ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕಡದರಗಡ್ಡಿ ಗ್ರಾಮದ ಜಮಿನೊಂದರಲ್ಲಿ ಬೆಳೆದು ನಿಂತ ಭಾರಿ ಬೆಲೆ ಬಾಳುವ ಗಾಂಜಾ ಗಿಡಗಳನ್ನು ಮಂಗಳವಾರ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಕಡದರಗಡ್ಡಿ ಗ್ರಾಮದ ಹುಲಗಪ್ಪ ಬಸಣ್ಣ (38) ನಾಯಕ ಜಮೀನದಲ್ಲಿ ಬೆಳೆದಿದ್ದ ಅಂದಾಜು 10.200ಕೆ.ಜಿ ಗಾಂಜಾ ಜಪ್ತಿ ಮಾಡಿದ್ದು ಆರೋಪಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇನಸ್ಪೆಕ್ಟರ್ ಪುಂಡಲಿಕ್ ಪಟತ್ತರ ನೇತೃತ್ವದ ತಂಡವು ಗಾಂಜಾ ಜಪ್ತಿ ಮಾಡಿದ್ದು, ಗೆಜೆಟೆಡ್ ಅಧಿಕಾರಿ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ವೆಂಕಟೇಶ ದೇಸಾಯಿ, ಪ್ರೊ. ಸೋಮಶೇಖರ ಬಳಗಾನೂರು ಸಮಕ್ಷಮ ಜಪ್ತಿ ಮಾಡಿದೆ.
ಇದನ್ನು ಓದಿದ್ದೀರಾ? ರಾಯಚೂರು | ಮಸ್ಕಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





