ಸುಪ್ರೀಂಕೋರ್ಟ್ ನ್ಯಾಯಾಧೀಶ ಬಿ.ಆರ್.ಗವಾಯಿವರ ಮೇಲೆ ನಡೆದ ಹಲ್ಲೆ ಖಂಡಿಸಿ ಸಿರವಾರ ಪಟ್ಟಣದಲ್ಲಿ ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸವ ವೃತ್ತದಿಂದ, ಬಸ್ ನಿಲ್ದಾಣ ಹಾಗೂ ಕೆಲವು ಮುಖ್ಯ ರಸ್ತೆಗಳ ಮೂಲಕ ತಹಶೀಲ್ದಾರ್ ಕಚೇರಿವರೆಗೆ ತಲುಪಿ ಭಯೋತ್ಪಾದಕ ರಾಕೇಶ ಕಿಶೋರನನ್ನು ಗಡಿಪಾರು ಮಾಡಬೇಕು ಎಂದು ಘೋಷಣೆ ಹಾಕಿ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಪ್ರಗತಿಪರ ಚಿಂತಕ ಉದಯ ಸಾಹುಕಾರ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನದಲ್ಲಿ ಎಲ್ಲರೂ ಗೌರವದಿಂದ ಬದುಕಲು ಅವಕಾಶಗಳನ್ನು ಕಲ್ಪಿಸಿದ್ದಾರೆ. ಜಾತ್ಯತೀತ ಕಲ್ಪನೆಯನ್ನು ಸಹಿಸಲಾರದ ಮನುವಾದಿಗಳು, ದಲಿತರ ಬೆಳವಣಿಗೆಯನ್ನು ಸಹಿಸದೇ ಆಗಾಗ್ಗೆ ಸಂವಿಧಾನದ ಆಶಯಗಳಿಗೆ ಭಂಗ ತರುವ ತಂತ್ರ ಹೂಡುತ್ತಿರುವುದು ತೀವ್ರ ಖಂಡನೀಯ ಎಂದರು.
ಇಂದಿನ ಕಾಲದಲ್ಲೂ ಶೋಷಿತ ವರ್ಗಗಳು ಸುಖವಾಗಿ ಬಾಳಬೇಕೆಂದು ಬಯಸುವುದು ಕೆಲವರಿಗೇ ಅಸಹ್ಯವಾಗಿರುವಂತಿದೆ. ಇಂತಹ ದಿನಮಾನಗಳಲ್ಲಿ ದಲಿತರ ಮತ್ತು ಹಿಂದುಳಿದ ವರ್ಗಗಳ ಪ್ರಗತಿಯನ್ನು ತಡೆಯಲು ಮನುವಾದಿಗಳು ಗುಪ್ತ ಅಜೆಂಡಾವನ್ನು ಮುಂದಿಟ್ಟಿದ್ದಾರೆ. ಒಳವರ್ಮದ ಶೋಷಕ ವ್ಯವಸ್ಥೆಯ ನೆರಳು ಇನ್ನೂ ನಮ್ಮ ಸಮಾಜದ ಮೇಲೆ ತೂಗುತಿದೆ ನಾವೆಲ್ಲರೂ ಒಂದಾಗಿ ನಿಂತು ಈ ವ್ಯವಸ್ಥೆಯ ವಿರುದ್ಧ ಹೋರಾಡಬೇಕಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮುದಗಲ್ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮಾನವ ಬಂಧುತ್ವ ವೇದಿಕೆ ಒತ್ತಾಯ
ಪ್ರತಿಭಟನೆಯಲ್ಲಿ ಬಹುಜನ ಸಮಾಜವಾದಿ ಪಕ್ಷದ ಮುಖಂಡ ಬಸವರಾಜ ಭಂಡಾರಿ, ಮೇಷಕ್ ದೊಡ್ಮನಿ, ಗಂಗಾಧರ, ಆದೇಶ ನಗನೂರು, ವಿಜಯರಾಣಿ, ಇನ್ನಿತರು ಹಾಜರಿದ್ದರು.





