ರಾಜ್ಯದಲ್ಲಿ ಮಧ್ಯಪಾನ ನಿಷೇಧಕ್ಕೆ ಗ್ರಾಮ ಪಂಚಾಯಿತಿಗಳಿಗೆ ಪರಮಾಧಿಕಾರ ನೀಡುವುದು, ಅಕ್ರಮ ಮದ್ಯ ಸಾಗಾಣೆ ತಡೆಯಲು ಆಗ್ರಹಿಸಿ ಮದ್ಯ ನಿಷೇಧ ಆಂದೋಲನ ಕರ್ನಾಟಕದಿಂದ ನ.25 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಹಿಳೆಯರ ಸತ್ಯಾಗ್ರಹ ಪ್ರಾರಂಭಿಸಲಾಗುತ್ತದೆ ಎಂದು ಸಂಘಟನೆ ವಿರುಪಮ್ಮ ಹೇಳಿದರು.
ಗುರುವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ದೇಶದ ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಲ್ಲಿಯ ಗ್ರಾಮಸಭೆಗಳ ನಿರ್ಣಯವೇ ಅಂತಿಮವಾಗಿದೆ. ಗ್ರಾಮಸಭೆಯಲ್ಲಿ ಶೇ.20 ಮಹಿಳೆಯರು ಸಹಿ ನೀಡಿ ಒಪ್ಪಿಗೆ ನೀಡಿದರೆ ಮದ್ಯದಂಗಡಿ ತೆಗೆಯಲು ಪರವಾನಿಗೆ ರದ್ದುಗೊಳಿಸಲಾಗುತ್ತದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಜಾರಿಗೊಳಿಸಬೇಕುʼ ಎಂದು ಒತ್ತಾಯಿಸಿದರು.
ʼ2016 ವರೆಗೆ ಗ್ರಾಮ ಸಭೆಗಳಿಗೆ ಇರುವ ಅಧಿಕಾರವನ್ನು ರಾಜ್ಯದಲ್ಲಿ ತೆಗೆದುಹಾಕಿದ್ದು ಮರು ಸ್ಥಾಪಿಸಬೇಕು. ರಾಜ್ಯದ ಮನೆಗಳಲ್ಲಿ, ಪಾನ ಶಾಪ್, ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸಲಾಗುತ್ತಿದೆ. ಅಬಕಾರಿ ಇಲಾಖೆ ಸೇರಿದಂತೆ ಸಂಬಂಧಿಸಿ ಇಲಾಖೆಗಳಿಗೆ ಲಿಖಿತ ದೂರು ನೀಡಿದರೂ ಯಾವುದೇ ಕ್ರಮವಾಗಿಲ್ಲ. ಕೂಡಲೇ ಮಹಿಳೆಯರ ಜಾಗೃತ ಸಮಿತಿಗಳಿಗೆ ಅರೆ ನ್ಯಾಯಿಕ ಅಧಿಕಾರ ನೀಡಬೇಕುʼ ಎಂದರು.
ಡಾ.ಶಾರದಾ ನಾಯಕ ಮಾತನಾಡಿ, ‘ಮದ್ಯ ಸೇವನೆಯಿಂದ ಕುಟುಂಬ, ಸಮಾಜದ ಸ್ವಾಸ್ಥ ಹಾಳಾಗುತ್ತಿದೆ. ಕೂಡಲೇ ಮದ್ಯಪಾನ ನಿಷೇಧಕ್ಕೆ ಸರ್ಕಾರ ಮುಂದಾಗಬೇಕಿದೆ. ಅಬಕಾರಿ ಆದಾಯದ ಮೇಲೆ ಸರ್ಕಾರ ಅವಲಂಬಿತವಾಗಿರುವುದನ್ನು ತಪ್ಪಿಸಿ ನೂರಾರು ಮಹಿಳೆಯರನ್ನು ಸರ್ಕಾರ ರಕ್ಷಣೆ ಮಾಡಬೇಕಿದೆ’ ಎಂದರು.
ಈ ಸಂದರ್ಭದಲ್ಲಿ ಹುಚ್ಚಮ್ಮ, ಮಾರೆಮ್ಮ,ಗುರುರಾಜ ಇದ್ದರು.
ಇದನ್ನೂ ಓದಿ : ಬೀದರ್ | ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನೆರೆಹೊರೆಯವರ ಹಕ್ಕುಗಳ ರಾಷ್ಟ್ರೀಯ ಅಭಿಯಾನ





