ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಓಟ್ ಚೋರ್ ಗದ್ದಿ ಚೋಡ್’ ಎಂಬ ಅಭಿಯಾನವನ್ನು ಯುವ ಕಾಂಗ್ರೆಸ್ ಘಟಕ ವತಿಯಿಂದ ಮನೆ ಮನೆಗೆ ತೆರಳಿ ಸಹಿ ಸಂಗ್ರಹ ನಡೆಸಿದರು.
ಹಟ್ಟಿ ವಿಭಾಗದ ಯುವ ಘಟಕ ಅಧ್ಯಕ್ಷ್ಯ ಲಾಲ್ ಪೀರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಮತಗಳ್ಳತನದ ಬಗ್ಗೆ ಜನರಿಗೆ ಅರಿವು ಮೂಡಿಸಿ ಸಹಿ ಸಂಗ್ರಹಿಸಿದರು.
ಈ ವೇಳೆ ಅಭಿಯಾನ ಉದ್ದೇಶಿಸಿ ಲಾಲ್ ಪೀರ್ ಮಾತನಾಡಿ, ಬಿಜೆಪಿ ಪಕ್ಷವು ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಮತದಾರರ ಪಟ್ಟಿಯನ್ನು ತಿರುಚಿ ಕಳ್ಳಮಾರ್ಗದ ಮೂಲಕ ಅಧಿಕಾರದ ಕುರ್ಚಿ ಹಿಡಿಯಲು ಪ್ರಯತ್ನಿಸುತ್ತಿದೆ. ಮತದಾರರು ಜಾಗೃತರಾಗದೇ ಇದ್ದರೆ ಪ್ರಜಾಪ್ರಭುತ್ವದ ಅಸ್ತಿತ್ವವೇ ಅಪಾಯದಲ್ಲಾಗಬಹುದು “ನಮ್ಮ ಮತ ನಮ್ಮ ಹಕ್ಕು. ಈ ಹಕ್ಕಿನ ದುರುಪಯೋಗವನ್ನು ತಡೆಯುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ,” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು |RSS ಪಥಸಂಚಲನದಲ್ಲಿ ಭಾಗಿಯಾದ ಪಿಡಿಒ ಅಮಾನತು : ಶಾಸಕ ಮಾನಪ್ಪ ವಜ್ಜಲ್ ಆಕ್ರೋಶ
ಈ ವೇಳೆ ಕಾಂಗ್ರೆಸ್ ಯುವ ಮುಖಂಡರಾದ ಅಸೀಫ್, ಮಲ್ಲಣ್ಣ, ಮಹಮ್ಮದ್ ಸಾದೀಕ್, ಶಂಶುದ್ದೀನ್ ಮತ್ತಿತರರು ಇದ್ದರು





