ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‍ನಲ್ಲಿ ಅಂಗನವಾಡಿ ನೌಕರರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶಿಸಿ ಅಂಗನವಾಡಿ ನೌಕರರ ಸಂಘ(ಸಿಐಟಿಯು) ವತಿಯಿಂದ ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತ ಅಂಗನವಾಡಿ ನೌಕರರು ಕೇಂದ್ರ ಸಚಿವೆ ಅನ್ನಪೂರ್ಣ ಹಾಗೂ ರಾಜ್ಯ ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿ ಬಜೆಟ್ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ಗೂ ಮೊದಲು ಅಂಗನವಾಡಿ ನೌಕರರು ಹೋರಾಟ ಮಾಡಿದಾಗ ಹೋರಾಟಗಾರರ ಜೊತೆ ಮಾತುಕತೆ ನಡೆಸಿದ ಕುಮಾರಸ್ವಾಮಿ ಅವರು ಗೌರವಧನ ಹೆಚ್ಚಳ ಮಾಡಿಸಲು ಭರವಸೆ ನೀಡಿದ್ದರು. ಆದರೆ ಈಗ ಕೇಂದ್ರಸರ್ಕಾರದ ಮೇಲೆ ಒತ್ತಡ ಹಾಕಲು ವಿಫಲರಾಗಿದ್ದಾರೆ. ಅಂಗನವಾಡಿ, ಬಿಸಿಯೂಟ ಕಾರ್ಮಿಕರಿಗೆ ಒಂದು ರೂಪಾಯಿ ಹೆಚ್ಚಳ ಮಾಡಿಲ್ಲ, ಬಜೆಟ್‍ನಲ್ಲಿ ಸ್ಕೀಮ್ ನೌಕರರ ಖಾಯಂ ವಿಚಾರವಾಗಲಿ ಮತ್ತು ಒಂದೇ ಒಂದು ರೂಪಾಯಿ ವೇತನ ಹೆಚ್ಚಳ ಮಾಡದೇ ವಚನಭ್ರಷ್ಟ ಸರ್ಕಾರವಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಕೊಟ್ಟಮಾತಿನಂತೆ ಗೌರವಧನ ಹೆಚ್ಚಳ ಮಾಡಬೇಕು. ಸ್ಕೀಮ್ ನೌಕರರನ್ನು ಖಾಯಂ ಮಾಡಬೇಕು ಅಲ್ಲಿಯವರೆಗೆ ಬೆಲೆ ಏರಿಕೆ ತಕ್ಕಂತೆ ಕನಿಷ್ಠ ವೇತನ 31000 ಸಾವಿರ ಘೋಷಣೆ ಮಾಡಬೇಕು. ಸ್ಕೀಂ ನೌಕರರ ಅನೇಕ ಬೇಡಿಕೆ ಈಡೇರಿಸಲು ಒತ್ತಾಯಿಸಿ ಫೆ.12ರಂದು ಅಖಿಲ ಭಾರತ ಮುಷ್ಕರ ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆಬಿಸಿ ಮುಟ್ಟಿಸುತ್ತೇವೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜೆಸ್ಕಾಂ ಉಗ್ರಾಣಕ್ಕೆ ನುಗ್ಗಿ ಕಳುವು ಯತ್ನ; ಓರ್ವ ಮಹಿಳೆ ಬಂಧನ
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಹೆಚ್.ಪದ್ಮಾ, ಗೋಕಾರಮ್ಮ, ರಹೀಮತ್ ಬೇಗಂ, ಶಾಂತಮ್ಮ, ವರಲಕ್ಷ್ಮೀ, ಇಂದಿರಾ, ಕೆ.ಜಿ ಮಲ್ಲಿಕಾ, ಶರಣಮ್ಮ, ಆಸ್ಮಾಬೇಗಂ, ಚಂದ್ರಕಲಾ, ಶಾಮಲಾ ಸೇರಿದಂತೆ ನೌಕರರು ಭಾಗವಹಿಸಿದ್ದರು.





