ಡಿ ಸಿ ಮನ್ನಾ ಉಳಿಕೆ ಜಮೀನನ್ನು ನಿವೇಶನ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರು ಮಾಡಲು ಸರಕಾರಕ್ಕೆ ಆಗ್ರಹಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮನವಿ ಮಾಡಿದೆ.
ಶಾಸಕರನ್ನು ಭೇಟಿಯಾದ ನಿಯೋಗ ಈ ವಿಚಾರದಲ್ಲಿ ನಾವು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ, ಇದುವರೆಗೂ ಯಾವ ಜನಪ್ರತಿನಿಧಿಗಳೂ ನಮ್ಮ ಬೆಂಬಲಕ್ಕೆ ಬಂದಿಲ್ಲ. ಈ ಬಾರಿ ನಿಮ್ಮ ಮೂಲಕ ನಾವು ಮನವಿ ಮಾಡಿ ಮುಖ್ಯಮಂತ್ರಿಗಳನ್ನೂ ಭೇಟಿಯಾಗಿ ಚರ್ಚೆ ನಡೆಸಿ ಬೇಡಿಕೆ ಈಡೇರಿಸಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ಪುತ್ತೂರು | ಪ್ರತಿ ಮನೆಯಲ್ಲೂ ವೃತ್ತಿಪರರ ಸೃಷ್ಟಿಸುವ ಧ್ಯೇಯ; ಅ.1ರಂದು ಕಟ್ಟತ್ತಾರಿನಲ್ಲಿ ‘ಫ್ಯೂಚರ್ ಫಸ್ಟ್’ ಕಾರ್ಯಕ್ರಮ
ಸಂಘಟನೆಯ ಪ್ರಮುಖರಾದ ಸರೋಜಿನಿ ಬಂಟ್ವಾಳ, ರಘು ಎಕ್ಕಶರ್, ಅಶೋಕ್ ಕೊಂಚಾಡಿ, ಕೃಷ್ಣಾನಂದ, ನಾಗೇಶ್ ಬಲ್ಮಠ, ಸದಾಶಿವ ಪಡುಬಿದ್ರಿ, ಎಚ್ ಡಿ ಲೋಹಿತ್, ರುಕ್ಕಯ್ಯ ಅಮೀನ್ ಕರಂಬಾರ್, ಶ್ರೀಧರ್ ಕೇಪುಳು, ರಾಮಣ್ಣ ಪಿಲಿಂಜ, ಗಣೇಶ್ ಕಾರೆಕ್ಕಾಡು, ವಿಶ್ವನಾಥ ಪುಂಚತ್ತಾರು, ಬಾಬು ಸವಣೂರು, ನಾಗೇಶ್ ಕುರಿಯ ಇದ್ದರು.





