ಮಹಾತ್ಮ ಗಾಂಧೀಜಿಯನ್ನು ಕೊಂದಿದ್ದು ಒಂದು ಸಿದ್ಧಾಂತವಾಗಿದ್ದಂತೆ, ಇದೀಗ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸುವ ಮೂಲಕ ಗಾಂಧೀಜಿ ಹೆಸರನ್ನೇ ಅಳಿಸುವ ಬಿಜೆಪಿ ಆರ್‌ಎಸ್‌ಎಸ್ ಪ್ರಯತ್ನವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ, ಮನರೇಗಾ ಯೋಜನೆಯ ಹೆಸರಿನಲ್ಲಿ ಶ್ರೀರಾಮ ಹೆಸರಿಲ್ಲದೆ ಜನರನ್ನು ಮರೆಮಾಚಲಾಗಿದೆ. ವಿಕಸಿತ ಭಾರತ ಗ್ರಾಮೀಣ ರೋಜಗಾರ್ ಅಜೀವಿಕಾ ಮಿಷನ್ ಗ್ರಾಮೀಣ (ವಿಬೀಜಿ ರಾಮಜಿ) ಎಂಬ ಹೊಸ ಹೆಸರನ್ನು ಉಲ್ಲೇಖಿಸಿ, ಈ ಹೆಸರಿನ ಹಿಂದೆ ಮೋದಿ ಸರ್ಕಾರದ ನಿರ್ಣಯಗಳ ಮೇಲೆ ಆರ್‌ಎಸ್‌ಎಸ್ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತದೆ. ಗಾಂಧಿಯ ಹೆಸರು ಸಹಿಸದೆ ಕಾರಣಕ್ಕೆ ಬದಲಾವಣೆ ಮಾಡಿದ್ದಾರೆ ಎಂದರು.
ಕೇಂದ್ರ ಸರ್ಕಾರ ಕೈಗೊಳ್ಳುವ ಪ್ರತಿಯೊಂದು ನಿರ್ಧಾರದಲ್ಲೂ ಆರ್‌ಎಸ್‌ಎಸ್‌ನ ಸಿದ್ಧಾಂತ ಅಡಗಿದೆ. ಆರ್‌ಎಸ್‌ಎಸ್‌ನ ನಿರ್ಣಯಗಳು ರೈತರು ಹಾಗೂ ಬಡ ಜನರ ವಿರುದ್ಧವಾಗಿವೆ. ಬಿಜೆಪಿ ಆರ್ಎಸ್ ಎಸ್ ನವರ ಕಾಯ್ದೆಗಳು ಬಡವರ ಪರವಾಗಿಲ್ಲ ಶ್ರೀಮಂತರ ಪರವಾಗಿದೆ ಎಂದು ಕಿಡಿಕಾರಿದರು.
ಗ್ರಾಮ ಪಂಚಾಯತಿಗಳ ಯೋಜನೆಗೆ ಕ್ರಿಯಾ ಯೋಜನೆ ರೂಪಿಸಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ಅಧಿಕಾರ ನೀಡಲಾಗಿತ್ತು. ಮನರೇಗಾ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಬಿಜೆಪಿ ಸರಕಾರವು ಗ್ರಾಮ ಪಂಚಾಯತ್ ಹಕ್ಕನ್ನು ಮತ್ತು ಬಡ ಕೂಲಿ ಕಾರ್ಮಿಕರ ಹಕ್ಕನ್ನು ಕಸಿದುಕೊಂಡಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಸೇರಿದಂತೆ ಇಡೀ ದೇಶವ್ಯಾಪ್ತಿ ವಿರೋಧ ವ್ಯಕ್ತವಾಗುತ್ತಿದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲಾ ಉತ್ಸವ ಕಾರ್ಯಕ್ರಮ ಮುಂದೂಡಿಕೆ
ಪತ್ರಿಕಾಗೋಷ್ಠಿಯಲ್ಲಿ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಾನ್ವಿ ಶಾಸಕರಾದ ಹಂಪಯ್ಯ ನಾಯಕ್, ವಿಧಾನ ಪರಿಷತ್ ಸದಸ್ಯ ಎ.ವಸಂತ್ ಕುಮಾರ್, ಶರಣಗೌಡ ಬಯ್ಯಾಪುರ, ಮಾಜಿ ಶಾಸಕ ಡಿ.ಎಸ್. ಹೂಲಿಗೇರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ನಗರಾಭಿವೃದ್ಧಿ ಅಧ್ಯಕ್ಷ ರಾಮಸ್ವಾಮಿ, ರಝಾಕ ಉಸ್ತಾದ್, ಸೇರಿದಂತೆ ಇನ್ನಿತರರು ಇದ್ದರು.





