ಬಷೀರ್ ಅಹ್ಮದ್ ಅವರು ಅಪ್ಪಟ ಕನ್ನಡಾಭಿಮಾನಿ, ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿಯನ್ನು ಮೈಗೂಡಿಸಿಕೊಂಡು ಕನ್ನಡದಲ್ಲಿ ಹಲವು ಕಥೆ, ಕಾವ್ಯಗಳು ಹಾಗು ಕೃತಿಗಳನ್ನು ಹೊರಜಗತ್ತಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವೆಂದು ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.
ರಾಯಚೂರು ನಗರದ ಕನ್ನಡ ಭವನದಲ್ಲಿ ಬಷೀರ್ ಅಹ್ಮದ್ ಹೊಸಮನಿಯರ ಅರ್ಜುನಾಯಣ ಕಥನ ಕಾವ್ಯ ಸಂಪುಟ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
“ಕನ್ನಡ ಭಾಷೆಯ ಮೇಲೆ ಅವರಿಗಿರುವ ಅಪಾರ ಪ್ರೀತಿಯನ್ನು ನೋಡಿದರೆ ಅವರು ತರುವ ಹೊಸ ಕೃತಿಗಳನ್ನು ಕಾಣಬಹುದು. ನೇರ, ನಿಷ್ಠುರ, ಹೃದಯವಂತಿಕೆ ಉಳ್ಳವರಾಗಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಮೊಗೇರ ಸಮುದಾಯವನ್ನು ಪ್ರವರ್ಗ-1ರ ಪಟ್ಟಿಯಿಂದ ಕೈಬಿಡದಂತೆ ದಸಂಸ ಆಗ್ರಹ
“ಸಾಹಿತಿ ವೀರ ಹನುಮಾನ ಮಾತನಾಡಿ, “ಬಷೀರ್ ಅಹ್ಮದ್ ಅವರು ಅನೇಕ ಕೃತಿಗಳನ್ನು ಹೊರ ತಂದಿದ್ದಾರೆ. ಅವರ ಮತ್ತೊಂದು ಕೃತಿ ಅರ್ಜುನಾಯಣ ಕಥನ ಕಾವ್ಯ ಸಂಪುಟವು ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಅವರ ಕನ್ನಡ ತನದ ಬಗ್ಗೆ ಇರುವ ಗೌರವ ಅಪಾರವಾದದ್ದು ಅನೇಕ ಸಾಹಿತ್ಯಿಕ ಕೃತಿಗಳನ್ನು ನೋಡಿದಾಗ ಅವರು ರಚಿಸಿದ ಅನೇಕ ಕೃತಿಗಳು ವಿಭಿನ್ನವಾಗಿವೆ” ಎಂದು ತಿಳಿಸಿದರು.
ಈ ವೇಳೆ ಯುವಕವಿ ಈರಣ್ಣ ಬೆಂಗಾಲಿ, ಕೃತಿಕರ್ತೃ ಬಶೀರ್ ಅಹ್ಮದ್, ಹೊಸಮನಿ ಪ್ರಕಾಶನದ ಪರ್ವೀನ್ ಬೇಗಂ, ಸಾಹಿತಿ ಲಿಯಾಖತ್ ಅಲಿ ಹೊಸಮನಿ ಸೇರಿದಂತೆ ಇತರರು ಇದ್ದರು.




