ಕೆಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆ ಬಸ್ ಹರಿದ ಪರಿಣಾಮ ಓರ್ವ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೊರ್ವ ಗಂಭಿರ ಗಾಯಗೊಂಡ ಘಟನೆ ಲಿಂಗಸೂಗೂರು ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮೃತ ಬಾಲಕ ಸಿದ್ದರಾಮ (12) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಧನಂಜಯ (8) ಎನ್ನಲಾಗಿದೆ. ಇಬ್ಬರೂ ಸಹೋದರರಾಗಿದ್ದಾರೆ ಎಂದು ಹೇಳಲಾಗಿದೆ.
ಘಟನೆ ನಡೆದ ಕೂಡಲೇ, ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಗಾಯಾಳು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಿದ್ದರಾಮ ಕೊನೆಯುಸಿರೆಳೆದಿದ್ದಾನೆ. ಕಿರಿಯ ಬಾಲಕ ಧನಂಜಯನಿಗೆ ಎರಡೂ ಕೈಗಳು ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಪ್ರಸ್ತುತ ಧನಂಜಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಂಗನಾಡಿ ಅಡುಗೆ ಸಹಾಯಕಿ ಹುದ್ದೆ ಖಾಯಂಗೊಳಿಸಲು ಒತ್ತಾಯ; 6ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ಲಿಂಗಸೂಗೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.





