ಚುನಾವಣಾ ಆಯೋಗವನ್ನು ಪೂರ್ಣವಾಗಿ ಹಿತಾಸಕ್ತಿಗೆ ಬಳಸಿಕೊಳ್ಳಲು ಕಾನೂನು ಬದ್ಧವಾಗಿ ಮಾಡಲು ಕೇಂದ್ರ ಬಿಜೆಪಿ ಸರ್ಕಾರ ಆರ್‍ಎಸ್‍ಎಸ್ ಜೊತೆಗೂಡಿಕೊಂಡು ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ನಡೆಸಲಾಗುತ್ತಿದೆ ಎಂದು ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ ಹೇಳಿದರು.
ಅವರಿಂದು ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಎಸ್‍ಐಆರ್ ಹೆಸರಿನಲ್ಲಿ ಮತ ಅಧಿಕಾರಿ ನಿರಾಕರಣೆ ಕುರಿತು ದುಂಡು ಮೇಜಿನ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ ಸಂವಿಧಾನವನ್ನು ಸಮಗ್ರವಾಗಿ ತಿದ್ದುಪಡಿ ಮಾಡುವ ಮೂಲಕ ಹಿಂದೂ ರಾಷ್ಟ್ರ ಮಾಡುವ ಅವಕಾಶವನ್ನು ಬಯಸುತ್ತಿದ್ದರು. ಅದರ ಅವಕಾಶ ಸಿಕ್ಕಿಲ್ಲ
ಎಂಬುವ ಹಪಾಹಪಿ ಆರ್.ಎಸ್.ಎಸ್ ಮತ್ತು ಬಿಜೆಪಿಗೆ ಇದೆ. ಏನಾದರು ಮಾಡಬೇಕು ಎಂಬುವ ಹಿನ್ನೆಯಲ್ಲಿ ಬೇರೆ ಬೇರೆ ವಿಧಾನವನ್ನು ಮಾಡಲು ಮುಂದಾಗಿದ್ದಾರೆ. ಮುಖ್ಯವಾಗಿ ಚುನಾವಣಾ ಆಯೋಗವನ್ನು ಪೂರ್ಣವಾಗಿ ಹಿತಾಸಕ್ತಿಗೆ ಬಳಸಿಕೊಳ್ಳಲು ಕಾನೂನು ಬದ್ಧವಾಗಿ ಮಾಡಲು ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ನಡೆಸಲಾಗುತ್ತಿದೆ.
ಹಿಂದೆಯೂ ಎಸ್‍ಐಆರ್ ನಡೆದಿದೆ. ಆದರೆ ನಿಯಮಗಳು ಬೇರೆಯಾಗಿದ್ದವು. ರಾಜ್ಯದಲ್ಲಿ 2002ರಲ್ಲಿ ನಡೆದಿದೆ. ಆಗ ನಡೆದಿದ್ದೆ ಗೊತ್ತಾಗಿದ್ದಿಲ್ಲ. ಆದ್ದರಿಂದ ರಾಜ್ಯ ಚುನಾವಣಾ ಆಯೋಗಕ್ಕೆ ಆಗ ಕೇಳಿದ್ದ ದಾಖಲೆಗಳ ಪಟ್ಟಿಗಳನ್ನು ನೀಡಿ ಎಂದು ಕೇಳಲಾಗಿತ್ತು ಇಂದಿಗೂ ನೀಡಿಲ್ಲ, ಆ ಪಟ್ಟಿಯಲ್ಲಿ ಇಲ್ಲದಿರುವ ನಿಯಮಗಳು, ಈಗ ಬಂದಿವೆ ಆದ್ದರಿಂದಲೇ ಪಟ್ಟಿಯನ್ನು ಆಯೋಗ ನೀಡುತ್ತಿಲ್ಲ. ಈ ಕುರಿತು ಜನರನ್ನು ಜಾಗೃತಿಗೊಳಿಸಬೇಕಾಗಿದೆ ಎಂದರು.
