ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪೊಲೀಸ್ ಠಾಣೆ ಕರ್ನಾಟಕ ಪೊಲೀಸ್ ಇಲಾಖೆಯ ಗೌರವವನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದೆ. ದೇಶದ ಅತ್ಯುತ್ತಮ 10 ಠಾಣೆಗಳ ಪೈಕಿ ಪಟ್ಟಿಯಲ್ಲಿ ಕವಿತಾಳ ಠಾಣೆ ೩ ಸ್ಥಾನ ಪಡೆದಿದೆ.
ಜನ ಸಂಪರ್ಕ, ಠಾಣಾ ಕಟ್ಟಡದ ಸುವ್ಯವಸ್ಥೆ, ಸಿಬ್ಬಂದಿ ಶಿಸ್ತು, ಕಾರ್ಯದಕ್ಷತೆ, ಕಡತಗಳ ವಿಲೇವಾರಿ, ಮೂಲಭೂತ ಸೌಕರ್ಯಗಳ ಲಭ್ಯತೆ ಸೇರಿದಂತೆ ಹಲವು ಕಠಿಣ ಮಾನದಂಡಗಳನ್ನು ಪೂರೈಸಿದ ನಂತರ ಈ ಸ್ಥಾನಮಾನ ದೊರೆತಿದೆ.
ಈ ಸ್ಪರ್ಧೆಯಲ್ಲಿ ಜಿಲ್ಲೆಯ ಬಳಗಾನೂರು ಮತ್ತು ಕವಿತಾಳ ಪೊಲೀಸ್ ಠಾಣೆಗಳು ಭಾಗವಹಿಸಿದ್ದು, ವಿವಿಧ ಮಾನದಂಡಗಳ ಮೌಲ್ಯಮಾಪನದ ನಂತರ ಅಂತಿಮವಾಗಿ ಕವಿತಾಳ ಠಾಣೆ ಟಾಪ್–3 ಪಟ್ಟಿಗೆ ಆಯ್ಕೆಗೊಂಡಿದೆ. ಈ ಸಾಧನೆಯೊಂದಿಗೆ ಠಾಣೆಗೆ ಕೇಂದ್ರದಿಂದ ವಿಶೇಷ ಸೌಲಭ್ಯಗಳು ದೊರೆಯಲಿವೆ. ಪೀಠೋಪಕರಣ, ಲ್ಯಾಪ್ಟಾಪ್‌ಗಳು ಸೇರಿದಂತೆ ಹೆಚ್ಚುವರಿ ಮೂಲಸೌಕರ್ಯಗಳನ್ನು ನೀಡಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ದೇವದುರ್ಗ | ನ್ಯಾಯಾಲಯ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನವಿಲ್ಲ; ಸಭಾಧ್ಯಕ್ಷರಿಗೆ ಶಾಸಕಿ ದೂರು
ಕವಿತಾಳ ಠಾಣೆಯ ಪಿಎಸ್‌ಐ ಗುರುಚಂದ್ರ ಯಾದವ್ ಅವರು ನವೆಂಬರ್ 28ರಂದು ಐಐಎಂ ರಾಯಪುರನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮಂತ್ರಿಗಳಿಂದ ಟ್ರೋಫಿಯನ್ನು ಸ್ವೀಕರಿಸಲಿದ್ದಾರೆ. ಈ ಹಿಂದೆ 2021ರಲ್ಲಿ ಮಾನ್ವಿ ಪೊಲೀಸ್ ಠಾಣೆ ರಾಷ್ಟ್ರ ಮಟ್ಟದಲ್ಲಿ ಟಾಪ್–5 ಸ್ಥಾನ ಪಡೆದಿದ್ದರೆ, ಇದೀಗ ಕವಿತಾಳ ಠಾಣೆ ರಾಜ್ಯಕ್ಕೆ ಟಾಪ್–3 ಸ್ಥಾನವನ್ನು ತಂದುಕೊಡುತ್ತದೆ.





