ರಾಯಚೂರು | ಖಾಸಗಿ ಬಸ್ ನಲ್ಲಿ ಬೆಂಕಿ ; ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿತು

Date:

ಬೆಂಗಳೂರಿನಿಂದ ರಾಯಚೂರಿನತ್ತ ಬರುತ್ತಿದ್ದ ಖಾಸಗಿ ಗ್ರೀನ್ ಲೈನ್ ಬಸ್‌ನಲ್ಲಿ ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಭಾರಿ ಅನಾಹುತಕ್ಕೆ ತೀರುವ ಹಂತಕ್ಕೆ ತಲುಪಿದ್ದರೂ, ರಾಯಚೂರಿನ ಪ್ರಯಾಣಿಕರೊಬ್ಬರ ಸಮಯ ಪ್ರಜ್ಞೆಯಿಂದ 25 ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ಕೇಂದ್ರದ ಸುಮಾರು 4 ಕಿ.ಮೀ ದೂರದಲ್ಲಿ ರಾತ್ರಿ ಸುಮಾರು 2 ಗಂಟೆಗೆ ಬಸ್ ಹಿಂಬದಿ ಟೈಯರ್ ಬಳಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿತ್ತು, ರಾಯಚೂರಿನ ನಿವಾಸಿ ಹಾಗೂ ಜಿಲ್ಲಾ ಕಾಂಗ್ರೆಸ್ ನ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ನಿರ್ಮಲಾ ಬೆಣ್ಣೆ ಅವರು ಬೆಂಕಿ‌ಯನ್ನು ನೋಡಿ ಚಾಲಕನ ಗಮನಕ್ಕೆ ತಂದರು, ಆದರೆ ಇದನ್ನು ಆಲಿಸದ ಏನೂ ಆಗಿಲ್ಲ ಎಂದು ಚಾಲನೆ ಮುಂದುವರೆಸಿದ್ದಾನೆ. ಎಲ್ಲಾ ಪ್ರಯಾಣಿಕರು ನಿದ್ದೆಯಲ್ಲಿ ಮಗ್ನರಾಗಿದ್ದರು, ಬೆಂಕಿಯ ಕಿಡಿ ಹೆಚ್ಚಾಗಿ ಬಸ್ ಗೆ ಸಂಪೂರ್ಣವಾಗಿ ಆವರಿಸಿ ತೊಡಗಿದಾಗ ಪ್ರಯಾಣಿಕರು ಚಾಲಕನಿಗೆ ತರಾಟೆಗೆ ತೆಗೆದುಕೊಂಡಿದ್ದಾಗ ರಸ್ತೆ ಮಧ್ಯೆ ಬಸ್ ನಿಲ್ಲಿಸಿದ್ದಾನೆ ತಕ್ಷಣವೇ ಪ್ರಯಾಣಿಕರು ಬಸ್ ನಿಂದ ಕೆಲವರು ಜಿಗಿದು ಪ್ರಾಣವನ್ನು ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | RSS ಪಥಸಂಚಲನದಲ್ಲಿ ಪಿಡಿಒ ಭಾಗಿ; ಕ್ರಮಕ್ಕೆ ಒತ್ತಾಯ

ಬಸ್ ನಲ್ಲಿ ಸುಮಾರು 25 ಜನ ರಾಯಚೂರಿನವರು ಪ್ರಯಾಣಿಸುತ್ತಿದ್ದು ಇತರೆ ಜಿಲ್ಲೆಯಿಂದಲೂ ಪ್ರಯಾಣಿಕರು ಬಸ್ ನಲ್ಲಿದ್ದರು, ಅನೇಕರು ಗಡಿ ಬಿಡಿಯಲ್ಲಿ ಬಸ್ ನಿಂದ ತಮ್ಮ ಪ್ರಾಣಾಪಾಯ ಉಳಿಸಿಕೊಂಡಿದ್ದಾರೆ. ಅನೇಕರು ತಮ್ಮ ಮೊಬೈಲ್, ಬೆಂಗಳೂರಿಗೆ ಕೆಲಸದ ನಿಮಿತ್ತ ಹೋಗಿದ ಕೆಲ ಖಾಸಗಿ ಉದ್ಯೋಗಿಗಳ ಲ್ಯಾಪ್ ಟಾಪ್, ಬಸ್ಮವಾಗಿದ್ದು ರಾಯಚೂರಿನ ಯುವಕರೊಬ್ಬರ ಮೆಡಿಕಲ್ ಶಿಕ್ಷಣದ ದಾಖಲೆ ಪ್ರಮಾಣ ಪತ್ರ ಗಳು ಸುಟ್ಟು ಹೋಗಿದೆ ಎಂದು ತಿಳಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬಸ್ ಹೊತ್ತಿ ಉರಿದು ಬೆಂಕಿಗೆ ಆಹುತಿಯಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಎಲ್ಲರೂ ನಿದ್ದೆಯಲ್ಲಿಯೇ ಸಜೀವ ದಹನವಾಗುತ್ತಿದ್ದರೂ, ನಿದ್ರೆಯಲ್ಲಿಯೇ ಚಿರನಿದ್ರೆಗೆ ಜಾರುತ್ತಿದ್ದರೂ ಎಂದು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...