ಇದೇ ವೇಳೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ.ರಝಾಕ್ ಉಸ್ತಾದ್ ಮಾತನಾಡಿ, ಚುನಾವಣೆಗಳನ್ನು ಗೆಲ್ಲಲು ಬೇಕಾದ
ದಾರಿಗಳನ್ನು ಬಿಜೆಪಿ ಕೇಂದ್ರ ಸರ್ಕಾರ ಕಂಡುಕೊಳ್ಳುತ್ತಿದೆ. ಬಿಹಾರದಲ್ಲಿ 25 ಸಾವಿರಕ್ಕೂ ಹೆಚ್ಚಿನ ಓಟುಗಳನ್ನು ಡಿಲಿಟ್ ಮಾಡಲಾಗಿದೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಲಾಯಿತು. ಅವರ ವಿರುದ್ಧ ಎಫ್‍ಐಆರ್ ದಾಖಲಿಸಲಾಯಿತು. ಇಡೀ ಕಾರ್ಯವನ್ನು ತಮಗೆ ಬೇಕಾದಂತೆ ಮಾಡಿಕೊಂಡಿದ್ದಾರೆ ಎಂಬುವುದು ತಿಳಿಯುತ್ತದೆ ಎಂದರು.
ಬಿಜೆಪಿ ಸರ್ಕಾರಕ್ಕೆ ದೇಶದಲ್ಲಿ ಜನರು ಶಾಂತಿಯಿಂದ ನೆಮ್ಮದಿಯಿಂದ ಬದುಕಬಾರದೆಂಬ ಮನಸ್ಸು ಆರ್.ಎಸ್.ಎಸ್ ಮತ್ತು ಬಿಜೆಪಿಗೆ ಇದೆ. ಅವರು ಆರೋಪ ಮಾಡುವುದೆಲ್ಲ ತಮ್ಮ ವಿರೋಧಿ ಪಕ್ಷದ ರಾಜ್ಯ ಸರ್ಕಾರಗಳ ಮೇಲೆ ಮಾಡುತ್ತಿದ್ದಾರೆ. ತಾವು ಜವಾಬ್ದಾರಿಯಿಂದ ನುಣಿಚಿಕೊಂಡು. ತಮ್ಮ
ಅಸಮರ್ಥತೆಯನ್ನು ದೇಶದ ಜನರ ಮೇಲೆ ಹೇರುವ ಕೆಲಸ
ಮಾಡುತ್ತಿದ್ದಾರೆ. ಆದ್ದರಿಂದ ಎಸ್‍ಐಆರ್ ಮೂಲಕ ಜನರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ತಿಳಿಸಿದರು. ಸಭೆಯನ್ನು ಉದ್ದೇಶೀಸಿ ಅನೇಕ ಮುಖಂಡರುಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮನೆ ಕಳ್ಳತನ ; 88,000 ರೂ ಜಪ್ತಿ ಮೂವರ ಆರೋಪಿ ಬಂಧನ
ಈ ಸಂದರ್ಭದಲ್ಲಿ ಸರ್ವೋದಯ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ
ಮಾಲೀಪಾಟೀಲ್, ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ನಸರತ್, ಸಿಪಿಐಎಂಎಲ್‍ನ ನಾಗರಾಜ ಪೂಜಾರ್, ಸಿಪಿಎಂನ ರಾಜ್ಯ ಕಾರ್ಯದರ್ಶಿ ಚಂದ್ರಪ್ಪ ಹೊಸಕೇರೆ, ಜಿಲ್ಲಾ
ಕಾರ್ಯದರ್ಶಿ ಕೆ.ಜಿ.ವೀರೇಶ, ಖಾಜಾ ಅಸ್ಲಂ , ಜಾನವೆಸ್ಲಿ, ಜೈಭೀಮ್, ಡಿ.ಎಸ್.ಶರಣಬಸವ, ಎಚ್.ಪದ್ಮಾ , ಮಾರೆಪ್ಪ ಹರವಿ, ವಿಜಯಲಕ್ಷ್ಮಿ, ಅಜೀಜ್ ಜಾಗೀರದಾರ ಸೇರಿದಂತೆ ಅನೇಕರಿದ್ದರು.





