ಸರ್ಕಾರಿ ಮಂಜೂರಿ ಪಡೆದ ಫಲಾನುಭವಿಗಳ ಜಮೀನಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಉಪಕೇಂದ್ರವನ್ನು ಸ್ಥಾಪಿಸಲು ಮುಂದಾಗಿರುವ ಕ್ರಮವನ್ನು ತಕ್ಷಣವೇ ರದ್ದುಪಡಿಸಿ, ಅದನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಭೂಮಿ ವಸತಿ ಹಕ್ಕು ವಂಚಿತರ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಾಯಚೂರು ತಾಲ್ಲೂಕಿನ ಚಂದ್ರಬಂಡಾ ಹೋಬಳಿಯ ಅರಸೀಗೆರಾ ಸೀಮಾಂತರದಲ್ಲಿ ಬರುವ ಜಮೀನಿನ ಸರ್ವೇ 162/*/” ರಲ್ಲಿ ವಿಸ್ತೀರ್ಣ 70 ಎಕರೆ 22 ಗುಂಟೆ ಜಮೀನುನಲ್ಲಿ ಸಾರ್ವಜನಿಕ ರುದ್ರ ಭೂಮಿಗಾಗಿ 02 ಎಕರೆ ಹಾಗೂ ಇಲ್ಲಿನ ಮಕ್ಕಳ ವಿದ್ಯಾಬ್ಯಾಸಕ್ಕಾಗಿ 05 ಎಕರೆ ಶಾಲಾ ಜಾಗಕ್ಕಾಗಿ ಕಾಯ್ದಿರಿಸಲಾಗಿದೆ ಹಾಗೂ 09 ಫಲಾನುಭವಿಗಳಿಗೆ ಪಹಣಿ ನೀಡಿರುತ್ತಾರೆ ಕೂಡಲೇ ಆದೇಶವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಸುಮಾರು ಕಳೆದ 34 ವರ್ಷಗಳಿಂದೆ ಭೂ ಮಂಜೂರಿ ಸಮಿತಿಯು ತಲಾ ಒಬ್ಬೊಬ್ಬರಿಗೆ ಎರಡ್ಮೂರು ಎಕರೆಯಂತೆ ಹೀಗೆ ಒಟ್ಟು 09 ಫಲಾನುಭವಿಗಳಿಗೆ ಕಳೆದ 34 ವರ್ಷಗಳಿಂದ ಮಂಜೂರಾಗಿದ್ದ ಭೂಮಿಯಲ್ಲಿ ಸಾಗುವಳಿ ಮಾಡುತ್ತಾ 09 ಜನರ ಹೆಸರಿನಲ್ಲಿ ಪಹಣಿಯನ್ನು ಮಾಡಿರುತ್ತಾರೆ ಕೂಡಲೇ ಕೈಬಿಡಬೇಕು. ಸರ್ಕಾರದ ಸಾಮಾಜಿಕ ನ್ಯಾಯದ ಉದ್ದೇಶದಡಿ ಮಂಜೂರಾದ ಫಲಾನುಭವಿಗಳ ಜಮೀನನ್ನು ಬಲವಂತವಾಗಿ ವಶಪಡಿಸಿಕೊಳ್ಳುವ ಕ್ರಮ ಅಕ್ಷಮ್ಯವಾಗಿದ್ದು, ಇದರಿಂದ ಬಡ ಮತ್ತು ಹಿಂದುಳಿದ ವರ್ಗದ ಜನರ ಬದುಕಿಗೆ ಧಕ್ಕೆಯಾಗುತ್ತದೆ. ಉಪಕೇಂದ್ರ ಸ್ಥಾಪನೆಗೆ ಪರ್ಯಾಯವಾಗಿ ಸರ್ಕಾರಿ ಬಯಲು ಜಮೀನು ಅಥವಾ ಕೈಗಾರಿಕಾ ಬಳಕೆಗೆ ಮೀಸಲಾದ ಪ್ರದೇಶವನ್ನು ಆಯ್ಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾರೆಪ್ಪ ಹರವಿ ಮಾತನಾಡಿ, ಫಲಾನುಭವಿಗಳ ಜಮೀನು ಅವರ ಬದುಕಿನ ಏಕೈಕ ಆಧಾರ. ಅಭಿವೃದ್ಧಿಯ ಹೆಸರಿನಲ್ಲಿ ಅವರ ಹಕ್ಕುಗಳನ್ನು ಕಸಿದುಕೊಳ್ಳಲು ಬಿಡುವುದಿಲ್ಲ. ಈ ಯೋಜನೆಯನ್ನು ತಕ್ಷಣವೇ ರದ್ದುಪಡಿಸಿ, ಬೇರೆ ಕಡೆ ಸ್ಥಳಾಂತರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎಂಪಿಸಿಎಲ್- ಕೃಷ್ಣಬ್ರಿಡ್ಜ್ ರಸ್ತೆಯಲ್ಲಿ ನಿಲ್ಲದ ರಸ್ತೆ ಅಪಘಾತ
ಪ್ರತಿಭಟನೆಯಲ್ಲಿ ಆಂಜನೇಯ ಕುರುಬದೊಡ್ಡಿ, ಹನುಮಂತ ಗುಂಗಳ್ಳಿ, ಎದ್ದೇಳು ಕರ್ನಾಟಕ ಜಿಲ್ಲಾಸಂಚಾಲಕ ಶರಣುಕುಮಾರ ಮದ್ದಮ್ಮಗುಡ್ಡಿ, ಬಂಗಾರಿ ನರಸಿಂಹ, ರಂಗರೆಡ್ಡಿ ಜೇಗರಕಲ್, ಸುರೇಶ ನಾಯಕ ಇನ್ನಿತರರು ಇದ್ದರು.





