ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದಲ್ಲಿ ಅನಾಹುತಗಳು ಸಂಭವಿಸುತ್ತಿವೆ. ನಗರದ ವಾರ್ಡ್ ನಂ. 15ರ ಜಾನಿ ಮೊಹಲ್ಲಾ ಪ್ರದೇಶದಲ್ಲಿ ಮನೆಯಲ್ಲಿ ಎದುರು ನಿಲ್ಲಿಸಿದ್ದ ಓಮಿನಿ ಕಾರಿನ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು, ಕಾರು ಸಂಪೂರ್ಣವಾಗಿ ಜಖಂಗೊಂಡು ಅಪ್ಪಚ್ಚಿಯಾಗಿದೆ.
ಈ ಕಾರು ಸ್ಥಳೀಯ ನಿವಾಸಿ ಜಾಫರ್ ಅವರಿಗೆ ಸೇರಿದ್ದು, ಅವರು ಕಿರಾಣಿ ಅಂಗಡಿಗಳಿಗೆ ದಿನಸಿ ಸಾಮಾನುಗಳನ್ನು ಪೂರೈಸುವ ಮೂಲಕ ಜೀವನ ನಡೆಸುತ್ತಿದ್ದರು. ಆದರೆ ಇದೀಗ ಕಾರು ಸಂಪೂರ್ಣ ನಾಶವಾದ ಕಾರಣ ಅವರು ಸಂಕಟಕ್ಕೊಳಗಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಯರಗೇರಾ ಹೋಬಳಿಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ; ಸಿಪಿಐಎಂಎಲ್ ಪ್ರತಿಭಟನೆ
ಕಾರೇ ನಮ್ಮ ಜೀವನಾಧಾರವಾಗಿತ್ತು, ಈಗ ಬದುಕು ಹೇಗೆ ಮುಂದುವರಿಸಬೇಕು ಎಂಬುದು ಗೊತ್ತಾಗುತ್ತಿಲ್ಲ” ಎಂದು ಜಾಫರ್ ಬೇಸರ ವ್ಯಕ್ತಪಡಿಸಿದರು.





