ಸಂಜೆ ಸುರಿದ ಧಾರಾಕಾರ ಮಳೆಗೆ ಸಿಡಿಲು ಬಡಿದು ಕುರಿಗಾಹಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆ ಅರಕೇರಾ ತಾಲ್ಲೂಕಿನ ಭೋಗಿ ರಾಮನ ಗುಂಡ ಗ್ರಾಮದಲ್ಲಿ ನಡೆದಿದೆ.
ಹನುಮಗೌಡ ಬಾಲಪ್ಪ ನಾಯಕ ಮುದಕಿ (16) ಮೃತಪಟ್ಟಿರುವ ಕುರಿಗಾಹಿ ಎಂದು ಗುರುತಿಸಲಾಗಿದೆ.
ಬಾಲಕ ಗ್ರಾಮದ ಹೊರ ವಲಯದಲ್ಲಿ ಶಂಕರಬಂಡಿ ಹೊಲದಲ್ಲಿ ಕುರಿ ಮೇಹಿಸುತ್ತಿರುವ ಸಂದರ್ಭದಲ್ಲಿ ಮಳೆ,ಗಾಳಿ ಪ್ರಾರಂಭಗೊಂಡಿದೆ.ತಕ್ಷಣವೇ ಎಲ್ಲಾ ಕುರಿಗಳನ್ನು ಒಂದು ಕಡೆ ಸೇರಿಸುತ್ತಿರುವ ಸಂದರ್ಭದಲ್ಲಿ ಸಿಡಿಲು ಬಡಿದಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಇಡ್ಲಿ ತಿನ್ನುವ ವಿಚಾರಕ್ಕೆ ಜಗಳ; ಯುವಕನ ಬರ್ಬರ ಕೊಲೆ
ಬಾಲಕನು ಈ ಬಾರಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿದ್ದ ಎಂದು ಮಾಹಿತಿ ನಿವಾಸಿಯೊಬ್ಬರು ತಿಳಿಸಿದರು.ಸಿಡಿಲು ಬಡಿದ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿ ನರಸಪ್ಪ ಲೆಕ್ಕೇಪ್ಪ ನಾಯಕ ತಿಳಿಸಿದ್ದಾರೆ.





