ರಾಯಚೂರಿನ ನಗರದ ಬೀಜನಗೇರಾ ರಸ್ತೆಯ ತಿರುಮಲ ಲೇಔಟ್ ನಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವೃತ್ತಿಪರ ಬಾಲಕರ ವಸತಿ ನಿಲಯದಲ್ಲಿ ಮೂಲಸೌಕರ್ಯ ಕಲ್ಪಿಸಲು ಒತ್ತಾಯಿಸಿ ವಿದ್ಯಾರ್ಥಿಗಳು ಮಧ್ಯರಾತ್ರಿ ಪ್ರತಿಭಟನೆ ನಡೆಸಿದರು.
ವಸತಿನಿಯದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಬೆಡ್ ಗಳಿಲ್ಲ, ಕುಡಿಯುವ ನೀರಿನಬಸಮಸ್ಯೆ, ಸ್ನಾನ ಮಾಡಲುಬಿಸಿ ನೀರಿನ ವ್ಯವಸ್ಥೆ, ಬಕೇಟ್ ಗಳಿಲ್ಲದೇ ಸಮಸ್ಯೆಯಾಗಿದೆ. ಗಣಕಯಂತ್ರ, ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾದ ಪುಸ್ತಕ, ದಿನ ಪತ್ರಿಕೆಗಳು, ಬಕೇಟ್, ಕ್ರೀಡಾ ಸಾಮಗ್ರಿಗಳು ನೀಡಬೇಕೆಂದು ಒತ್ತಾಯಿಸಿದರು.
ವಸತಿ ನಿಲಯದಲ್ಲಿರುವ ಶೌಚಾಲಯಗಳನ್ನು ಸರಿಯಾದ ಸಮಯಕ್ಕೆ ಸ್ವಚ್ಛಗೊಳಿಸದೆ ಬೇಜವಾಬ್ದಾರಿ ತೋರುತ್ತಾರೆ. ಇದರಿಂದ ಹಾಸ್ಟೆಲ್‌ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಆಡಳಿತ ಮಂಡಳಿಗೆ ತಿಳಿಸಿದರೂ ಅಧಿಕಾರಿಗಳು ಗಂಭೀರವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ವಿಷಯ ತಿಳಿದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ ಭೇಟಿ ನೀಡಿ ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಹೋರಾಟ ಹಿಂಪಡೆದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ಮಶಾನದ ಬಳಿ ಅವಧಿ ಮುಗಿಯದ ಔಷಧಿ ತ್ಯಾಜ್ಯ; ಸ್ಥಳೀಯರ ಆಕ್ರೋಶ
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಹನುಮೇಶ ನಾಯಕ, ಸ್ವಾಮಿ ನಾಯಕ, ಕೆ. ನಾಗರಾಜ ನಾಯಕ, ಮಹೇಶ ನಾಯಕ, ನರಸಪ್ಪ ನಾಯಕ, ವೆಂಕಟೇಶ, ಕೃಷ್ಣ, ರವಿಚಂದ್ರ, ಉರುಕುಂದ, ವಿನೋದ, ಶಿವು ಸೇರಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು





