ವಿದ್ಯುತ್ ದುರಸ್ತಿ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಲೈನ್‌ಮ್ಯಾನ್ ಸಾವನ್ನಪ್ಪಿದ ಘಟನೆ ಲಿಂಗಸೂಗುರು ತಾಲ್ಲೂಕಿನ ಗೊರೇಬಾಳ ಗ್ರಾಮದಲ್ಲಿ ಸಂಜೆ ನಡೆದಿದೆ.
ಮೃತಪಟ್ಟಿರುವ ಲೈನ್‌ಮ್ಯಾನ್ ನಾಗರಾಜ ಡೊಳ್ಳಿ ಈಚನಾಳ (32)ಎಂದು ತಿಳಿದು ಬಂದಿದೆ.
ಗೊರೇಬಾಳ ಗ್ರಾಮ ಪಂಚಾಯಿತಿಯಲ್ಲಿ ಲೈನ್‌ಮನ್ ಆಗಿ ನಾಗರಾಜ ಸೇವೆ ಸಲ್ಲಿಸುತ್ತಿದ್ದ. ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯವಾದ ಕಾರಣಕ್ಕೆ ವಿದ್ಯುತ್ ಪರಿವರ್ತಕದಲ್ಲಿ ಪರಿಶೀಲನೆ ವೇಳೆ ವಿದ್ಯುತ್ ತಂತಿ ತಗುಲಿ ಘಟನೆ ಜರುಗಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಚುನಾವಣಾ ಆಯೋಗವನ್ನು ಹಿತಾಸಕ್ತಿಗೆ ಬಳಸಲು ಕೇಂದ್ರ ಸರ್ಕಾರ-ಆರ್‌ಎಸ್‌ಎಸ್ ಸಂಚು: ಕೆ ಪ್ರಕಾಶ
ತಕ್ಷಣವೇ ಸ್ಥಳೀಯರು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮೃತ ಕುಟುಂಬಕ್ಕೆ ಸರಕಾರ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.





