ಚಿಕ್ಕಬಳ್ಳಾಪುರ | ರಾಗಿ, ಜೋಳ ಖರೀದಿ ಕೇಂದ್ರ; ನೋಂದಣಿಗೆ ಡಿ.ಸಿ ಮನವಿ

Date:

ಡಿಸೆಂಬರ್‌ 1 ರಿಂದ ನೋಂದಣಿ ಆರಂಭ | ಜನವರಿ 1ರಿಂದ ಖರೀದಿ ಶುರು

2024-25ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಮತ್ತು ಬಿಳಿ ಜೋಳವನ್ನು 2025ರ ಜನವರಿಯಿಂದ ಮಾರ್ಚ್ ಮಾಹೆಯವರಗೆ ಸರ್ಕಾರ ಖರೀದಿಸುತ್ತಿದ್ದು, ಜಿಲ್ಲೆಯ ರೈತರು ಮುಂದಿನ ಡಿಸೆಂಬರ್ 1 ರಿಂದ ನೋಂದಣಿ ಮಾಡಿಸಿಕೊಳ್ಳುವಂತೆ ಜಿಲ್ಲೆಯ ರೈತರಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಗಿ, ಜೋಳ ಖರೀದಿ ಕೇಂದ್ರಗಳ ಆರಂಭದ ಕುರಿತ ಜಿಲ್ಲಾ ಟಾಸ್ಕ್ ಪೊರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ, ಬಿಳಿಜೋಳವನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಚಿಕ್ಕಬಳ್ಳಾಪುರದ ಎಲ್ಲ ತಾಲ್ಲೂಕುಗಳಲ್ಲಿ ತೆರೆಯಲು ಕ್ರಮವಹಿಸಬೇಕು. ಖರೀದಿ ಅಧಿಕಾರಿಗಳು ರೈತರಿಂದ ರಾಗಿ ಖರೀದಿಯ ಆರಂಭದಲ್ಲಿ ರೈತರ ಹೆಸರು, ವಿಳಾಸ, ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ ಐಡಿ ಸಂಖ್ಯೆ, ಪಹಣಿ, ಆಧಾರ್ ಪ್ರತಿ, ಹಾಗೂ ಮೊಬೈಲ್ ಸಂಖ್ಯೆ ಪಡೆಯಬೇಕು. ರೈತರ ನೊಂದಣಿಯನ್ನು ಮುಂದಿನ ಡಿಸೆಂಬರ್ 1 ರಿಂದ  ಆರಂಭವಾಗಿ ಡಿಸೆಂಬರ್ 30 ರವರಗೆ ಮಾಡಲಾಗುತ್ತದೆ. ಖರೀದಿಯು 2025 ಜನವರಿ 1 ರಿಂದ ಆರಂಭಿಸಿ ಮಾರ್ಚ್ 31 ರವರಗೆ ಖರೀದಿಸಲಾಗುತ್ತದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಜಿಲ್ಲಾ ಟಾಸ್ಕ್ ಪೋರ್ಸ್ ಸಭೆ 6

ಪ್ರತಿ ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯ ನುರಿತ ಗ್ರೇಡರ್ ಗಳನ್ನು ಕೃಷಿ ಇಲಾಖೆಯವರು ನೇಮಿಸುವುದು ಹಾಗೂ ಮೂರನೇ ವ್ಯಕ್ತಿ ಪರಿವೀಕ್ಷಕರನ್ನ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆಹಾರ ನಾಗರೀಕ ಸರಬರಾಜು ನಿಗಮ ನಿಯಮಿತ, ಚಿಕ್ಕಬಳ್ಳಾಪರ ಜಿಲ್ಲೆಯ ಇವರು ನೇಮಕ ಮಾಡುವುದು. ಆಹಾರ ಧಾನ್ಯಗಳ ಗುಣಮಟ್ಟವನ್ನು ಜಂಟಿಯಾಗಿ ದೃಢೀಕರಿಸಬೇಕು. ಪ್ರತಿ ಖರೀದಿ ಕೇಂದ್ರದಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್ ಹಾಗೂ ಯು.ಪಿ.ಎಸ್ ಹೊಂದಿರಬೇಕು. ವಿದ್ಯುತ್ ಸಂಪರ್ಕವನ್ನು ವ್ಯವಸ್ಥಿತವಾಗಿ ಪರೀಕ್ಷಿಸಿಕೊಳ್ಳಬೇಕು. ಖರೀದಿ ಅಧಿಕಾರಿಯು ರೈತರಿಂದ ರಾಗಿ ಖರೀದಿ ಮುನ್ನ ನಿಗಧಿತ ದಿನಾಂಕ ಹಾಗೂ ಸಮಯವನ್ನು ನೀಡುವುದು.

ನೊಂದಾಯಿಸಲ್ಪಟ್ಟ ರೈತರಿಂದ ಮಾತ್ರ ಖರೀದಿ ಅಧಿಕಾರಿ ರಾಗಿ ಖರೀದಿಸಬೇಕು. ಯಾವುದೇ ಕಾರಣಕ್ಕೂ ವ್ಯಾಪಾರಸ್ಥರು, ದಲ್ಲಾಳಿಗಳಿಗೆ ಅವಕಾಶ ನೀಡುವಂತಿಲ್ಲ. ಪ್ರತಿಯೊಂದು ಖರೀದಿ ಕೇಂದ್ರದಲ್ಲಿ ನೆಲಹಾಸು ಹಾಕಿ ಅದರ ಮೇಲೆ ಖರೀದಿಸಲಾದ ರಾಗಿಯನ್ನು ಸರ್ಕಾರವು ಸರಬರಾಜು ಮಾಡುವ ಗೋಣಿ ಚೀಲಗಳಲ್ಲಿ ನಿಗಧಿತ ಪ್ರಮಾಣದಲ್ಲಿ ತುಂಬಿ, ಖರೀದಿಸಿದ ಆಯಾ ದಿನವೇ ಶೇಖರಣಾ ಕೇಂದ್ರದಲ್ಲಿ ಕ್ರಮಬದ್ಧವಾಗಿ ಎಣಿಕೆಗೆ ಅನುಕೂಲವಾಗುವಂತೆ ಜೋಡಣೆ ಮಾಡಬೇಕು. ಪ್ರತಿ ಲಾಟ್‌ಗೆ ಜೋಡಣೆ ಮಾಡಲಾದ ಒಟ್ಟು ಚೀಲಗಳ ಸಂಖ್ಯೆ ನಮೂದಿಸುವುದು.

