ಬೈಕ್ ಸವಾರನ್ನು ತಡೆದು ನಾಲ್ಕು ಲಕ್ಷ ರೂಗಳ ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಲಿಂಗಸೂಗೂರು ತಾಲ್ಲೂಕು ಮುದಗಲ್ ಪಟ್ಟಣದ ಹತ್ತಿರ ಮಟ್ಟೂರು ರಸ್ತೆಯಲ್ಲಿ ನಡೆದಿದೆ.
ಹಣ ಕಳೆದುಕೊಂಡವರು ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಮುದಗಲ್ ಪಟ್ಟಣದ ಕೆನರಾ ಬ್ಯಾಂಕ್‍ನಿಂದ ಇಂದು ಸಂಜೆ ನಾಲ್ಕು ಲಕ್ಷ ಹಣವನ್ನು ಡ್ರಾ(ಪಡೆದು) ಕೊಂಡು ಬೈಕ್ ಮೇಲೆ ಮುದಗಲ್‍ನಿಂದ ಮಟ್ಟೂರಿಗೆ ಮಲ್ಲಿಕಾರ್ಜುನ ಹಾಗೂ ಪಂಪಣ್ಣ ಎಂಬುವವರು ತೆರಳುತ್ತಿದ್ದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿದ್ಯುತ್ ತಂತಿ ತಗುಲಿ ಲೈನ್ ಮ್ಯಾನ್ ಸಾವು
ಮಟ್ಟೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಬೈಕ್ ತಡೆದ ದುಷ್ಕರ್ಮಿಗಳು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮುದಗಲ್ ಠಾಣೆಯ ಸಿಪಿಐ ಹಾಗೂ ಪಿಎಸ್‍ಐ ವೆಂಕಟೇಶ ಮಾಡಗಿರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





