ಲಿಂಗಸುಗೂರು ತಾಲ್ಲೂಕು ಹಟ್ಟಿ ಚಿನ್ನದ ಗಣಿ ಮುಖ್ಯ ದ್ವಾರದ ಮುಂಭಾಗದಲ್ಲಿ ಸ್ಫೋಟಕ ಮದ್ದು ಗುಂಡುಗಳು ರಸ್ತೆ ಮೇಲೆ ಬಿದ್ದಿರುವ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಅಪರಿಚಿತರು ಅಕ್ರಮವಾಗಿ ಸಾಗಿಸುವ ವೇಳೆ ಈ ಮದ್ದು ಗುಂಡುಗಳು ಕೆಳಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ ಸ್ಫೋಟಕ ವಸ್ತುಗಳನ್ನು ಯಾರೋ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಅವುಗಳು ವಾಹನದಿಂದ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಫೋಟಕ ವಸ್ತುಗಳ ಮೂಲ ಮತ್ತು ಸಾಗಾಣಿಕೆ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲಿಂಗಸುಗೂರು | ಎಟಿಎಂ ಕಾರ್ಡ್ ಬದಲಾಯಿಸಿ ಹಣ ದೋಚಿದ ಖದೀಮರು
ಈ ಘಟನೆ ಹಿನ್ನೆಲೆಯಲ್ಲಿ ಗಣಿಯ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.





