ಸಂಜೆ ಸುರಿದ ಧಾರಾಕಾರ ಮಳೆಗೆ ಸಿಡಿಲು ಬಡಿದು ಎತ್ತು ಸಾವನ್ನಪ್ಪಿರುವ ಘಟನೆ ದೇವದುರ್ಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿಜಯಕುಮಾರ ಮಾರೆಪ್ಪ ಅವರಿಗೆ ಸೇರಿದ ಎತ್ತು ಎಂದು ಹೇಳಲಾಗಿದೆ.ಗ್ರಾಮದಲ್ಲಿ ಧಾರಾಕಾರ ಮಳೆ ಸಹಿತ ಗುಡುಗು ಸಿಡಿಲು ಪ್ರಾರಂಭವಾಯಿತು. ಮನೆಯ ಮುಂದೆ ಜಾಗದಲ್ಲಿ ಕಟ್ಟಿದ್ದ ಎತ್ತಿಗೆ ಏಕಾಏಕಿ ಸಿಡಿಲು ಬಡಿದಿದೆ ಎಂದು ತಿಳಿದುಬಂದಿದೆ.
ಮನೆಯ ಮುಂದೆ ಬಿದ್ದ ಸಿಡಿಲು ಹೊಡೆತಕ್ಕೆ ಮನೆಯಲ್ಲಿದ್ದ ಕುಟುಂಬಸ್ಥರು ಹಾಗೂ ಸುತ್ತಮುತ್ತ ಜನರು ಭಯಪಟ್ಟರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪ್ರಧಾನಿ ಮೋದಿ ಮೇಲೆ ರಫೇಲ್ ವಿಮಾನ ಹಾರಿಸುವ ರೀತಿ ಪೋಸ್ಟ್; ಯುವಕ ಬಂಧನ
ರೈತನಿಗೆ ಕೂಡಲೇ ಪ್ರಕೃತಿ ವಿಕೋಪ ಪರಿಹಾರ ನಿಧಿ ಯೋಜನೆ ಅಡಿಯಲ್ಲಿ ಪರಿಹಾರ ನೀಡಬೇಕು ಎಂದು ದಲಿತ ಸಂಘಟನೆಯ ಮುಖಂಡ ಜಾಕೋಬ್ ಟೇಲರ್ ಬೊಮ್ಮನಾಳ ಒತ್ತಾಯಿಸಿದ್ದಾರೆ.





