ರಾಯಚೂರು | ಬಿಲ್‌ ಪಾವತಿಯಲ್ಲಿ ವಿಳಂಬ ; ಎನ್‌ಡಿ ವಡ್ಡರ್ ಕಂಪನಿ ವಿರುದ್ದ ಗುತ್ತಿಗೆದಾರರ ಅನಿರ್ದಿಷ್ಟಾವಧಿ ಧರಣಿ

Date:

ಬಿಲ್ ಪಾವತಿ ಮಾಡದ ಕಾರಣಕ್ಕೆ ಸಣ್ಣ ಗುತ್ತಿಗೆದಾರರ ದೇವದುರ್ಗ ಘಟಕ ವತಿಯಿಂದ ಎನ್‌ಡಿ ವಡ್ಡರ್ ಕಂಪನಿಯ ಮಾಲೀಕರಾದ ಮಾನಪ್ಪ ವಜ್ಜಲ್ ಇವರ ಧೋರಣೆಯನ್ನು ಖಂಡಿಸಿ ಲಿಂಗೂಗೂರು ಪಟ್ಟಣದ ಸಹಾಯಕ ಆಯುಕ್ತರ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಿದರು.

ಉಪಗುತ್ತಿಗೆದಾರರಿಗೆ ಕಳೆದ ಏಳು ತಿಂಗಳಿಂದ ಒಂದು ರೂಪಾಯಿ ಬಿಲ್ ನೀಡಿಲ್ಲ. ಕಳೆದ ವರ್ಷಗಳಿಂದ ಕಂಪನಿಯ ಮಾಲೀಕರಾದ ಕರಿಯಪ್ಪ ವಜ್ಜಲ್ ಹಾಗೂ ಶಾಸಕ ಮಾನಪ್ಪ ವಜ್ಜಲ್ ಅವರನ್ನು ಹತ್ತಾರು ಬಾರಿ ಭೇಟಿ ನೀಡಿ ಬಿಲ್ ಪಾವತಿ ಮಾಡುವಂತೆ ಮನವಿ ಮಾಡಿದರು ಸ್ಪಂದಿಸಲಿಲ್ಲ. ಬಿಲ್ ಪಾವತಿ ಮಾಡದೇ ಸುಳ್ಳು ಹೇಳುತಾ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಉಪಗುತ್ತಿಗೆ ಪಡೆದ ಶರಣೇಗೌಡ ಸುಂಕೇಶ್ವರಹಾಳ ದೇವದುರ್ಗ ನಾರಾಯಣಪುರ ಬಲದಂಡೆ ಕಾಲುವೆ ಜೀರ್ಣೋದ್ಧಾರ ಹಾಗೂ ದುರಸ್ತಿ ಕಾಮಗಾರಿಯನ್ನು ಎರಡು ಪ್ಯಾಕೇಜ್‌ಗಳಲ್ಲಿ ಒಟ್ಟು 1466 ಕೋಟಿ ಮೊತ್ತದ ಗುತ್ತಿಗೆಯನ್ನು ಪಡೆದ ಎನ್.ಡಿ.ವಡ್ಡರ್ ಮತ್ತು ಕಂಪನಿ ಎರಡನೇ ಪ್ಯಾಕೇಜ್‌ನಲ್ಲಿ ಉಪ ಗುತ್ತಿಗೆಯನ್ನು ನೀಡಿರುವ ಕಂಪನಿ ಕೆಲಸ ಮಾಡಿಸಿಕೊಂಡು ಬಿಲ್ ಪಾವತಿ ಮಾಡದೇ ಉಪ ಗುತ್ತಿಗೆದಾರರಿಗೆ ಪಂಗನಾಮ ಹಾಕಲು ಹೊರಟಿದೆ ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

