ರಾಯಚೂರು ಜಿಲ್ಲೆಯ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕಕ್ಕೆ ನ.9ರಂದು ನಡೆದ ಚುನಾವಣೆಯಲ್ಲಿ ಆರ್.ಗುರುನಾಥ ಸತತ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಕೆ.ಸತ್ಯನಾರಾಯಣ ಅವರು 17 ಮತಗಳ ಅಂತರದಿಂದ ಪರಾಭವಗೊಂಡರು.
ಪ್ರಧಾನ ಕಾರ್ಯದರ್ಶಿಗಳಾಗಿ ಸಿದ್ದಯ್ಯಸ್ವಾಮಿ ಹಾಗೂ ಖಜಾಂಚಿಯಾಗಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ರಾಜ್ಯ ಸಮಿತಿ ಸದಸ್ಯರಾಗಿ ಬಸವರಾಜ ನಾಗಡದಿನ್ನಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಪಾಧ್ಯಕ್ಷರಾಗಿ ಮಹಾನಂದ ನಾಯಕ, ಸೂಗೂರೇಶ್ವರ ಎಸ್. ಗುಡಿ, ಅಶೋಕ ಬೆನ್ನೂರು ಕಾರ್ಯದರ್ಶಿಯಾಗಿ ಬಸವರಾಜ ಬೋಗಾವತಿ, ಶರಣಯ್ಯ ಒಡೆಯರ್ ಹಾಗೂ ರಾಘವೇಂದ್ರ ಗುಮಾಸ್ತೆ ಆಯ್ಕೆಯಾಗಿದ್ದಾರೆ
ನಗರದ ರಿಪೋಟರ್ಸ್ ಗಿಲ್ಡ್ ಕಾರ್ಯಲಯದಲ್ಲಿ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಮತದಾನ ಮಧ್ಯಾಹ್ನ 3 ಗಂಟೆಯವರಿಗೆ ಶಾಂತಿಯುತ ಭಾಗಶಃ ನೂರರಷ್ಟು ಮತದಾನವಾಗಿತ್ತು. ಮತದಾನ ಮುಗಿಯುತ್ತಿದ್ದಂತೆ ಕಾರ್ಯಾಕಾರಿ ಸಮಿತಿ ಸದಸ್ಯರ ಮತಗಳ ಎಣಿಕೆ ಪ್ರಾರಂಭವಾಯಿತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೆಎಸ್‌ಆರ್‌ಟಿಸಿ ಬಸ್ ಹರಿದು ಓರ್ವ ಬಾಲಕ ಸಾವು, ಇನ್ನೊರ್ವ ಗಂಭೀರ ಗಾಯ
ಗುರುನಾಥ ಪೆನಾಲ್ ನಿಂದ ಲಕ್ಷ್ಮೀ ಪ್ರಸನ್ನ ಜೈನ್, ಪ್ರಕಾಶ ಮಸ್ಕಿ, ಲಕ್ಷ್ಮಣ ಕಪಗಲ್, ನೀಲಕಂಠ ಸ್ವಾಮಿ ದಿನ್ನಿ, ಮುತ್ತಣ್ಣ ಹೆಳವರ್, ಮುಸ್ತಫಾ ಎಂ.ಡಿ, ಹನುಮಂತ ನಾಯಕ, ಅಮರೇಶ ಭೋವಿ, ವಿಶ್ವನಾಥ ಹೂಗಾರ್, ಬಲಭೀಮ್ ರಾವ್ ಕುಲಕರ್ಣಿ,ಎಂ.ಗುಂಡಪ್ಪ ಸೇರಿ 12 ಜನ ಗೆಲುವು ಸಾಧಿಸಿದರೆ, ಕೆ.ಸತ್ಯನಾರಾಯಣ ಪೆನಾಲ್ ನಿಂದ ಚಂದ್ರಶೇಖರ ಯರದಿಹಾಳ, ಉದಯ ಅರೋಲಿ, ಸಿದ್ದನಗೌಡ, ತಾಯಪ್ಪ ಬಿ ಹೊಸೂರು ಗೆಲುವು ಸಾಧಿಸಿದ್ದಾರೆ.





