ಪ್ರಕೃತಿ ವಿಕೋಪ ಸಂದರ್ಭದಲ್ಲಿ ಶಾಲೆ ನಿರ್ಮಾಣ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಬಾಕಿ ಪಾವತಿ ಮಾಡದೇ ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಸಿಂಧನೂರು ಹಿರಿಯ ಶ್ರೇಣಿಯ ಸತ್ರ ನ್ಯಾಯಾಲಯವು ಜಿಪಂ ಚರಾಸ್ಥಿ ಜಪ್ತಿಗೆ ಆದೇಶ ನೀಡಿದ ಘಟನೆ ಗುರುವಾರ ನಡೆಯಿತು.
2009- 10 ರಲ್ಲಿ ಶಾಲೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದ ಗುತ್ತಿಗೆದಾರರಿಗೆ ಸುಮಾರು 15 ವರ್ಷ ಕಳೆದರೂ ಬಾಕಿ ಹಣ ಪಾವತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಮಗಾರಿ ಬಿಲ್ ಬಿಡುಗಡೆ ಮಾಡುವಂತೆ ಗುತ್ತಿಗೆದಾರರು ಕಾನೂನು ಮೊರೆ ಹೋಗಿದ್ದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಾರ್ವತ್ರಿಕ ಮುಷ್ಕರ; 4 ಕಾರ್ಮಿಕ ಕೋಡ್‌ಗಳ ವಿರೋಧಿಸಿ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ
ಗುತ್ತಿಗೆದಾರ ಚನ್ನಬಸವ ಎಂಬುವರು ಸಿಂಧನೂರು ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಶಾಲೆ ಕೊಠಡಿ ನಿರ್ಮಾಣ ಮಾಡಿದ್ದರು. ಅವರಿಗೆ 2.15 ಲಕ್ಷ ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ 8.22 ಲಕ್ಷ ಹಣ ಪಾವತಿಗೆ ನ್ಯಾಯಾಲಯವು ಆದೇಶದಲ್ಲಿ ಕಾರಣ ಕಾರ ಜಪ್ತಿಗೆ ನ್ಯಾಯಲಯವು ಸಿಬ್ಬಂದಿಗಳು ಮುಂದಾದರು.





