ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನಲ್ಲಿ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆಂಬ ಕಾರಣಕ್ಕೆ ಅಮಾನತುಗೊಂಡಿರುವ ಪಿಡಿಒ ಹಾಗೂ ಶಾಸಕ ಮಾನಪ್ಪ ವಜ್ಜಲ್ ಅವರ ಸಹಾಯಕ ಪ್ರವೀಣಕುಮಾರ ಅವರ ಅಮಾನತಿಗೆ ಶಾಸಕ ಮಾನಪ್ಪ ವಜ್ಜಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯ ಸೇರಿ ದೇಶದ ಹಲವೆಡೆ ಸರ್ಕಾರಿ ನೌಕರರು ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅದರಂತೆ ನನ್ನ ಪಿ.ಎ ಕೂಡ ಭಾಗವಹಿಸಿದ್ದಾನೆ. ಇದು ತಪ್ಪಾಗಿದ್ದರೆ ಸರ್ಕಾರ ನೋಟೀಸ್ ನೀಡಿ ಎಚ್ಚರಿಕೆ ಕೊಡಬೇಕಿತ್ತು ಯಾವುದೇ ಪೂರ್ವ ಸೂಚನೆ ಇಲ್ಲದೆ ನೇರವಾಗಿ ಅಮಾನತು ಮಾಡಿರುವುದು ನ್ಯಾಯಸಂಗತವಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗ್ಯಾರಂಟಿ ಯೋಜನೆಗಳ ಅರ್ಥ ತಿಳಿಯದವರು ಮಾತ್ರ ಅದರ ವಿರುದ್ಧ ಮಾತನಾಡುತ್ತಾರೆ — ಪಾಮಯ್ಯ ಮುರಾರಿ
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ಕ್ರಮ ಕೈಗೊಂಡಿಲ್ಲ, ನನ್ನ ಪಿ.ಎ ಗೆ ಅಮಾನತು ಶಿಕ್ಷೆ ಯಾಕೆ ಎಂದರು.





