ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾದಿಗ ಸಮುದಾಯದ ಸದಸ್ಯರು ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯಾಗುವ ಮೂಲಕ ಸುದೀರ್ಘ ಮೂರು ದಶಕಗಳ ಹೋರಾಟಕ್ಕೆ ಫಲ ಸಿಕ್ಕ ಖುಷಿಯಾಗಿ ಸಮುದಾಯದ ಬಂಧುಗಳು ಸಿಹಿ ಹಂಚಿ ಸಂಭ್ರಮಿಸಿದರು.
ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ನೀಡಿದ ಹಿನ್ನೆಲೆ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಅದನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ, ಒಳಮೀಸಲಾತಿ ಜಾರಿಯಾಗಲು ತಮ್ಮದೇ ಆದ ಪ್ರಭಾವ, ಚಾಣಕ್ಯ ನೀತಿ, ಹಗಲಿರುಳು ಶ್ರಮ ಮತ್ತು ಇಡೀ ರಾಜ್ಯದಲ್ಲಿ ಸಂಚಾರ ಮಾಡಿ ಮಾದಿಗ ಸಮುದಾಯದಲ್ಲಿ ಸಮೀಕ್ಷೆ ಹಾಗೂ ಜಾಗೃತಿ ಮೂಡಿಸಿದ ಮಾಜಿ ಸಚಿವ, ಶೋಷಿತರ ಗಟ್ಟಿಧ್ವನಿ ಎಂದೇ ಪ್ರಸಿದ್ಧರಾದ ಹೆಚ್. ಆಂಜನೇಯ ಅವರ ಪಾತ್ರವನ್ನು ಸ್ಮರಿಸಲಾಯಿತು.
ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮತ್ತು ಪುಷ್ಪವೃಷ್ಠಿ ಮಾಡುವ ಮೂಲಕ ಆಂಜನೇಯ ಅವರಿಗೆ ವಿಶೇಷ ಅಭಿನಂದನೆ, ಗೌರವ ಹಾಗೂ ಕೃತಜ್ಞತೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕದ ಗದ್ದರ್ ಎಂದು ಖ್ಯಾತಿ ಪಡೆದು, ನಾಡಿನಾದ್ಯಂತ ತನ್ನ ಕ್ರಾಂತಿಕಾರಿ ಗೀತೆಗಳು ಮೂಲಕ ಒಳಮಿಸಲಾತಿ ಜಾಗೃತಿಯನ್ನು ಮೂಡಿಸಿದಂತ ಅಂಬಣ್ಣ ಆರೋಲಿಕರ್ ಅವರು ಮಾತನಾಡಿ 30 ವರ್ಷಗಳ ಸುದೀರ್ಘ ಹೋರಾಟದಲ್ಲಿ ತನ್ನೊಡನೆ ಭಾಗಿಯಾದ ಸರ್ವರಿಗೂ ಕೂಡ ಅಭಿನಂದನೆಯನ್ನು ಕೃತಜ್ಞತೆಯನ್ನು ಸಲ್ಲಿಸಿ, ತನ್ನ ಜೀವನದ ಸಾರ್ಥಕತೆಯ ನಿರಾಳ ಭಾವನೆ ವ್ಯಕ್ತಪಡಿಸಿ, ಈ ಒಳ ಮೀಸಲಾತಿ ಜಾರಿ ಮಾದಿಗ ಸಮುದಾಯದವರಿಗೆ ದಾಸ್ಯದಿಂದ ಮುಕ್ತಗೊಳಿಸಿ, ನಿಜ ಸ್ವಾತಂತ್ರವನ್ನು ನೀಡಿದಂತಹ ಸಾರ್ಥಕತೆಯ ಹರ್ಷವನ್ನು ವ್ಯಕ್ತಪಡಿಸುತ್ತಾ ಅಲೆಮಾರಿಗಳಿಗೂ ಕೂಡ ಅತಿ ಶೀಘ್ರದಲ್ಲೇ ನ್ಯಾಯ ದೊರೆಯುತ್ತದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ರಾಯಚೂರು |ಆರೋಗ್ಯ ಕೇಂದ್ರದಲ್ಲಿ ನಿರ್ಲಕ್ಷ್ಯ – ತಾಯಿಯ ಗರ್ಭದಲ್ಲೇ ಮಗು ಸಾವು
ಹೋರಾಟಗಾರ ಜೆ.ಬಿ.ರಾಜು, ಅಬ್ರಹಾಂ, ಜಾಕೋಬ್, ಶರಣು ತುಗ್ಗಲದಿನ್ನಿ, ಕೆ.ಪಿ.ಅನಿಲ್ ಕುಮಾರ್, ಜನಾರ್ಧನ್, ಜಯ್ಯಪ್ಪ ಶಿರವಾರ ಸೇರಿದಂತೆ ನೂರಾರು ಸಂಖ್ಯೆಯ ಒಳಮೀಸಲಾತಿ ಫಲಾನುಭವಿಗಳು ಮತ್ತು ಆಂಜನೇಯ ಅವರು ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





