ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದ ವಿದ್ಯಾರ್ಥಿಗೆ ನಾನು ಒಂದು ತೊಲ ಬಂಗಾರವನ್ನು ಬಹುಮಾನವಾಗಿ ನೀಡುವೆ ಎಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಹೇಳಿದರು.
ರಾಯಚೂರು ತಾಲ್ಲೂಕಿನ ಉಡಮಗಲ್ ಖಾನಾಪುರ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾತನಾಡಿದ ಅವರು, ‘ಉಡಮಗಲ್ ಖಾನಾಪುರ ಸರ್ಕಾರಿ ಪ್ರೌಢ ಶಾಲೆಯ ಯಾವುದೇ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೂರ್ತಿ ಅಂಕ ಪಡೆದರೆ ನನ್ನ ಕಡೆಯಿಂದ ನೀಡುತ್ತೇನೆ’ ಎಂದು ಭರವಸೆ ನೀಡಿದರು.
‘ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ವಿವಿಧ ಹುದ್ದೆಗಳನ್ನು ಆಯ್ಕೆ ಮಾಡಬಹುದು. ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸುವುದಕ್ಕೆ ಪರಿಶ್ರಮಿಸಬೇಕು’ ಎಂದು ಸಲಹೆ ನೀಡಿದರು.
ಸಾಕ್ಷರತಾ ನೋಡಲ್ ಅಧಿಕಾರಿ ದಂಡಪ್ಪ ಬಿರಾದಾರ, ಮುಖ್ಯ ಶಿಕ್ಷಕ ವೀರೇಶ ಅಂಗಡಿ, ಉಪ ತಹಶೀಲ್ದಾರ್ ಮಹಮ್ಮದ್ ಮುಸ್ತಾಕ್ ಅಹಮದ್, ಕಂದಾಯ ನಿರೀಕ್ಷಕ ರಾಘವೇಂದ್ರ, ಗ್ರಾಮ ಲೆಕ್ಕಾಧಿಕಾರಿ ವೀರೇಂದ್ರ ಪಾಟೀಲ, ಶಿಕ್ಷಕರಾದ ಪಾಂಡುರಂಗ ದೇಸಾಯಿ, ನಫೀಜ್ ಅಂಜುಮ್, ವೀಣಾ ಕುಲಕರ್ಣಿ ಸಾವಿತ್ರಿ, ಅನಿತಾ ಎನ್. ಪದ್ಮಾವತಿ ಉಪಸ್ಥಿತರಿದ್ದರು.





