ರಾಯಚೂರು ಶಾಖೋತ್ಪನ್ನ ಕೇಂದ್ರ ಮಾತ್ರವಲ್ಲದೆ, ಜಿಲ್ಲೆಯ ಎಲ್ಲಿಯೂ ಅಣುಸ್ಥಾವರ ಸ್ಥಾಪನೆಗೆ ಸಹಮತವಿಲ್ಲ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದು ಸೂಚಿಸಲಾಗಿದೆ ಎಂದು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಅವರಿಂದು ಮಾಧ್ಯಮಗಳೊಂದಿಗೆ ಮಾತನಾಡಿ ಆರ್‌ಟಿಪಿಎಸ್‌ಗೆ ಅಣುಸ್ಥಾವರ ಅಧಿಕಾರಿಗಳು ಭೇಟಿ ನೀಡಿರುವ ಕುರಿತು ಮಾಹಿತಿಯಿಲ್ಲ. ರಾಜ್ಯದೊಂದಿಗೆ ಯಾವುದೇ ಸಮಾಲೋಚನೆಯೂ ನಡೆದಿಲ್ಲ. ಈ ಕುರಿತು ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಲಿಂಗಸೂಗೂರು ತಾಲೂಕಿನ ಹಲ್ಕಾವಟಗಿಯಲ್ಲಿ ಅಣುಸ್ಥಾವರ ಸ್ಥಾಪಿಸುವ ಕುರಿತು ಮಾಹಿತಿ ಕೇಳಿದಾಗ ಜನರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿಯನ್ನು ನೀಡಲಾಗಿದೆ.
ಕೇಂದ್ರ ಸರ್ಕಾರ ಅಣುಸ್ಥಾವರ ಸ್ಥಾಪಿಸುವ ಕುರಿತು ಸ್ಪಷ್ಟತೆಯಿಲ್ಲ. ಅಧಿಕಾರಿಗಳು ಭೇಟಿಯಾದ ಕುರಿತು ಮಾಹಿತಿ ಪಡೆಯಲಾಗುತ್ತದೆ. ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು 40 ಕೋಟಿ ರೂ ವೆಚ್ಚದ ಯಂತ್ರೋಪಕರಣ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ. ಏಮ್ಸ್ ಸ್ಥಾಪನೆಗೆ ಕೇಂದ್ರದ ಮೇಲೆ ಒತ್ತಡ ಹಾಕುವ ಪ್ರಯತ್ನದ ಮುಂದುವರೆದಿದ್ದು ಮುಖ್ಯಮಂತ್ರಿಗಳು ಮತ್ತೊಂದು ಪತ್ರ ಬರೆದು ಆಗ್ರಹಿಸಿದ್ದಾರೆ.
ಮಕ್ಕಳ ಅತ್ಯಾಧುನಿಕ ಆಸ್ಪತ್ರೆ ಸ್ಥಾಪಿಸುವ ಕುರಿತು ಪ್ರಸ್ತಾವನೆಯಿಲ್ಲ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುತ್ತದೆ. ಕೇಂದ್ರ ಸರ್ಕಾರ ಸ್ಥಾಪಿಸುವ ಯಾವುದೇ ಕ್ರಮಗಳು ಸಹ ನಡೆದಿಲ್ಲ ಅಪೌಷ್ಟಿಕತೆ ಹಾಗೂ ಎಸ್‌ಎಸ್‌ಎಲ್ ಸಿ ಫಲಿತಾಂಶ ಹೆಚ್ಚಿಸಲು ಸ್ವಯಂಸೇವಾ ಸಂಸ್ಥೆಯೊಂದಿಗೆ ಸೇರಿ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ. ಶೀಘ್ರದಲ್ಲಿ ರೂಪರೇಷ ರೂಪಿಸಲಾಗುತ್ತದೆ ಎಂದರು.
ಪ್ಯಾರಾ ಮೆಡಿಕಲ್ ಕಾಲೇಜು ಪ್ರವೇಶಕ್ಕೆ ಎಸ್‌ಎಸ್‌ಎಲ್‌ಸಿ ಬದಲು ಪಿಯುಸಿ ಮಾನದಂಡವಾಗಿಸಿರುವ ಶೀಘ್ರದಲ್ಲಿಯೆ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಿ ಕೇಂದ್ರಕ್ಕೆ ಅಭಿಪ್ರಾಯ ರವಾನಿಸಲಾಗುತ್ತದೆ. ನಿಯಮ ಬದಲಾವಣೆ ಪೂರ್ವದಲ್ಲಿ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಯದೇ ನಿರ್ಧಾರವಾಗಿದೆ. ನಾರಾಯಣಪುರ ಬಲದಂಡೆ ಕಾಲುವೆ ಮುಖ್ಯಕಾಲುವೆ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಕೈಗೊಳ್ಳಲು ನೀರಿನ ಲಭ್ಯತೆ ಆಧಾರದ ಮೇಲೆ ಉಳಿದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಕೃಷ್ಣ ಎರಡನೇ ನ್ಯಾಯಾಧೀಕರಣದ ತೀರ್ಪಿನ ಅನ್ವಯ ಪ್ರಕಾರ ನೀರಿನ ಲಭ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಬೇಕಿದೆ ಶೀಘ್ರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.
ದೇವದುರ್ಗ ಶಾಸಕಿ ಜಿ.ಕರೆಮ್ಮ ನಾಯಕ ಅವರ ಮನೆಗೆ ನುಗ್ಗಿರುವ ಪ್ರಕರಣವನ್ನು ನಿರ್ಲಕ್ಷಿಸಿಲ್ಲ, ಈಗಾಗಲೇ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರೋಪಿಗಳನ್ನು ಬಂಧಿಸಲಾಗುತ್ತದೆ. ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಯಾವುದೇ ಹೊಂದಾಣಿಕೆ, ಬೆಂಬಲ ಇಲ್ಲ. ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುವಂತೆ ಡಿಸಿ, ಎಸ್‌ಪಿಯವರಿಗೆ ಸೂಚಿಸಲಾಗಿದೆ. ಟೆಂಡರ್ ಆಗಿರುವ ಮರಳು ಕೇಂದ್ರಗಳಿಂದ ಕಾನೂನು ಬದ್ದವಾಗಿ ವಿಲೇವಾರಿ ನಡೆಸುವಂತೆ ಸೂಚಿಸಲಾಗುತ್ತದೆ. ಯಾವುದೇ ಅಕ್ರಮ ಚಟುವಟಿಕೆಗಳಿಗೆ ನಾನು ಬೆಂಬಲಿಸುವುದಿಲ್ಲ ಹಾಗೂ ಯಾರನ್ನೂ ರಕ್ಷಿಸುವವಿಲ್ಲವೆಂದು ಸ್ಪಷ್ಚಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮದ್ಯಪಾನ ನಿಷೇಧಕ್ಕೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
ಈ ಸಂದರ್ಬದಲ್ಲಿ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಡಿಸಿ ನಿತೀಶ, ಎಸ್ಪಿ ಅರುಣಾಂಶ್ಷುಗಿರಿ, ಜಿ.ಪಂ ಸಿಇಒ ಈಶ್ವರ ಕಾಂದೂ, ಜೋಬಿನ್ ಮಹೋಪಾತ್ರ ಇದ್ದರು.





