ಜನವರಿ 29 ರಿಂದ ಮೂರು ದಿನ ನಡೆಯಬೇಕಿದ್ದ ‘ಎಡೆದೊರೆನಾಡು ರಾಯಚೂರು ಜಿಲ್ಲಾ ಉತ್ಸವ’ ಫೆಬ್ರುವರಿ 6, 7, 8ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತಿಶ್ ಕೆ ಅವರ ಮೌಖಿಕ ಆದೇಶದ ಮೇರೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ ಅವರು ಆದೇಶ ಮಾಡಿದ್ದಾರೆ.
ಈಗಾಗಲೇ ರಾಯಚೂರು ಉತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಯಿಂದ ಜಿಲ್ಲೆಯ ಜನಪ್ರತಿನಿಧಿಗಳ ಸಭೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 22 ಉಪ ಸಮಿತಿಗಳನ್ನು ರಚನೆ ಮಾಡಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಅಧಿಕಾರಿಗಳ ಜೊತೆ ಪೂರ್ವ ಸಿದ್ಧತೆ ಸಭೆ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು |ತಿಂಥಣಿ ಕನಕಗುರು ಪೀಠದ ಸಿದ್ದರಾಮನಂದ ಸ್ವಾಮೀಜಿ ನಿಧನ
ಸುಮಾರು 24 ವರ್ಷಗಳ ನಂತರ ರಾಯಚೂರು ಜಿಲ್ಲಾ ಉತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಈಗ ಕಾರಣಾಂತರಗಳಿಂದ ಜನವರಿ ಬದಲಿಗೆ ಫೆಬ್ರವರಿ 6,7 ಮತ್ತು 8 ಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ ಅವರು ಆದೇಶ ಹೊರಡೊಸಿದ್ದಾರೆ. ಆದರೆ ಮುಂದೂಡಲು ನಿಖರ ಕಾರಣ ತಿಳಿದು ಬಂದಿಲ್ಲ.





