ರಾಯಚೂರು | ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ – 8 ಜನರ ವಿರುದ್ಧ ಪ್ರಕರಣ, ಒಬ್ಬ ಆರೋಪಿ ಅರೆಸ್ಟ್

Date:

ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೊಬ್ಬರ ಆಸ್ತಿಯನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಎಂಟು ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಈ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ತಾಲೂಕಿನ ಚಂದ್ರಬಂಡಾ ಹೋಬಳಿಯ ಶಾಖಾವಾದಿ ಗ್ರಾಮದ ಸರ್ವೆ 84 ರಲ್ಲಿರುವ ಖಾಸಿಂಸಾಬ್ ಗುಡುಸಾಬ ಎಂಬುವವರ ಹೆಸರಿನ ಜಮೀನನ್ನು ಆಸ್ತಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ಖಾಸಿಂಸಾಬ್ 2013 ರಲ್ಲಿ ಮೃತವಾಗಿದ್ದರೂ ಆಸ್ತಿಯನ್ನು ನೊಂದಣಿ ಮಾಡಿಕೊಂಡಿರುವ ಕುರಿತು ನಗರದ ಪಶ್ಚಿಮ ಠಾಣೆಯಲ್ಲಿ 8 ಜನರ ವಿರುದ್ದ ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ಎಂ.ಡಿ.ಜಾವೀದ್, ಅಕ್ಷಯ ಕುಮಾರ ಭಂಡಾರಿ, ನಕಲಿ ಖಾಸಿಂಸಾಬ್, ಅಕ್ಷಯ ಕುಮಾರ ಭಂಡಾರಿ(ಆರೋಪಿ 3) ಸಬ್ ರಜಿಸ್ಟಾರ್ ಸಿಬ್ಬಂದಿ ಸಲೀಂ ಮೊಹಿನುದ್ದೀನ್, ಸಬ್ ರಿಜಿಸ್ಟ್ರಾರ ಕಚೇರಿಯ ಕೋಸಗಿ ನಾರಾಯಣ, ಎಸ್‌ಡಿಸಿ ಸುರೇಶ, ಪ್ರಹ್ಲಾದ ವಕೀಲ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಾಖಾವಾದಿ ಗ್ರಾಮದ ಖಾಜಾಬೀ ಎಂಬುವವರು ನೀಡಿದ ದೂರಿನ ಮೇರೆಗೆ 2013 ಅಕ್ಟೋಬರ್ 2 ರಂದು ಗುಡ್ ಸಾಬ್ ನಿಧನರಾಗಿದ್ದು, ಇನ್ನು ಜಮೀನು ಆಸ್ತಿ ಪತ್ನಿ ಹೆಸರಿನಲ್ಲಿ ವರ್ಗಾವಣೆಯಾಗಿಲ್ಲ. ಆದರೂ ನಕಲಿ ಆಧಾರ ಕಾರ್ಡ, ಸತ್ತಹೋದ ವ್ಯಕ್ತಿ ಜೀವಂತವಾಗಿರುವುದಾಗಿ ವ್ಯಕ್ತಿಯೊಬ್ಬರನ್ನು ಸಬ್ ರಜಿಸ್ಟ್ರಾರ ಕಚೇರಿ ಸಿಬ್ಬಂದಿ ಭಾಗಿಯಾಗಿ ಆಸ್ತಿಯನ್ನು ಜಿಪಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಜಾತಿ ದೌರ್ಜನ್ಯ ನಿರ್ಮೂಲನೆಗೆ ಒಗ್ಗಟ್ಟಾಗಬೇಕು – ಮೋಹನ್ ಗೋಸ್ಲೆ

ನಕಲಿ ಜಿಪಿಎ ಸೃಷ್ಟಿಸಿರುವ ಆರೋಪದ ಮೇಲೆ ಅಹೇಸಾನ್ ಅಹ್ಮದ ಹಸೀಬ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...