ಮಾದಿಗ ಸಮುದಾಯದ ಯುವಕನಿಗೆ ಜಾತಿ ನಿಂದನೆ ನಡೆಸಿ ಕೊಲೆಗೈದ ಘಟನೆಗೆ ಎರಡು ತಿಂಗಳು ಕಳೆದರೂ, ಆರೋಪಿಗಳನ್ನು ಬಂಧಿಸಿಲ್ಲವೆಂದು ಅಸಮಾಧಾನಗೊಂಡು ಭೀಮ ಆರ್ಮಿ ಸಂಘಟನೆ ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಯಚೂರು ನಗರದ ಎಲ್.ಬಿ.ಎಸ್ ನಗರದ ಚಂದ್ರಬಂಡಾ ರಸ್ತೆಯ ಬಳಿ ಇರುವ ಬಿ. ತಿಮ್ಮಾರೆಡ್ಡಿ ಮನೆಯ ಕಾಂಪೌಂಡ್ ಹತ್ತಿರ ತನ್ನ ಗೆಳೆಯರೊಂದಿಗೆ ನಿಂತಿದ್ದ ರಾಯಚೂರು ನಗರದ ಹರಿಜನವಾಡದ ಮಾದಿಗ ಸಮುದಾಯಕ್ಕೆ ಸೇರಿದ ದಶವಂತ್ ಅಲಿಯಾಸ್ ತಾಯಪ್ಪ ಎಂಬ ದಲಿತ ಯುವಕನನ್ನು ಬಿ. ತಿಮ್ಮಾರೆಡ್ಡಿ ಮತ್ತು ಆತನ ಸಹಚರರು ಜಾತಿ ನಿಂದನೆ ಹಾಗೂ ಗುಂಪು ಹಲ್ಲೆ ನಡೆಸಿ ಕೊಲೆಗೈದಿದ್ದಾರೆ.
ಈ ಕುರಿತು ನಗರದ ಮಾರ್ಕೆಟ್ ಯಾರ್ಡ್ ಪೋಲಿಸ್ ಠಾಣೆಯಲ್ಲಿ ದಿ; 06-10-2025 ರಂದು ಬಿ. ತಿಮ್ಮಾರೆಡ್ಡಿ ಸೇರಿದಂತೆ ಇತರೆ ಐದು ಜನರ ವಿರುದ್ದ ವಿವಿಧ ಪ್ರಕರಣ ದಾಖಲಾಗಿರುತ್ತದೆ. ಜಾಮೀನು ರಹಿತವಾದ ಗಂಭೀರ ಸ್ವರೂಪದ ಪ್ರಕರಣ ದಾಖಲಾಗಿ ಎರಡು ತಿಂಗಳು ಕಳೆದರೂ ಇಲ್ಲಿಯವರೆಗೂ ಒಬ್ಬ ಆರೋಪಿಗಳನ್ನು ಬಂಧನ ಮಾಡಿರುವುದಿಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಖಾಲಿ ಭರವಸೆ; ರೈತರನ್ನು ಮೋಸಗೊಳಿಸಿದ ಕಾಂಗ್ರೆಸ್ ಸರಕಾರ: ಶಾಸಕ ಶಿವರಾಜ ಪಾಟೀಲ ಟೀಕೆ
ಪ್ರತಿಭಟನೆಯಲ್ಲಿ ವಕೀಲರಾದ ಶಿವಕುಮಾರ ಮ್ಯಾಗಳಮನಿ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಎಸಿಪಿ ರಾಜ್ಯಾಧ್ಯಕ್ಷ ಎಲ್.ವಿ. ಸುರೇಶ್, ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಎಸ್. ನರಸಿಂಹಲು, ಮುಖಂಡರಾದ ಹನುಮೇಶ್ ಆರೋಲಿ, ರಂಜಿತ್ ದಂಡೋರಾ, ದೂಳ್ಳಯ್ಯ ಗುಂಜಳ್ಳಿ, ಹನುಮೇಶ್ ಭೇರಿ, ಶಾಂತಕುಮಾರ್, ಜಯರಾಜ್ ಭಂಡಾರಿ, ಪ್ರಸಾದ್, ಅನೀಲ ಕುಮಾರ್, ನೀಲಕಂಠ, ರಾಜು, ಸುರೇಶ್, ಚಿದಾನಂದ, ಅಲಿ ಸೇರಿದಂತೆ ಅನೇಕರಿದ್ದರು.





