ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ನೀಡಬೇಕಾದ ಹುದ್ದೆಗಳಲ್ಲಿ ತಾರತಮ್ಯ ನಡೆಯುತ್ತಿದೆ ಕೂಡಲೇ ರಿಮ್ಸ್ ಡೀನ್ ರಮೇಶ್ ಅವರನ್ನು ತಕ್ಷಣ ಕ್ರಮಕೈಗೊಂಡು ಕಲ್ಯಾಣ ಕರ್ನಾಟಕ ಭಾಗದವರನ್ನೇ ಡೀನ್ ಆಗಿ ನೇಮಕ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಲ್ಯಾಣ ಕರ್ನಾಟಕ ಸಮಿತಿಯಿಂದ ಮನವಿ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಹಿತಾಸಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ಹುದ್ದೆಗಳ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಮನವಿಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡೀನ್ ರಮೇಶ್ ಅವರ ವಿರುದ್ಧ ಕ್ರಮ ಕೈಗೊಂಡು, ಸ್ಥಳೀಯ ಭಾಗದವರ ನೇತೃತ್ವದಲ್ಲಿ ಆಡಳಿತ ನಡೆಸಬೇಕೆಂದು ಆಗ್ರಹಿಸಿದರು.
ಡೀನ್ ಡಾ.ರಮೇಶ ಬಿ.ಎಚ್. ರವರು Non-HK ಪ್ರದೇಶದವರಾಗಿರುವದರಿಂದ Non-HK ಭಾಗದವರಿಗೆ ಹೆಚ್ಚು ಅವಕಾಶ ನೀಡುತ್ತಿದ್ದಾರೆ ಎಂದು ಕಂಡುಬಂದಿದೆ. ಕಳೆದ ವರ್ಷ ರಿಮ್ಸ್ ಸಂಸ್ಥೆಯಡಿಯಲ್ಲಿ ನಡೆಸಲಾಗುತ್ತಿರುವ ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಪ್ರಾಚಾರ್ಯರನ್ನು 371ಜೆ ನಿಯಮದಂತೆ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ವಹಿಸುವಂತೆ ಕೋರಿದರು ಇಲ್ಲಿಯವರೆಗೂ ಕ್ರಮವಹಿಸಿರುವದಿಲ್ಲ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲೆಯಲ್ಲಿ ಅಣುಸ್ಥಾವರ ಸ್ಥಾಪನೆಗೆ ಅನುಮತಿಯಿಲ್ಲ; ಶರಣಪ್ರಕಾಶ ಪಾಟೀಲ್
ಕೂಡಲೇ ಡೀನ್ ವರ್ಗಾಯಿಸಿ ಸ್ಥಳೀಯ ಭಾಗದ ಡೀನ್ ರನ್ನು ನೇಮಿಸಬೇಕು ಹಾಗೂ ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಕಲ್ಯಾಣ್ ಕರ್ನಾಟಕ ಭಾಗದವರಿಗೆ ಪ್ರಾಚಾರ್ಯರನ್ನಾಗಿ ನೇಮಿಸಬೇಕು ಎಂದು ಸಂಘಟನೆಯ ರಾಜ್ಯಾದ್ಯಕ್ಷ ರಜಾಕ ಉಸ್ತಾದ ಒತ್ತಾಯಿಸಿದರು.





