ವಿಚಾರಣೆಗೆಂದು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿದ ಪತಿ ರಾಮಪ್ಪ ಹಾಗೂ ಪತ್ನಿ ಸಕ್ಕುಬಾಯಿ ಇಬ್ಬರನ್ನು ಲಿಂಗಸೂಗೂರು ತಾಲ್ಲೂಕು ಮುದಗಲ್ ಠಾಣೆಯ ಪೊಲೀಸರು ಬಂಧಿಸಿದರು.
ಮುದಗಲ್ ಪಟ್ಟಣ ವ್ಯಾಪ್ತಿಯ ಮಟ್ಟೂರು ತಾಂಡಕ್ಕೆ ಪ್ರಕರಣ ಒಂದರ ವಿಚಾರಣೆಗೆ ಆರೋಪಿಯನ್ನು ಕರೆತರಲು ಹೋದ ಮುದಗಲ್ ಠಾಣೆ ಎ.ಎಸ್.ಐ ವೆಂಕಟಪ್ಪ ನಾಯಕ್ ಹಾಗೂ ಪಿಎಸ್‌ಐ ವೆಂಕಟೇಶ ಮಾಡಗೇರಿ ಅವರ ಮೇಲೆ ಹಲ್ಲೆ ಮಾಡಿದ್ದರು.
ಪ್ರಕರಣ ಒಂದರ ದೂರುದಾರನ ಮಗ ರಾಘವೇಂದ್ರ ಎಂಬುವವರಿಗೆ ಕಂಬಕ್ಕೆ ಕಟ್ಟಿ ಹೊಡೆದಿದ್ದರು, ವಿಚಾರಣೆ ಮಾಡಲು ಹೋದಾಗ ರಾಮಪ್ಪ ಹಾಗೂ ಆತನ ಪತ್ನಿ ಸಕ್ಕುಬಾಯಿ ಮೊದಲು ಎಸ್ಐ ವೆಂಕಟಪ್ಪ ಅವರಿಗೆ ಹಲ್ಲೆ ಮಾಡಿದ್ದರು, ಬಳಿಕ ವೀಡಿಯೋ ಚಿತ್ರೀಕರಣ ಮಾಡುವಾಗ ಮೊಬೈಲ್ ಕಸಿದುಕೊಂಡು ಸಕ್ಕುಬಾಯಿ ತನ್ನ ಎದೆಯ ಭಾಗದಲ್ಲಿ ಇಟ್ಟುಕೊಂಡು ಮೋಬೈಲ್ ಕೊಡದೇ ಸತಾಯಿಸಿದ್ದಾಳೆ, ಬಳಿಕ ಸ್ಥಳಕ್ಕೆ ಬಂದ ಪಿಎಸ್ಐ ವೆಂಕಟೇಶ ಅವರ ಜೊತೆ ವಾಗ್ವಾದ ನಡೆಸಿ ಗುಪ್ತಾಂಗಕ್ಕೆ ಹಲ್ಲೆ ಮಾಡಿ ಹಿಚುಕಿದ್ದಾಳೆ ಇಷ್ಟೇ ಅಲ್ಲದೇ ಪೊಲೀಸರ ಬೈಕ್ ಕೀ ಕಸಿದುಕೊಂಡು ತಮ್ಮಮನೆಯಲ್ಲಿ ಬೈಕ್ ಇಟ್ಟುಕೊಂಡಿದ್ದಾಳೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು
ಘಟನೆಯ ಬಳಿಕ ಹಲ್ಲೆಗೊಳಗಾದ ಪಿಎಸ್ಐ ಹಾಗೂ ಎಸ್ಐ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮುದಗಲ್ ಪೊಲೀಸ್ ಪಡೆಗಳ ಠಾಣೆಯಲ್ಲಿ ದೂರು ದಾಖಲಾಗಿದ್ದು ಇಬ್ಬರನ್ನು ಬಂದಿಸಿ ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.





