ದೇವದುರ್ಗ | ಕಲ್ಮಲಾ-ತಿಂಥಣಿ ಎರಡು ಟೋಲ್ ಗೇಟ್‌ಗಳನ್ನು ವಿರೋಧಿಸಿ ಬೃಹತ್ ಪ್ರತಿಭಟನೆ. 

Date:

ದೇವದುರ್ಗ ವ್ಯಾಪ್ತಿಯ ಕಲ್ಮಲಾ – ತಿಂಥಿಣಿ ಹೋಗುವ ರಾಜ್ಯ ಹೆದ್ದಾರಿಯ ಮಧ್ಯೆ ಅವೈಜ್ಞಾನಿಕವಾಗಿ ಎರಡು ಟೋಲ್ ಗೇಟ್ ಗಳನ್ನೂ ನಿರ್ಮಿಸಲಾಗಿದೆ.ಟೋಲ್ ಗೇಟ್‌ಗಳನ್ನು ತೆರವು ಮಾಡುವಂತೆ ಆಗ್ರಹಿಸಿ ಅಂಬೇಡ್ಕರ್ ಸರ್ಕಲ್ ಬಳಿ ಟೋಲ್ ಗೇಟ್ ವಿರೋಧಿ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಬೃಹತ್  ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿ ಬಸವೇಶ್ವರ ಸರ್ಕಲ್ ಮೂಲಕ ಅಂಬೇಡ್ಕರ್ ಸರ್ಕಲ್ ಬಳಿ ಹೋಗಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು.

 ತಾಲೂಕಿನಲ್ಲಿ ಎರಡು ಕಡೆ ಜಾಲಹಳ್ಳಿ ಮತ್ತು ಕಾಕರಗಲ್ ಹತ್ತಿರ ಅವೈಜ್ಞಾನಿಕವಾಗಿ ಟೋಲ್ ಗೇಟ್ ನಿರ್ಮಿಸಿರುವುದು ಬಡವರ ಹಣವನ್ನು ಲೂಟಿ ಹೊಡೆಯುವುದಕ್ಕೆ ಸರ್ಕಾರ ಮುಂದಾಗಿದೆ.ಇಂತಹ ಕ್ರಮ ಸರಿ ಅಲ್ಲ ಕೂಡಲೇ ಟೋಲ್ ಗೇಟ್‌ ನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ಬಡ ರೈತರು ಬೆಳೆದ ಬೆಳೆಗೆ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ರೈತರಿಗೆ ಹಾಗೂ ಕೃಷಿ ಕೂಲಿಕಾರರ ಕುಟುಂಬಗಳಿಗೆ ಟೋಲ್ ಗೇಟ್ ಕರವಸೂಲಿ ಹೊರೆಯಾಗುತ್ತಿದ್ದು ಟೋಲ್ ಗೇಟ್‌ಗೆ ಹಣ ಪಾವತಿಸುವ ವಾಹನ ಮಾಲೀಕರು ಹಾಗೂ ಸರ್ಕಾರಿ ಬಸ್‌ಗಳಲ್ಲಿ ತೆರಿಗೆಯ ಹೊರೆಯನ್ನು ಪ್ರಯಾಣಿಕರಿಗೆ, ಬಡವರ  ಮೇಲೆ ಹಾಕಲಾಗುತ್ತದೆ. ಇದರಿಂದ ಸಾರ್ವಜನಿಕರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಕಳಪೆ ಕಾಮಗಾರಿ ; ಲೈಸನ್ಸ್ ರದ್ದತಿಗೆ ಆಗ್ರಹ

ತಾಲೂಕಿನಲ್ಲಿ ಯಾವುದೇ ದೊಡ್ಡ ಪ್ರಮಾಣದ. ಕೈಗಾರಿಕೆಗಳಾಗಲಿ, ದೊಡ್ಡ ಉದ್ದಿಮೆಗಳಾಗಲಿ ಇರುವುದಿಲ್ಲ, ಟ್ರಾನ್ಸಪೋರ್ಟ ಗೂಡ್ಸ್ ವಾಹನಗಳ ಓಡಾಟವು ತೀರಾ ಕಡಿಮೆ ಇರುತ್ತದೆ. ಕೇವಲ ತಾಲೂಕಿನ ಗ್ರಾಮೀಣ ಪ್ರದೇಶದ ಸ್ಥಳಿಯ ವಾಹನಗಳು ಮಾತ್ರ ಈ ರಸ್ತೆಯಲ್ಲಿ ಓಡಾಟ ಮಾಡಲಾಗುತ್ತದೆ. ಆದರೆ, ಕಲ್ಮಲಾ-ತಿಂಥಣಿ ಬ್ರಿಜ್ ರಾಜ್ಯ ಹೆದ್ದಾರಿ 73 ಕಿ.ಮೀ ವ್ಯಾಪ್ತಿಯಿದೆ. ಕೇವಲ 73 ಕಿ.ಮೀ ವ್ಯಾಪ್ತಿಯಲ್ಲೇ ಎರಡು ಟೋಲ್ ಗೇಟ್ ನಿರ್ಮಿಸಲಾಗಿದೆ. ಕೇವಲ 40 ಕಿ.ಮೀ ಅಂತರದಲ್ಲಿ ಎರಡೆರಡು ಟೋಲ್ ಗೇಟ್‌ ಗಳನ್ನು ಅಳವಡಿಸಿ ಅಕ್ರಮವಾಗಿ  ಹಣ ವಸೂಲಿ ಮಾಡುವ ಕುತಂತ್ರ ಅಡಗಿದೆ. ತಕ್ಷಣ ಟೋಲ್ ಗೇಟ್‌ಗಳನ್ನು ರದ್ದುಪಡಿಸಬೇಕು ಒಂದು ವೇಳೆ ಸರಕಾರ ಗಮನ ಹರಿಸದಿದ್ದರೆ ಇನ್ನಷ್ಟು ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು  ಎಚ್ಚರಿಸಿದರು.


ಈ ಸಂದರ್ಭದಲ್ಲಿ ಟೋಲ್ ಗೇಟ್ ವಿರೋಧಿ ಸಮಿತಿ ಗೌರವಾಧ್ಯಕ್ಷ ರಂಗಣ್ಣ ಕೋಲ್ಕರ್. ಅಧ್ಯಕ್ಷ ನರಸಣ್ಣ ನಾಯಕ. ಕಾರ್ಯದರ್ಶಿ ಮಹಾಲಿಂಗ ದೊಡ್ಡಮನಿ. ಸಾಬಣ್ಣ ಕಮಲದಿನ್ನಿ.ಶಿವನಗೌಡ ನಾಯಕ ವಂದಲಿ. ಕರವೇ ಅಧ್ಯಕ್ಷ ನಂದಪ್ಪ ಪಿ ಮಡ್ಡಿ. ದಲಿತ ಮುಖಂಡ ಮೌನೇಶ್ ಗಾಣದಾಳ. ರಮೇಶ್ ಬಾವಿಮನಿ. ಶಬ್ಬೀರ್ ಜಾಲಹಳ್ಳಿ. ಖುರ್ಷಿದ್ ಪಾಟೀಲ್, ಹೈದರ್. ಹನುಮಂತ ಮನ್ನಪೂರಿ. ವೆಂಕಟೇಶ್ ಚಲವಾದಿ. ಮಂಜು. ವೆಂಕನಗೌಡ ವಕೀಲರು. ಮತ್ತು ಇತರರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...