ಖರೀದಿ ಏಜೆನ್ಸಿಯು ಸಾಗಾಣಿಕೆ ಗುತ್ತಿಗೆದಾರರನ್ನು ನೇಮಿಸುವ ಸಂಬಂಧ ತುರ್ತು ಟೆಂಡ‌ರ್ ಹೊರಡಿಸಲು ಕ್ರಮವಹಿಸುವುದು ಹಾಗೂ ಖರೀದಿ ಕೇಂದ್ರದಲ್ಲಿ ರೈತರಿಂದ ಖರೀದಿಸಲಾದ ರಾಗಿಯನ್ನು ಶೇಖರಣಾ ಕೇಂದ್ರಕ್ಕೆ ಸಾಗಾಣಿಕೆ ಮಾಡಲು ಜಿ.ಪಿ.ಎಸ್ ಹೊಂದಿರುವ ಸಾಗಾಣಿಕಾ ವಾಹನದಲ್ಲಿ ಸಾಗಾಣಿಕೆ ಮಾಡಬೇಕು. ಖರೀದಿ ಸಮಯದಲ್ಲಿ ಯಾವುದೇ ರೀತಿಯ ಗಲಾಟೆ. ಗದ್ದಲಗಳಿಗೆ ಅವಕಾಶ ನೀಡದೆ ಸರತಿ ಸಾಲಿನ ಪ್ರಕಾರ ರಾಗಿ ಖರೀದಿಸಬೇಕು. ರೈತರಿಂದ ರಾಗಿ ಖರೀದಿಸಿದ ದಿನವೇ ಸಂಬಂಧಿಸಿದ ರೈತರಿಗೆ ರಸೀದಿ ಆಯಾ ದಿನವೇ ನೀಡುವುದು. ಪ್ರತಿಯೊಂದು ಖರೀದಿ ಕೇಂದ್ರಗಳಲ್ಲಿ ಬ್ಯಾನರ್‌ಗಳನ್ನು ಹಾಕಿ ಪ್ರತಿ ಕ್ವಿಂಟಾಲ್‌ಗೆ ಸರ್ಕಾರವು ನಿಗಧಿಪಡಿಸಿರುವ ದರ ಹಾಗೂ ಇತರೆ ವಿವರವನ್ನು ಪ್ರದರ್ಶಿಸುವುದು.

ಖರೀದಿ ಕೇಂದ್ರಗಳಲ್ಲಿ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು. ಖರೀದಿ ಅಧಿಕಾರಿಯು ರಾಗಿ ಖರೀದಿ ಕೇಂದ್ರಗಳಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ ನಿಯಮಾನುಸಾರ ಕರ್ತವ್ಯ ನಿರ್ವಹಿಸುವುದು. ಖರೀದಿ ಪ್ರಕ್ರಿಯೆಯು ಸುಗಮವಾಗಿ ನಡೆಯುವಂತೆ ಕ್ರಮವಹಿಸುಬೇಕು ಎಂದು ಸೂಚನೆಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ರೈತರು ಖರೀದಿ ಕೇಂದ್ರಕ್ಕೆ ರಾಗಿಯನ್ನು ತರುವ ಮುನ್ನ ತೇವಾಂಶವಿಲ್ಲದೆ ಚೆನ್ನಾಗಿ ಒಣಗಿಸಿ, ಧೂಳು ಹಾಗೂ ಮಣ್ಣು ಇರದಂತೆ ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಅಮೆರಿಕದಲ್ಲಿ ಟ್ರಂಪ್ ಆಡಳಿತ; ಜಾಗರೂಕವಾಗಿರಬೇಕಿದೆ ಭಾರತ!

ಈ ಸಂದರ್ಭದಲ್ಲಿ ಆಹಾರ  ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಉಪನಿರ್ದೇಶಕ ನಾಗರಾಜು ಕೆಳಗಿನ ಮನೆ, ಕೃಷಿ ಇಲಾಖೆ ಉಪನಿರ್ದೇಶಕಿ ಜಿ.ದೀಪಶ್ರಿ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಸಹಾಯಕ ನಿರ್ದೇಶಕ ಡಿ.ನಾಗರಾಜು, ಕೆ.ಎಫ್.ಸಿ.ಎಸ್.ಸಿ ಜಿಲ್ಲಾ ವ್ಯವಸ್ಥಾಪಕರಾದ ವಿಜಯ್ ಕುಮಾರ್, ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಸ್ ಮಂಜುನಾಥ್, ಕ.ರಾ.ಸ.ಮಾ.ಪ ಮಂಡಳಿ ಶಾಖಾ ವ್ಯವಸ್ಥಾಪಕರಾದ ಪ್ರದೀಪ್, ಕಾನೂನು ಮಾಪನ ಶಾಸ್ತ್ರ ಇಲಾಖೆ ನಿಯಂತ್ರಕರಾದ ಎನ್.ಬೀನಾ ಮತ್ತಿತರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...