ರಾಯಚೂರು ಜಿಲ್ಲೆ ಸುಲ್ತಾನ್‌ಪುರ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ತನ್ನ ಪತಿಯೊಂದಿಗೆ ಪಾನ್ ಅಂಗಡಿ ನಡೆಸುತ್ತಿರುವ ವಿಜಯಲಕ್ಷ್ಮಿರಾ ಅವರು, ಗುಟ್ಕಾ, ಸಿಗರೇಟ್ ಮಾರಾಟದಿಂದ ದೂರವಿರುವ ಮೂಲಕ ಪ್ರಾಮಾಣಿಕತೆ ಮತ್ತು ನೈತಿಕತೆಯ ಆದರ್ಶವಾಗಿ ಮಿಂಚಿದ್ದಾರೆ. ಅವರ ಈ ಸಮಾಜಮುಖಿ ವ್ಯವಹಾರದ ಕಾರ್ಯತಂತ್ರವನ್ನು ಗೌರವಿಸಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಅವರು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿದರು.
ಗುಟಕಾ ಮತ್ತು ಸಿಗರೇಟ್ ವಿತರಕರು ಹಲವು ಬಾರಿ ವಿಜಯಲಕ್ಷ್ಮಿ ಅವರನ್ನು ಮಾರಾಟ ಮಾಡಲು ಹೇಳಿದರು ಅವರು ತಮ್ಮ ನೈತಿಕ ನಿಲುವಿನಿಂದ ಒಂದಿಂಚೂ ಹಿಂದೆ ಸರಿಯಲಿಲ್ಲ. ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಶರಣಪ್ಪ ಸಲಾದಪುರ, “ಗುಟಕಾ ಮತ್ತು ಸಿಗರೇಟ್‌ನಿಂದ ಆರೋಗ್ಯಕ್ಕೆ ತೀವ್ರ ಹಾನಿಯಾಗುತ್ತದೆ. ವಿಜಯಲಕ್ಷ್ಮಿ ಅವರು ಇಂತಹ ಉತ್ಪನ್ನಗಳನ್ನು ಮಾರಾಟ ಮಾಡದೆ, ಆದರ್ಶ ಜೀವನ ನಡೆಸುತ್ತಿದ್ದಾರೆ. ಇಂತಹ ವ್ಯಕ್ತಿಗಳು ಸಮಾಜದಲ್ಲಿ ವಿರಳವಾಗಿ ಸಿಗುತ್ತಾರೆ,” ಎಂದು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ₹58 ಲಕ್ಷ ಸೈಬರ್ ವಂಚನೆ ಪ್ರಕರಣ; ₹18.29 ಲಕ್ಷ ರಿಕವರಿ
ವಿಜಯಲಕ್ಷ್ಮಿ ಅವರ ಸನ್ಮಾನವು ಆರೋಗ್ಯವಂತ ಮತ್ತು ಸ್ವಸ್ಥ ಸಮಾಜದ ಕಲ್ಪನೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ. “ಅನೇಕರು ಸಮಾಜಕ್ಕೆ ಸಣ್ಣ ಅಥವಾ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತಿದ್ದಾರೆ. ಆದರೆ ಅವರ ಸೇವೆಯನ್ನು ಗುರುತಿಸಿದಾಗ, ಅದು ಇತರರಿಗೆ ಪ್ರೇರಣೆಯಾಗುತ್ತದೆ ತಿಳಿಸಿದರು.





