ರಾಯಚೂರು | ಅಂಬೇಡ್ಕರ್‌ ಭಾವಚಿತ್ರ ಜಾಹೀರಾತು ನೀಡಿ ಬಿಜೆಪಿ ಆತ್ಮವಂಚನೆ: ದ್ವಾರಕನಾಥ್ ಆರೋಪ

Date:

ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಭಾವಚಿತ್ರವನ್ನು ಜಾಹೀರಾತಿನಲ್ಲಿ ಪ್ರಕಟಿಸುತ್ತಿದ್ದು, ಬಿಜೆಪಿ ಅಂಬೇಡ್ಕರ್‌ ಭಾವಚಿತ್ರವನ್ನು ವ್ಯಾಪಾರಕ್ಕೆ ಬಳಿಸಿಕೊಂಡು ಆತ್ಮದ್ರೋಹ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ಹಾಗೂ ಪ್ರಚಾರ ಸಮಿತಿ ಉಪಾಧ್ಯಕ್ಷ ಡಾ ಸಿ ಎಚ್ ದ್ವಾರಕನಾಥ್ ಆರೋಪಿಸಿದರು.

ರಾಯಚೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಪತ್ರಿಕೆಗಳಿಗೆ ಜಾಹೀರಾತು ನೀಡಿರುವ ಬಿಜೆಪಿಯವರು ಸಂವಿಧಾನವೇ ಧರ್ಮಗ್ರಂಥವೆಂದು ಹೇಳಿಕೊಂಡಿದ್ದಾರೆ. ಸಂವಿಧಾನವನ್ನೇ ಬದಲಿಸುವುದಾಗಿ ಹೇಳಿರುವವರನ್ನು ಏಕೆ ಪಕ್ಷದಿಂದ ಉಚ್ಚಾಟಿಸಲಿಲ್ಲ” ಎಂದು ಪ್ರಶ್ನಿಸಿದರು.

“ಪಕ್ಷದ ಸಂಸದರಾಗಿದ್ದ ಅನಂತಕುಮಾರ ಹೆಗಡೆ, ಮಧ್ಯಪ್ರದೇಶದ ಚುನಾವಣಾ ಅಭ್ಯರ್ಥಿಯಾಗಿರುವ ಜ್ಯೋತಿ ಮಿರ್ಜಾ ಹಾಗೂ ಪ್ರಧಾನಿ ಕಚೇರಿಯ ಆರ್ಥಿಕ ಸಲಹೆಗಾರ ಬಿವೇಟ್ ಡೆಲಬರಾಯ ಇವರು ಸಂವಿಧಾನ ಬದಲಿಸುವುದಾಗಿ ಹೇಳಿದಾಗ ಬಿಜೆಪಿಯವರಿಗೆ ಧರ್ಮಗ್ರಂಥ ನೆನಪಾಗಲಿಲ್ಲವೇ. ಪ್ರಧಾನಿಯವರು ಇಂದಿಗೂ ಈ ಹೇಳಿಕೆಯನ್ನು ನಿರಾಕರಿಸಿಲ್ಲ” ಎಂದು ತರಾಟೆಗೆ ತೆಗೆದುಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ವೋಟ್‌ಬ್ಯಾಂಕ್‌ಗಾಗಿ ಬಿಜೆಪಿ ಆತ್ಮವಂಚನೆ, ಆತ್ಮದ್ರೋಹ ಮಾಡಿಕೊಳ್ಳುತ್ತಿರುವುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಸಹ ಸಂವಿಧಾನವನ್ನು ನಿಧಾನವಾಗಿ ಬದಲಿಸುವುದಾಗಿ ಹೇಳಿಕೆ ನೀಡಿದ್ದಾರೆ. ಪ್ರಧಾನಿಗಳಿಗೆ ಇವ್ಯಾವು ಕೇಳುತ್ತಿಲ್ಲವೇ. ಸಂವಿಧಾನ ಬದಲಿಸುವದಿಲ್ಲವೆಂದು ಹೇಳುವ ಪ್ರಧಾನಿಗೆ ಆತ್ಮ ಇದೆಯೇ” ಎಂದರು.

“ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಕಿತ್ತಿಕೊಳ್ಳುವುದಿಲ್ಲವೆಂದು ಹೇಳುವಾಗ ಆರ್ಥಿಕ ಹಿಂದುಳಿಯುವಿಕೆ ಆಧಾರದ ಮೇಲೆ ಶೇ.10ರಷ್ಟು ಮೀಸಲಾತಿ ನೀಡುವುದಾಗಿ ಹೇಳಿದಾಗ ಮೀಸಲಾತಿ ಮೂಲ ಆಶಯಕ್ಕೆ ಧಕ್ಕೆ ತಂದಂತೆ ಎಂಬುದು ತಿಳಿಯಲಿಲ್ಲವೇ. ಅಲ್ಪಸಂಖ್ಯಾತರಿಗೆ ಮೀಸಲಾತಿ ಧಾರ್ಮಿಕತೆ ಆಧಾರದ ಮೇಲೆ ನೀಡಿಲ್ಲ. ಅನೇಕ ಆಯೋಗಗಳು, ಸುಪ್ರಿಂಕೋರ್ಟಿನ ತೀರ್ಪಿನಲ್ಲಿಯೂ ಮೀಸಲಾತಿ ರದ್ದುಗೊಳಿಸುವಂತೆ ಹೇಳಿಲ್ಲ. ಸಮಾಜಿಕ ಮತ್ತು ಶೈಕ್ಷಣಿಕ ಹಿಂದುಳುವಿಕೆ ಆಧಾರದ ಮೇಲೆ ಮುಸ್ಲಿಂರಿಗೆ ಮೀಸಲಾತಿ ನೀಡಲಾಗಿದೆ. ಆದರೆ ಬಿಜೆಪಿಯರು ತಪ್ಪಾಗಿ ಅರ್ಥೈಸಿ ಅಲ್ಪಸಂಖ್ಯಾತರ ಮೀಸಲಾತಿ ರದ್ದುಗೊಳಿಸುವುದಾಗಿ ಹೇಳುತ್ತಿದ್ದಾರೆ” ಎಂದು ಹೇಳಿದರು.

“ಅಂಬೇಡ್ಕರ್ ಭಾವಚಿತ್ರ ಬಳಸಿಕೊಂಡು ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಿ ಭಾವಚಿತ್ರವನ್ನು ವ್ಯಾಪಾರಕ್ಕಾಗಿ ಬಳಿಸಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.

“ಕೇಂದ್ರ ಗೃಹ ಸಚಿವರು ಸಂಸತ್‌ನಲ್ಲಿಯೇ ಮೀಸಲಾತಿ ರದ್ದುಗೊಳಿಸುವುದಾಗಿ ಹೇಳುತ್ತಾರೆ. ಪ್ರಧಾನಿಗಳು ಮೀಸಲು ರದ್ದುಗೊಳಿಸುವದಿಲ್ಲವೆಂದು ಹೇಳುವ ಮೂಲಕ ದ್ವಂದ್ವ ನೀತಿ ಬಹಿರಂಗವಾಗಿದೆ. ಸಂವಿಧಾನವನ್ನು ಸುಟ್ಟು ಹಾಕಿದವರ ಮೇಲೆ ಯಾವ ಕ್ರಮ ಕೈಗೊಂಡಿದೆ. ಅರುಣ್ ಶೌರಿಯವರು ಸಂವಿಧಾನ ವಿರೋಧಿಸಿ ಪುಸ್ತಕ ಬರೆದರೆ ಯಾವ ಕ್ರಮ ಕೈಗೊಳ್ಳಲಿಲ್ಲ. ಸಮಾಜ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಕೊಡುವುದಾಗಿ ಹೇಳುವ ಬಿಜೆಪಿ ಅಲೆಮಾರಿ ಸಮೂದಾಯಗಳನ್ನು ಜಾತಿ ಪಟ್ಟಿಗೆ ಏಕೆ ಸೇರಿಸಿಲ್ಲ” ಎಂದು ಪ್ರಶ್ನಿಸಿದರು.

“ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ನಂತರ ಅಲೆಮಾರಿಗಳಿಗೆ ಜಾತಿ ಪಟ್ಟಿಗೆ ಸೇರಿಸಿ ಪ್ರತ್ಯಕ್ಷ ಕೋಶ, ನಿಗಮ ಸ್ಥಾಪಿಸಲಾಯಿತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ 89 ಅಲೆಮಾರಿಗಳನ್ನು ಒಂದೇ ಪಟ್ಟಿಗೆ ಸೇರಿ ಶೇ.1 ಮೀಸಲು ನೀಡಿ ಘೋರ ಅನ್ಯಾಯ ಮಾಡಿತ್ತು. ಪ್ರಧಾನಿ ಹುದ್ದೆಯಲ್ಲಿದ್ದು ಸುಳ್ಳು ಹೇಳುವ ನರೇಂದ್ರ ಮೋದಿಯವರು ಸರ್ವಾಧಿಕಾರಿಯಾಗಿದ್ದಾರೆ” ಎಂದರು.

ಆಂಧ್ರದಲ್ಲಿ ಮುಸ್ಲಿಂ ಮೀಸಲಾತಿ ರದ್ದುಗೊಳ್ಳಲು ಧರ್ಮದ ಆಧಾರದ ಮೇಲೆ ಮೀಸಲು ಕೇಳಿದ್ದರಿಂದ ತಿರಸ್ಕರಲಾಗಿದೆ. ರಾಜ್ಯದಲ್ಲಿ ಮುಸ್ಲಿಮರಿಗೆ ಹಿಂದುಳಿದ ವರ್ಗಕ್ಕೆ ಸೇರಿಸಿ ಮೀಸಲಾತಿ ನೀಡಲಾಗುತ್ತಿದೆ. ಸಂವಿಧಾನ ತಿದ್ದುಪಡಿ ಮಾಡುವ ಅಜೆಂಡಾ ಬಿಜೆಪಿ ಹೊಂದಿದೆ. ಕಾಂಗ್ರೆಸ್ ತುರ್ತುಪರಿಸ್ಥಿತಿ ಹೇರಬಾರದಿತ್ತು. ಅದು ಸಂವಿಧಾನ ಬದಲಾವಣೆ ಮಾಡುವುದಾಗಿ ಎಲ್ಲಿಯೂ ಹೇಳಿಲ್ಲ” ಎಂದರು.

“ಪಾಕಿಸ್ತಾನ ಪರ ಘೋಷಣೆ ಕೂಗಿದವರು ಕಾಂಗ್ರೆಸ್ಸಿಗರು ಎಂದು ಎಲ್ಲಿಯೂ ಸಾಬೀತಾಗಿಲ್ಲ. ಅಲೆಮಾರಿಗಳು, ಶೋಷಿತರ ವಿರೋಧಿಯಾಗಿರುವ ಬಿಜೆಪಿಯನ್ನು ಜನರು ಬದಲಾಯಿಸಲು ನಿರ್ಧರಿಸಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಪ್ರಜ್ವಲ್ ರೇವಣ್ಣ ಪ್ರಕರಣ; ಸಿಎಂ, ಡಿಎಸ್‌ಎಂ ವಿರುದ್ಧ ಜೆಡಿಎಸ್‌ ಕಾರ್ಯಕರ್ತರ ಆಕ್ರೋಶ

ಈ ಸಂದರ್ಭದಲ್ಲಿ ರಂಗಮುನಿದಾಸ, ಹುಸೇನಪ್ಪ ವಿಭೂತಿ, ಸಿಂಹಾದ್ರಿ, ತಿಮ್ಮಪ್ಪಸ್ವಾಮಿ, ರಂಗನಾಥ, ಹುಲಿಗೆಪ್ಪ ಮಾಣಿಕ್ಯ, ಈರಣ್ಣ, ರಸ್ತೆಪ್ಪ, ಯಮನೂರಪ್ಪ ಇದ್ದರು.

ವರದಿ : ಹಫೀಜುಲ್ಲ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...