24-04-2024 ರಂದು ಉಪಗುತ್ತಿಗೆ ಒಪ್ಪಂದವನ್ನು ಮಾಡಿಕೊಂಡು ಡಿಸ್ಟ್ರಿಬ್ಯೂಟರ್ ಗಳ ಒಟ್ಟು 13.5 ಕಿ.ಮೀ. ಕಾಮಗಾರಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಕಾಮಗಾರಿಯ ಅಂದಾಜು ಮೊತ್ತ 4.87 ಕೋಟಿ ರೂ.ಗಳು. ಪಡೆದುಕೊಂಡು 8 ಜನ ಸೇರಿ ಕೊಂಡು ಕಾಮಗಾರಿಯನ್ನು ಮುಗಿಸಿ, ಇಲಾಖೆಯಿಂದ ಕಾಮಗಾರಿ ಮುಗಿದ ಪ್ರಮಾಣ ಪತ್ರವನ್ನು ಸಹ ಪಡೆದಿರುತ್ತೇವೆ. ಆದರೆ ಎನ್.ಡಿ.ವಡ್ಡರ್ ಮತ್ತು ಕಂಪನಿ 1 ವರ್ಷ 6 ತಿಂಗಳು ಗತಿಸಿದರು ನಮಗೆ ಬಿಲ್ ಪಾವತಿ ಮಾಡುತ್ತಿಲ್ಲ. ಉಪ ಗುತ್ತಿಗೆ ಒಪ್ಪಂದದ ಪ್ರಕಾರ ಕಾಮಗಾರಿ ಮುಗಿದ 10 ದಿನಗಳೊಳಗಾಗಿ ಬಿಲ್ ಪಾವತಿ ಮಾಡಬೇಕಾಗಿತ್ತು. ಆದರೆ ಈ ಒಪ್ಪಂದವನ್ನು ಕಂಪನಿ ಉಲ್ಲಂಘಿಸಿ ನಮಗೆ ಬಿಲ್ ಪಾವತಿ ಮಾಡದೇ ತಮ್ಮ ಕಚೇರಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದರು.

ಎನ್‌ಡಿ ವಡ್ಡರ್ ಕಂಪನಿಗೆ ಸರ್ಕಾರ ಹೀಗಾಗಲೇ 375.3 ಕೋಟಿ ಬಿಲ್ ಪಾವತಿ ಮಾಡಿದ್ದರೂ ಸಹ ನಮಗೆ ಇನ್ನು ಬಿಲ್ ಪಾವತಿಯಾಗಿಲ್ಲ ಎಂದು ಸುಳ್ಳು ಹೇಳುವ ಮಾನಪ್ಪ ವಜ್ಜಲ್ ಶಾಸಕನಾಗಿರಲು ಅರ್ಹನಲ್ಲ. ನಮ್ಮ ಬಿಲ್ ಪಾವತಿ ಮಾಡದ ಮಾನಪ್ಪ ವಜ್ಜಲ್ ಕ್ಷೇತ್ರ ಜನತೆಯ ಸಮಸ್ಯೆ ಹೇಗೆ ಪರಿಹಾರ ಮಾಡಲು ಸಾಧ್ಯ. ಅವರಿಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ನಮ್ಮ ಬಿಲ್ ಪಾವತಿ ಮಾಡಬೇಕು ಇಲ್ಲವಾದರೆ ನಮ್ಮ ಪ್ರಾಣ ಹೋಗುವವರೆಗೆಈ ಧರಣಿಯನ್ನು ಕೈಬಿಡುವುದಿಲ್ಲ ಎಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು |ಬಿಲ್ ಪಾವತಿಯಲ್ಲಿ ವಿಳಂಬ ; ಶಾಸಕ ಮಾನಪ್ಪ ವಜ್ಜಲ ಮನೆ ಮುಂದೆ ಉಪವಾಸ ಸತ್ಯಾಗ್ರಹ

ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ತುಕರಾಮ್, ಅಂಜಿನಯ್ಯ ಬಡಿಗೇರ, ಪರಮಾನಂದ ಸಂಕೇಶ್ವರಹಾಳ, ವಿರೇಶ ಹುನಗಂದ್, ಶಿವುಕುಮಾರ ಸಾಹುಕಾರ, ಅಮರೇಶ ಇಟಗಿ, ರಂಗಪ್ಪ ಮುಸ್ಠೂರು, ಆದೇಶ ನಗನೂರು, ಚಿದಾನಂದ ಕಸಬಾಲಿಂಗಸುಗೂರು, ಬಸವರಾಜ ಬಡಿಗೇರ ಸೇರಿ ಇತರರು ಇದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...