್ಪ, ಶಂಕರಪ್ಪ, ಕಲ್ಲಂಡೂರು ನಾರಾಯಣಸ್ವಾಮಿ, ರವಿ, ಗೋವಿಂದ, ತಿಮ್ಮರಾಮಪ್ಪ, ಮೇಡಹಾಳ ಮಂಜು, ರಾಜು ಮುಂತಾದವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...